
ವರದಿ : ಸಿರಾಜುದ್ದೀನ್ ಬಂಗಾರ್, ಸಿರವಾರ
ರಾಯಚೂರು : ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೊಜನೆಯಡಿ ಕೋವಿಡ್ ಪಾಸಿಟಿವ್ ದೃಢಪಟ್ಟ ಸೋಂಕಿತರಿಗೆ ಉಚಿತ ಚಿಕಿತ್ಸೆಯು ಸರ್ಕಾರಿ ಆಸ್ಪತ್ರೆ ಮತ್ತು ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರ ದುರಗೇಶ ತಿಳಿಸಿದರು.
ನಗರಸಭೆ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪವರಕಾರ್ಮಿಕರಿಗೆ ಆಯುಷ್ಮಾನ್ ಭಾರತ ಾರೋಗ್ಯ ಕರ್ನಾಟಕ ಯೋಜನೆ ಕಾರ್ಡ ವಿತರಿಸಿ ಮಾತನಾಡಿದರು.
ಈ ಯೊಜನೆಡಿಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರು ವರ್ಷಕ್ಕೆ 5 ಲಕ್ಷವರೆಗೆ ಉಚಿತ ಚಿಕಿತ್ಸೆ ಪಡೆಯಬುದುದು ಮತ್ತು ಎಪಿಎಲ್ ಕಾರ್ಡದಾರರು ಚಿಕಿತ್ಸೆ ತಗಲುವ ಒಟ್ಟು ಮೊತ್ತದಲ್ಲಿ ಶೇ.30% ರಷ್ಟು ವಾರ್ಷಿಕ ಪ್ರತಿ ಕುಟುಂಬಕ್ಕೆ 1.5 ಲಕ್ಷದವರೆಗೆ ಉಚಿತವಾಗಿ ಸರ್ಕಾರಿ ಹಗೂ ನೊಮದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವಯನ್ನು ಪಡೆಯಬುದಾಗಿದೆ ಎಂದರು.
ಇ-ಗರ್ವನರ್ ಜಿಲ್ಲಾ ಸಂಯೋಜಕ ಉಮೇಶ ಬಿರಾದರ್, ಸದಾಶಿವಪ್ಪ ಹಾಗೂ ನಗರ ಸಭೆ ಸದಸ್ಯರು, ಸಿಬ್ಬಂಧಿಗಳು ಉಪಸ್ಥಿತರಿದ್ದರು.