
ವರದಿ : ಸಿರಾಜುದ್ದೀನ್ ಬಂಗಾರ್ ಸಿರವಾರ
ರಾಯಚೂರು ಅ.1 : ರಾಯಚೂರಿನಿಂದ ಪ್ರಾರಂಭಗೊಂಡ ರಾಜ್ಯ ಹೆದ್ದಾರಿ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಚಾಲಕರಿಗೆ ತೀರಾ ತೊಂದರೆಯಾಗಿದೆ.
ರಾಯಚೂರಿನಿಂದ ಸಿರವಾರ ತಾಲೂಕಿನ ಪ್ರಯಾಣ ವಾಹನ ಚಾಲಕರಿಗೆ ಭಯ ಸೃಷ್ಟಿಸಿದೆ ಕಾರಣ ತಗ್ಗು-ದಿಣ್ಣೆಗಳು ತೀರಾ ಆಳವಾಗಿದ್ದು, ಇತ್ತೀಚಿನ ಸುರಿಯುವ ಮಳೆಗಂತೂ ರಸ್ತೆ ಸಂಪೂರ್ಣ ಹದಗಟ್ಟಿದೆ. ಇದೇ ರಸ್ತೆ ಮಾರ್ಗವಾಗಿ ತೆರಳು ಅದೆಷ್ಟು ಅಧಿಕಾರಿಗಳು ಸಮಸ್ಯೆ ಇದ್ದರು ತಮಗೆ ಸಂಭಂದವಿಲ್ಲ ಎಂಬಂತೆ ಮೌನವಹಿಸಿದ್ದು ಇಲ್ಲಿ ಪ್ರತ್ಯಕ್ಷವಾಗಿ ಕಾಣುತ್ತದೆ.
ಪ್ರತಿವರ್ಷ ಕೇವಲ ತ್ಯಾಪೆ ತುಂಬುವ ಕೆಲಸ ನಡೆಯುತ್ತಿದೆ ವಿನಃ ರಾಜ್ಯ ಹೆದ್ದಾರಿಗೆ ಅನ್ವಯವಾಗುವ ಅಭಿವೃದ್ಧಿ ಕಾಮಗಾರಿ ಮಾತ್ರ ಜರುಗಿತ್ತಿಲ್ಲ ಕಾರಣ ಇಲ್ಲಿ ಅಧಿಕಾರಿಗಳ ನಿರ್ಲಕ್ಷ ಹಾಗೂ ಕೆಲ ರಾಜಕೀಯ ಕೈವಾಡದಿಂದ ರಸ್ತೆ ಕಾಮಗಾರಿ ಜರುಗುತ್ತಿಲ್ಲ ಎಂಬುದು ಸಾರ್ವಜನಿಕರ ಹೇಳಿಕೆ ಯಾಗಿದೆ.
ಇನ್ನೂ ರಾಯಚೂರು ರಸ್ತೆ ತೀರಾ ಹದಗೆಟ್ಟಿರುವದರಿಂದ ಸಿರವಾರ ತಾಲೂಕಿನಿಂದ ಜಿಲ್ಲಾ ಆಸ್ಪತ್ರೆಗೆ ತೆರಳುವ 108 ವಾಹನಗಳು ಸರಿಯಾದ ಸಮಯಕ್ಕೆ ತಲುಪದೆ ಅವಘಡ ಸಂಭವಿಸುವ ವಾತಾವರಣ ಸೃಷ್ಟಿಯಾಗಿದೆ ಇನ್ನೂ ಗರ್ಭಿಣಿ ಹೆಣ್ಣುಮಕ್ಕಳ ಸ್ಥಿತಿ ಹೇಳತಿರದ್ದಾಗಿದೆ.
ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಬೆಕಾಗಿದೆ.