ಅಂತರಾಷ್ಟ್ರೀಯ

ಕೊರೋನಾ ಶಂಕೆ : ಬಸ್ ನಿಂದ ತಳ್ಳಿದಕ್ಕೆ ಯುವಕಿ ಹೃದಯಾಘಾತದಿಂದ ಸಾವು!

ಸಂಪಾದಕೀಯ : ಸಿರಾಜುದ್ದೀನ್ ಬಂಗಾರ್ ಸಿರವಾರ

ಕೊರೋನಾ ಭೀತಿ ಯಾರೊಬ್ಬರನ್ನೂ ಬಿಟ್ಟಿಲ್ಲ. ಆದರೆ, ಈ ಭೀತಿಯಿಂದಾಗಿ ಮಾನವೀಯತೆಯನ್ನೇ ಮರೆತು ವರ್ತಿಸಿರುವ ಎಷ್ಟೋ ಘಟನೆಗಳು ನಮ್ಮ ನಡುವೆ ನಡೆಯುತ್ತಲೇ ಇವೆ. ಅದೇ ರೀತಿಯ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ನೊಯ್ಡಾದಿಂದ ಶಿಕೋಹಾಬಾದ್​ಗೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಕೊರೋನಾ ಇದೆ ಎಂಬ ಸಂದೇಹದಲ್ಲಿ ಬಸ್​ನಿಂದ ಕೆಳಗೆ ತಳ್ಳಲಾಗಿದೆ. ಈ ವೇಳೆ ಆಘಾತಕ್ಕೊಳಗಾದ ಆ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ!

ಈ ಘಟನೆ ನಡೆದಿರುವುದು ಜೂನ್ 15ರಂದು. ಹೃದಯಾಘಾತದಿಂದ ಯುವತಿ ಸಾವನ್ನಪ್ಪಿರುವುದಾಗಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಆ ಯುವತಿಯ ಪೋಷಕರು ಬಸ್​ನ ಚಾಲಕ ಮತ್ತು ಕಂಡಕ್ಟರ್ ಮೇಲೆ ಆರೋಪ ಮಾಡಿದ್ದು, ನಮ್ಮ ಮಗಳಿಗೆ ಕೊರೋನಾ ಇದೆ ಎಂದು ಬಸ್​ನಿಂದ ತಹೊರಹಾಕಿದ್ದರಿಂದಲೇ ಆಕೆಗೆ ಹೃದಯಾಘಾತವಾಗಿದೆ ಎಂದಿದ್ದಾರೆ.

19 ವರ್ಷದ ಅನ್ಶಿಕಾ ಎಂಬ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದಾಕೆ. ಬಸ್​ನಲ್ಲಿ ನೊಯ್ಡಾದಿಂದ ಶಿಕೋಹಾಬಾದ್​ಗೆ ತೆರಳುತ್ತಿದ್ದ ಆಕೆ ಬಿಸಿಲಿನಿಂದ ಬಸ್​ನಲ್ಲೇ ತಲೆಸುತ್ತಿ ಬಿದ್ದಿದ್ದಳು. ಇದರಿಂದ ಆಕೆ ಕೊರೋನಾ ಸೋಂಕಿನಿಂದಲೇ ತಲೆಸುತ್ತಿ ಬಿದ್ದಿದ್ದಾಳೆ ಎಂದುಕೊಂಡ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಆಕೆಯನ್ನು ಬಸ್​ನಿಂದ ಹೊರಗೆ ಹಾಕಿದ್ದರು. ಬಸ್​ನಿಂದ ಕೆಳಗೆ ಬಿದ್ದ ಆಕೆಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾಳೆ. ಆದರೆ, ಮಥುರಾ ಪೊಲೀಸರು ಈ ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ ಎಂದಿದ್ದಾರೆ.

ಪೋಸ್ಟ್​ ಮಾರ್ಟಂ ವರದಿ ಪ್ರಕಾರ, ಅನ್ಶಿಕಾ ನೈಸರ್ಗಿಕವಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಅನ್ಶಿಕಾಳ ಅಪ್ಪ ಸುಶೀಲ್ ಕುಮಾರ್ ದೆಹಲಿಯಲ್ಲಿ ಸೆಕ್ಯುರಿಟಿ ಗಾರ್ಟ್​ ಆಗಿ ಕೆಲಸ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕೊರೋನಾ ಕೇಸ್ ಜಾಸ್ತಿಯಾಗಿರುವುದರಿಂದ ಅವರು ತಮ್ಮ ಹೆಂಡತಿ ಮತ್ತು ಮಗಳನ್ನು ನೊಯ್ಡಾದಿಂದ ಊರಿಗೆ ಕಳುಹಿಸಲು ಬಸ್ ಹತ್ತಿಸಿದ್ದರು. ಆ ಬಸ್​ನಲ್ಲಿ ಅನ್ಶಿಕಾ ಕುಸಿದುಬಿದ್ದಿದ್ದಳು. ಇದರಿಂದ ಗಾಬರಿಗೊಂಡ ಕಂಡಕ್ಟರ್ ಮತ್ತು ಡ್ರೈವರ್ ಅವರನ್ನು ಮಧ್ಯ ದಾರಿಯಲ್ಲೇ ಬಸ್​ನಿಂದ ಹೊರಹಾಕಿದ್ದರು. ಬಸ್​ನಿಂದ ಕೆಳಗಿಳಿದ ಸ್ವಲ್ಪ ಹೊತ್ತಿನಲ್ಲೇ ಅನ್ಶಿಕಾ ಸಾವನ್ನಪ್ಪಿದ್ದಾಳೆ. ಬಸ್​ನಲ್ಲಿದ್ದವರೆಲ್ಲರೂ ನನ್ನ ಮಗಳಿಗೆ ಕೊರೋನಾ ಇದೆ ಎಂಬ ರೀತಿಯಲ್ಲೇ ವರ್ತಿಸಿದರು ಎಂದು ಅನ್ಶಿಕಾಳ ತಾಯಿ ಆರೋಪಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close