ಕರ್ನಾಟಕ ಸುದ್ದಿ

ಜಲಾಶಯಗಳ ಒಳ ಹರಿವು ಇಳಿಕೆ; ಆಣೆಕಟ್ಟುಗಳ ಇಂದಿನ ನೀರಿನ ಮಟ್ಟ ಹೀಗಿದೆ

ಸಂಪಾದಕೀಯ : ಸಿರಾಜುದ್ದೀನ್ ಬಂಗಾರ್ ಸಿರವಾರ

ಜೂನ್​, ಜುಲೈ ತಿಂಗಳಲ್ಲಿ ಉತ್ತಮ ಮಳೆ ಆದರೆ ಸಹಜವಾಗಿಯೇ  ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಳ್ಳುತ್ತವೆ. ಆದರೆ, ಓ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೇಸಿಗೆ ಸಮಯದಲ್ಲಿ ನೀರಿಗೆ ಹಾಹಾಕಾರ ಏಳುವುದು ಗ್ಯಾರಂಟಿ . ಏಕೆಂದರೆ ಈಗ ಅಂದುಕೊಂಡ ಮಟ್ಟಕ್ಕೆ ಜಲಾಶಯಗಳು ತುಂಬುತ್ತಿಲ್ಲ.

ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಇಷ್ಟೊತ್ತಿಗಾಗಲೇ ಸರಾಸರಿಯಾಗಿ 4.5 ರಿಂದ 5 ಸಾವಿರ ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಈವರೆಗೆ ಶೇ.60ರಷ್ಟು ಮಳೆಯಾಗಿಲ್ಲ. ಇನ್ನೂಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ನಿರೀಕ್ಷಿತ ಮಳೆಯಾಗಿಲ್ಲ.

ದಕ್ಷಿಣದಲ್ಲಿ ಹಾಸನ ಮೈಸೂರು ಸೇರಿದಂತೆ ಕಾವೇರಿ ಕೊಳ್ಳ ಪ್ರದೇಶಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ರೈತರಿಗೆ ಅನುಕೂಲ. ಆದರೆ, ಮೈಸೂರು ಹಾಸನಕ್ಕಿಂತ ಬೆಂಗಳೂರು ನಗರ ಪ್ರದೇಶದಲ್ಲೇ ಅಧಿಕ ಮಳೆಯಾಗಿರುವ ಕಾರಣ ಕಾವೇರಿ ಆಶ್ರಿತ ಅಣೆಕಟ್ಟೆಗಳು ಈ ವರ್ಷ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ-554.4 ಮೀಟರ್​
ಇಂದಿನ ಮಟ್ಟ- 539.78 ಮೀಟರ್​

ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿ
ಇಂದಿನ ನೀರು ಸಂಗ್ರಹ- 40.85 ಟಿಎಂಸಿ
ಇಂದಿನ ಒಳಹರಿವು- 6,556 ಕ್ಯೂಸೆಕ್ಸ್​
ಇಂದಿನ ಹೊರ ಹರಿವು-3159ಕ್ಯೂಸೆಕ್ಸ್​

ವರಾಹಿ ಜಲಾಶಯ
ಗರಿಷ್ಠ ಮಟ್ಟ-594.36 ಮೀಟರ್​
ಇಂದಿನ ಮಟ್ಟ- 576.40 ಮೀಟರ್​
ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
ಇಂದಿನ ನೀರು ಸಂಗ್ರಹ-6.56  ಟಿಎಂಸಿ
ಇಂದಿನ ಒಳಹರಿವು- 645 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 1,838 ಕ್ಯೂಸೆಕ್ಸ್​

ಹಾರಂಗಿ ಜಲಾಶಯ
ಗರಿಷ್ಠ ಮಟ್ಟ-871.42 ಮೀಟರ್​
ಇಂದಿನ ಮಟ್ಟ- 870.90 ಮೀಟರ್​
ಗರಿಷ್ಠ ಸಾಮರ್ಥ್ಯ- 8.50 ಟಿಎಂಸಿ
ಇಂದಿನ ನೀರು ಸಂಗ್ರಹ-7.91 ಟಿಎಂಸಿ
ಇಂದಿನ ಒಳಹರಿವು- 1,211 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 50ಕ್ಯೂಸೆಕ್ಸ್​

ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ-890.63 ಮೀಟರ್​
ಇಂದಿನ ಮಟ್ಟ- 882.78 ಮೀಟರ್​
ಗರಿಷ್ಠ ಸಾಮರ್ಥ್ಯ- 35.76 ಟಿಎಂಸಿ
ಇಂದಿನ ನೀರು ಸಂಗ್ರಹ- 17.56  ಟಿಎಂಸಿ
ಇಂದಿನ ಒಳಹರಿವು- 1,520ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 500 ಕ್ಯೂಸೆಕ್ಸ್​

ಕೆಆರ್​ಎಸ್​ ಜಲಾಶಯ​
ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ
ಇಂದಿನ ನೀರು ಸಂಗ್ರಹ- 28.49 ಟಿಎಂಸಿ
ಇಂದಿನ ಒಳಹರಿವು- 1,615 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 3090 ಕ್ಯೂಸೆಕ್ಸ್​

ಕಬಿನಿ ಜಲಾಶಯ
ಗರಿಷ್ಠ ಮಟ್ಟ-696.16 ಮೀಟರ್​
ಇಂದಿನ ಮಟ್ಟ- 694.01 ಮೀಟರ್​
ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ
ಇಂದಿನ ನೀರು ಸಂಗ್ರಹ-15.32 ಟಿಎಂಸಿ
ಇಂದಿನ ಒಳಹರಿವು- 1862 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 1633 ಕ್ಯೂಸೆಕ್ಸ್​

ತುಂಗಾ ಜಲಾಶಯ
ಗರಿಷ್ಠ ಮಟ್ಟ-497.74 ಮೀಟರ್​
ಇಂದಿನ ಮಟ್ಟ- 491.42  ಮೀಟರ್​
ಗರಿಷ್ಠ ಸಾಮರ್ಥ್ಯ- 103.16 ಟಿಎಂಸಿ
ಇಂದಿನ ನೀರು ಸಂಗ್ರಹ- 39.76 ಟಿಎಂಸಿ
ಇಂದಿನ ಒಳಹರಿವು- 6,647  ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 1439 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ-662.94 ಮೀಟರ್​
ಇಂದಿನ ಮಟ್ಟ- 652.16  ಮೀಟರ್​
ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ
ಇಂದಿನ ನೀರು ಸಂಗ್ರಹ- 26.80 ಟಿಎಂಸಿ
ಇಂದಿನ ಒಳಹರಿವು- 3,529 ​ಕ್ಯೂಸೆಕ್ಸ್
ಇಂದಿನ ಹೊರ ಹರಿವು- 139 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ-633.83 ಮೀಟರ್​
ಇಂದಿನ ಮಟ್ಟ- 628.17  ಮೀಟರ್​
ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ
ಇಂದಿನ ನೀರು ಸಂಗ್ರಹ- 17.30 ಟಿಎಂಸಿ
ಇಂದಿನ ಒಳಹರಿವು- 1113 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 164ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ-519.63ಮೀಟರ್​
ಇಂದಿನ ಮಟ್ಟ- 517.28 ಮೀಟರ್​
ಗರಿಷ್ಠ ಸಾಮರ್ಥ್ಯ- 119.26 ಟಿಎಂಸಿ
ಇಂದಿನ ನೀರು ಸಂಗ್ರಹ- 87.61 ಟಿಎಂಸಿ
ಇಂದಿನ ಒಳಹರಿವು- 11,179 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 6,746 ಕ್ಯೂಸೆಕ್ಸ್​

Continue

Related Articles

Leave a Reply

Your email address will not be published. Required fields are marked *

Back to top button
Close
Close