
ವರದಿ :ಸಿರಾಜುದ್ದೀನ್ ಬಂಗಾರ್
ರಾಯಚೂರು: ಶೈಕ್ಷಣಿಕ ವರ್ಷಾರಂಭಕ್ಕೆ ಇನ್ನೂ ದಿನ ನಿಗದಿಯಾಗದ ಕಾರಣ ಶಿಕ್ಷಣ ಇಲಾಖೆಗೆ ಪಠ್ಯಪುಸ್ತಕ ವಿತರಣೆ ತಲೆನೋವು ತಂದಿದೆ.
ಈಗಾಗಲೇ ಈ ವರ್ಷದ ಪಠ್ಯಪುಸ್ತಕ ಸರಬರಾಜಾಗಿದ್ದು, ಮಕ್ಕಳ ಮನೆಗೆ ತಲುಪಿಸಬೇಕೇ ಎಂಬ ಚಿಂತನೆ ನಡೆದಿದೆ.
ಪ್ರತೀ ವರ್ಷ ಜೂನ್ ಮುಗಿಯುವ ವೇಳೆಗೆ ಸರಕಾರ ಪಠ್ಯಪುಸ್ತಕಗಳನ್ನು ವಿತರಣೆ ಮಾಡುತ್ತಿತ್ತು.
ಈ ಬಾರಿ ಕೋವಿಡ್ 19 ಲಾಕ್ ಡೌನ್ ಪರಿಣಾಮ 2 ತಿಂಗಳು ತಡವಾಗಿ ಪಠ್ಯಪುಸ್ತಕಗಳು ಬಂದಿವೆ. ಈಗಾಗಲೇ ಶೇ.70ರಷ್ಟು ಪಠ್ಯಪುಸ್ತಕಗಳನ್ನು ರವಾನಿಸಲಾಗಿದೆ.
ಮನೆಗೆ ಏಕೆ ಪೂರೈಕೆ?
ಶಾಲಾರಂಭ ಯಾವತ್ತು ಎಂದು ಇನ್ನೂ ನಿರ್ಧಾರ ಆಗಿಲ್ಲ. ಸೆಪ್ಟಂಬರ್ವರೆಗೆ ಆರಂಭವಾಗುವ ಸಾಧ್ಯತೆ ಕಡಿಮೆ. ಮಕ್ಕಳು ಅಲ್ಲಿವರೆಗೆ ಮನೆಯಲ್ಲಿ ಓದಿಕೊಳ್ಳಲಿ ಎಂದು ಪುಸ್ತಕಗಳನ್ನು ಮನೆಗೆ ತಲುಪಿಸುವ ಚಿಂತನೆ ನಡೆಸಲಾಗುತ್ತಿದೆ.
ಖಾಸಗಿ ಶಾಲೆಗಳು ಹಣ ಪಾವತಿಸಿದ ಹಿನ್ನೆಲೆಯಲ್ಲಿ ಅವುಗಳಿಗೆ ಪುಸ್ತಕ ಪೂರೈಸಲಾಗುತ್ತಿದೆ. ಆದರೆ ಸರಕಾರಿ ಶಾಲೆಗಳಿಗೆ ಇನ್ನೂ ವಿತರಣೆ ಆರಂಭವಾಗಿಲ್ಲ.