
ವರದಿ : ಶಿವುಕುಮಾರ ವರದಿಗಾರರು ಕರ್ನಾಟಕ ಜ್ವಾಲೆ
ಮಾನ್ವಿ ಜು.07: ಮಾನವಿಯಲ್ಲಿ ನಡೆದ ತಹಶೀಲ್ದಾರರ ಕಾರ್ಯಾಲಯದಲ್ಲಿ ಮಾನ್ವಿ ತಾಲೂಕಿನಲ್ಲಿ ಕರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳ ತುರ್ತು ಸಭೆಯನ್ನು ಶಾಸಕರಾದ ವೆಂಕಟಪ್ಪ ನಾಯಕರವರು ಕರೆದು ಕರೋನಾ ವೈರಸ್ ಬಗ್ಗೆ ಮುಂಜಾಗ್ರತೆ ವಹಿಸಿಕೊಳ್ಳಬೇಕೆಂದು ಮತ್ತು ಕೊರೋನಾ ಸೋಂಕಿತರ ಬಗ್ಗೆ ಆರೋಗ್ಯ ಅಧಿಕಾರಿಗಳು ಮತ್ತು ದಂಡಾಧಿಕಾರಿಗಳು ಕಾಳಜಿವಹಿಸಿ ಸೂಕ್ತ ಚಿಕಿತ್ಸೆ ಕೊಡಬೇಕೆಂದು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಅಮರೇಶ ಬಿರಾದಾರ, ತಾಲ್ಲೂಕು ಅರೋಗ್ಯ ಅಧಿಕಾರಿಯಾದ ಚಂದ್ರಶೇಖರ್ ಹಿರೇಮಠ, ಸಿ ಪಿ ಐ ದತ್ತಾತ್ರೇಯ, ಪಿ ಎಸ್ ಐ ಸಿದ್ದರಾಮ, ಪುರಸಭೆ ಅಧಿಕಾರಿಯಾದ ವಿಜಯಲಕ್ಷ್ಮಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ವ್ಯಾಪಾರಸ್ಥರು ಉಪಸ್ಥಿತರಿದ್ದರು.