ಕರ್ನಾಟಕ ಸುದ್ದಿ

ಕೋವಿಡ್​ 19 ನಡುವೆ ಎಸ್​ಎಸ್​ಎಲ್​ಸಿ ಪರೀಕ್ಷೆ ಇಂದು ಯಶಸ್ವಿಯಾಗಿ ಮುಕ್ತಾಯ

ಸಂಪಾದಕೀಯ : ಸಿರಾಜುದ್ದೀನ್ ಬಂಗಾರ್ ಸಿರವಾರ

ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಪೂರ್ಣಗೊಂಡಿವೆ, ಇಂದು ಕೊನೆಯ ಪರೀಕ್ಷೆ ಬರೆಯಬೇಕಿದ್ದವರು 7,762,51 ಹಾಜರಾದವರು ಒಟ್ಟು 7,615,06 ಹಾಜರಾತಿ ಶೇ.98.10ರಷ್ಟಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ಅವರು ಹೇಳಿದರು.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಇದೇ ಪತ್ರಿಕೆಗೆ ಹಾಜರಾದವರು ಶೇ.98.76ರಷ್ಟಿತ್ತು. ಎಲ್ಲಾ ಮಕ್ಕಳಿಗೆ ಶುಭ ಕೋರುತ್ತೇನೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಅವರು ವಿಶ್​ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ವಿಶ್​ ಮಾಡಿದರು.

ಇನ್ನು ಕೇರಳ ರಾಜ್ಯ ಹೊರತುಪಡಿಸಿ ಎಲ್ಲಾ ರಾಜ್ಯಗಳು ಪರೀಕ್ಷೆ ರದ್ದು ಮಾಡಿದ್ದವು. ನಾವು ಪರೀಕ್ಷೆ ನಡೆಸಿ ಮುಗಿಸಿದ್ದೇವೆ. ಮೊದಮೊದಲು ವಿದ್ಯಾರ್ಥಿಗಳಿಗೆ ಒಂದು ಸಣ್ಣ ಅಳಲು ಇತ್ತು. ಪೋಷಕರಿಗೂ ಆತಂಕ ಇತ್ತು. ನಮಗೆ ಒಂದು ದೊಡ್ಡ ಸವಾಲಿತ್ತು. ಪರೀಕ್ಷೆಗಳ ಬಗ್ಗೆ ಬೇರೆ ಬೇರೆ ದನಿಗಳು ಬಂದಿದ್ದವು. ಸಿಎಂ ಅವರನ್ನು ಕೇಳಿದಾಗ ಕೂಡ ಗೋ ಅಹೇಡ್ ಎಂದಿದ್ದರು ಎಂದು ಅವರು ತಿಳಿಸಿದರು.

ಯಾವ ವಿದ್ಯಾರ್ಥಿಯ ಮನೆಯಲ್ಲಿ ಸೋಂಕು ಇರುತ್ತೋ ಆ ಮಗುವಿಗೆ ಆಗಸ್ಟ್​ನಲ್ಲಿ ಪೂರಕ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತೆ. ಡಿಸಿಗಳು, ಎಸ್​ಪಿಗಳು, ಸಿಇಒಗಳು, ಮಾಧ್ಯಮದವರು, ಶಾಸಕರ ಎಲ್ಲರ ಸಹಕಾರದಿಂದ ಪರೀಕ್ಷೆಗಳು ಯಶಸ್ವಿಯಾಗಿವೆ ಎಂದು ಅವರು ಇಲಾಖೆಯ ಸಹಕಾರವನ್ನು ಸ್ಮರಿಸಿದ್ದಾರೆ.

ಗದಗ್​ನಲ್ಲಿ ಆಟೋ ಚಾಲಕರ ಸಂಘ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷೆ ಕೇಂದ್ರಗಳಿಗೆ ಕರೆದುಕೊಂಡು ಹೋಗಿದ್ದರು. ಅವರಿಗೆ ಇಂದು ಸನ್ಮಾನ ಮಾಡಲಾಗಿದೆ. ಜೂನ್ 18ರ ಪಿಯುಸಿ ಪರೀಕ್ಷೆ ಮಾಡಿದ್ದೆವು. ಆ ಪರೀಕ್ಷೆಯಲ್ಲಿ ಕೆಲವು ಕಡೆ ಸಾಮಾಜಿಕ ಅಂತರ ಇಲ್ಲದೆ ಕೆಲವು ಸಮಸ್ಯೆಗಳಾಗಿದ್ದವು. ಹೀಗಾಗಿ ಎಸ್​ಎಸ್​ಎಲ್​ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ವ್ಯವಸ್ಥಿತವಾಗಿ ಮಾಡಿ ಮುಗಿಸಿದೆವು ಎಂದು ಹೇಳಿದರು.

ಇನ್ನು ಪರೀಕ್ಷೆ ಮುಗೀತು ಅಂತ ಎಲ್ಲೆಂದರಲ್ಲಿ ಓಡಾಡಬೇಡಿ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.ಎಸ್​ಎಸ್​ಎಲ್​ಸಿ ಫಲಿತಾಂಶ ಆಗಸ್ಟ್ ಮೊದಲ ವಾರದಲ್ಲಿ ಬರೋ ಸಾಧ್ಯತೆ ಇದೆ. ಪಿಯುಸಿ ಫಲಿತಾಂಶ ಜುಲೈ ಮೂರನೇ ವಾರ ಬರಬಹುದು. ಸಕಾರಣದಿಂದ ಗೈರು ಹಾಜರಾದವರು ನಿರಾಶರಾಗೋ ಅಗತ್ಯ ಇಲ್ಲ, ಫಲಿತಾಂಶದ ಬಳಿಕ ಪೂರಕ ಪರೀಕ್ಷೆಯಲ್ಲಿ ಬರೆಯಲು ಅವಕಾಶ ಕೊಡುತ್ತೇವೆ. ಎಲ್ಲರನ್ನೂ ಫ್ರೆಷ್ ಸ್ಟೂಡೆಂಟ್ಸ್​ ಎಂದೇ ಪರಿಗಣಸುತ್ತೇವೆ ಎಂದು ಅವರು ಪರೀಕ್ಷೆ ಬರೆಯದವರಿಗೆ ಭರವಸೆ ನೀಡಿದರು.

ಸ್ಯಾನಿಟೈಸರ್, ಮಾಸ್ಕ್​ಗೆ ನಮ್ಮ ಇಲಾಖೆಯಿಂದ ಏನೂ ಖರ್ಚಾಗಿಲ್ಲ, ಹೆಚ್ಚು ಕೊಠಡಿಗಳನ್ನು ಮಾತ್ರ ತೆಗೆದುಕೊಂಡಿದ್ದೆವು ಇದಕ್ಕೂ ಹಣ ಖರ್ಚು ಮಾಡಿಲ್ಲ, ಮಕ್ಕಳನ್ನು ಕರೆದುಕೊಂಡು ಬರೋಕೆ ಖಾಸಗಿ ಶಾಲೆಗಳ ವಾಹನಗಳನ್ನು ಬಳಸಿಕೊಂಡಿದ್ದೆವು. ಕೆಎಸ್​ಆರ್​​ಟಿಸಿ ಮೂರು ಸಾವಿರ ಬಸ್​ಗಳನ್ನು ಕಾಂಟ್ರಾಕ್ಟ್ ಮೇಲೆ ತೆಗೆದುಕೊಂಡಿದ್ದೆವು. ಇವುಗಳಿಗೆ ಫುಯಿಲ್ ಖರ್ಚು ಮಾತ್ರ ನಮ್ಮ ಇಲಾಖೆ ನೀಡುತ್ತೆ ಎಂದು ಸಚಿವ ಶಿಕ್ಷಣ ಸಚಿವ ಎಸ್​ ಸುರೇಶ್​ ಕುಮಾರ್ ಅವರು ಹೇಳಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close