ಸಿರವಾರ

ಸಿರವಾರ : ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿ ಸರಳ ರೀತಿಯಲ್ಲಿ ಬಕ್ರೀದ್ ಹಬ್ಬ ಆಚರಣೆ

ವರದಿ : ಸಿರಾಜುದ್ದೀನ್ ಬಂಗಾರ್,ಸಂಪಾದಕರು ಕ-ಜ್ವಾ ನ್ಯೂಸ್

ಪರಸ್ಪರ ಅಪ್ಪಿಕೊಳ್ಳದೆ ಪವಿತ್ರ ಹಬ್ಬ ಬಕ್ರೀದ್ ಆಚರಿಸಿದ ಮುಸ್ಲಿಂ ಬಾಂಧವರು.ಮುಸ್ಲಿಂ ಬಾಂಧವರಿಗೆ ಬಹಳ‌ ಪವಿತ್ರವೂ ದೊಡ್ಡ ಹಬ್ಬವೂ ಆದ ಬಕ್ರೀದ್ ಆಚರಣೆಯಲ್ಲಿ ಮಸೀದಿಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡುವ ಬಗ್ಗೆ ಸರ್ಕಾರಗಳು ವ್ಯಾಪಕವಾದ ಚಿಂತನೆ ನಡೆಸಿ, ಸಮುದಾಯದ ನಾಯಕರೊಂಂದಿಗೆ ಸಮಾಲೋಚನೆ ನಡೆಸಿ ಅಂತಿಮವಾಗಿ ಹಸಿರು ನಿಶಾನೆ ತೋರಲಾಗಿತ್ತು.

ಸಿರವಾರ ಅ.1 : ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಆನಂತರ ಭಾಂಧ್ಯವ್ಯದ ಪ್ರತೀಕವಾದ ಪರಸ್ಪರ ಅಪ್ಪುಗೆ ಸಹಜವಾದ ಸಂಗತಿಗಳಾಗಿದ್ದವು.‌ ಆದರೆ ಈ ಬಾರಿ‌ ಕೊರೊನಾ ಕಾರಣಕ್ಕೆ ದೇಶದೆಲ್ಲೆಡೆ ಮುಸ್ಲಿಂ ಬಾಂಧವರು ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ ನಡೆಸಿದ್ದಾರೆ. ಮತ್ತು ಇದೇ ಮೊದಲ ಬಾರಿಗೆ ಪರಸ್ಪರ ಅಪ್ಪಿಕೊಳ್ಳದೆ ತಮ್ಮ ಪ್ರೀತಿ ಮತ್ತು ಶುಭಾಶಯವನ್ನು ವಿನಂತಿಮಾಡಿಕೊಂಡಿದ್ದಾರೆ.

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ “ಕ್ಲಾಸಿಕ್ ಕಂಪ್ಯೂಟರ್ ‌ತರಬೇತಿ‌ ಕೇಂದ್ರ” ಸಿರವಾರ.

ಮುಸ್ಲಿಂ ಬಾಂಧವರಿಗೆ ಬಹಳ‌ ಪವಿತ್ರವೂ ದೊಡ್ಡ ಹಬ್ಬವೂ ಆದ ಬಕ್ರೀದ್ ಆಚರಣೆಯಲ್ಲಿ ಮಸೀದಿಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡುವ ಬಗ್ಗೆ ಸರ್ಕಾರಗಳು ವ್ಯಾಪಕವಾದ ಚಿಂತನೆ ನಡೆಸಿ, ಸಮುದಾಯದ ನಾಯಕರೊಂಂದಿಗೆ ಸಮಾಲೋಚನೆ ನಡೆಸಿ ಅಂತಿಮವಾಗಿ ಹಸಿರು ನಿಶಾನೆ ತೋರಲಾಗಿತ್ತು.  ಸಾಮೂಹಿಕ ಪ್ರಾರ್ಥನೆಯಿಂದ COVID-19 ಹರಡಬಹುದು ಎಂಬ ಭಯ ವ್ಯಕ್ತವಾಗಿತ್ತು. ಆದರೆ ಸಮುದಾಯದ ನಾಯಕರು ‘ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಸೇರಿದಂತೆ ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಚಾಚೂತಪ್ಪದೆ ಪಾಲಿಸಲಾಗುವುದು’ ಎಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಅನುಮತಿ ಕೊಡಲಾಗಿತ್ತು.

ಇಂದು ಮುಸ್ಲಿಂ ಬಾಂಧವರು ಎಲ್ಲೆಡೆ ‘ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಸೇರಿದಂತೆ ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಚಾಚೂತಪ್ಪದೆ ಪಾಲಿಸಲಾಗಿದ್ದು’ ಬಕ್ರೀದ್ ಹಬ್ಬವನ್ನು ಯಶಸ್ವಿಯಾಗಿ ಆಚರಿಸಿದ್ದಾರೆ. ದೇಶದೆಲ್ಲೆಡೆ  ಪ್ರಾರ್ಥನೆಯ ಬಳಿಕ ಯಾರೊಬ್ಬರೂ ಇನ್ನೊಬ್ಬರನ್ನು ಅಪ್ಪಿಕೊಂಡ ದೃಶ್ಯವೂ ಕಂಡುಬಂದಿಲ್ಲ.

ಕಳೆದ ವರ್ಷ ಅತಿ ಸಂಭ್ರಮದಿಂದ ಆಚರಿಸಿದ ಹಬ್ಬಗಳು ಈ ‌ವರ್ಷ ಮಾತ್ರ ಸಂಭ್ರಮ ಸಡಗರವನ್ನು ಕೊರೋನಾ ಎಂಬ ಮಹಾಮಾರಿಯು ಕಿತ್ತುಕೊಂಡಿದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಕೊರೋನಾ ಹಾವಳಿಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ಸಿರವಾರ ಪಟ್ಟಣದ ಸಮಸ್ತ ಮುಸ್ಲಿಂ ಭಾಂದವರು ಕೊರೋನಾ ಮುಕ್ತಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

ನಮಾಜ ವೇಳೆಯಲ್ಲಿ‌ ಸರ್ಕಾರದ ಆದೇಶದಂತೆ ಸಾಮಾಜಿಕ ಅಂತರ ಹಾಗೂ ಕಡ್ಡಾಯ ಮಾಸ್ಕ ಮತ್ತು ನಮಾಜ ಬಳಿಕ

Continue

Related Articles

Leave a Reply

Your email address will not be published. Required fields are marked *

Back to top button
Close
Close