
Posted By: Sirajuddin Bangar
Source: NS18
ದೊಡ್ಡಬಳ್ಳಾಪುರ(ಜೂ.25): ಸರ್ಕಾರ ನಡೆಸಿರುವ ಬೆಳೆ ಸಮೀಕ್ಷೆಯಲ್ಲಿನ ತಪ್ಪಿನಿಂದಾಗಿ ರೈತರಿಗೆ ಸರ್ಕಾರದ ಯಾವುದೇ ಪರಿಹಾರ ಹಾಗೂ ಸೌಲಭ್ಯಗಳು ದೊರೆಯದೆ ರೈತರ ಕಚೇರಿ ಅಲೆಯುವ ಸ್ಥಿತಿ ಎದುರಾಗಿದೆ. ಇದನ್ನು ಸರಿಪಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘಗಳು ನಗರದ ತೋಟಗಾರಿಕೆ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು ಏನು ಪ್ರಯೋಜನ ಆಗಿಲ್ಲ. ಅಧಿಕಾರಿಗಳು ಮಾತ್ರ ಸರಿ ಪಡಿಸುತ್ತೆವೆ ಎಂದು ಮಾತಿ ಹೇಳುದ್ರೂ ಕಾರ್ಯ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.
ಹಸಿರು ಮನೆ ಹೂವು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಡಿ.ಶ್ಯಾಮಸುಂದರ್, ರೈತರಾದ ಚನ್ನರಾಮಯ್ಯ, ಪ್ರತಿಯೊಬ್ಬ ರೈತರ ಜಮೀನಿಗೆ ಭೇಟಿ ನೀಡಿ ಜಿಪಿಆರ್ಎಸ್ ಮೂಲಕ ಜಮೀನಿನಲ್ಲಿ ಇರುವ ಬೆಳೆಯ ಪೋಟೋ ಸಮೇತ ಪಹಣಿಯಲ್ಲಿ ಬೆಳೆ ದಾಖಲಿಸಬೇಕು. ಆದರೆ ಕಂದಾಯ ಇಲಾಕೆ ಅಧಿಕಾರಿಗಳು ಬೆಳೆ ಸಮೀಕ್ಷೆಯ ದಾಖಲಾತಿಯನ್ನು ಕಚೇರಿಯಲ್ಲೇ ಕುಳಿತು ಯಾವುದೇ ಪೋಟೋಗಳನ್ನು ಹಾಕುವ ಮೂಲಕ ಪಹಣಿಯಲ್ಲಿ ಬೆಳೆ ದಾಖಲು ಮಾಡಿದ್ದಾರೆ ಎಂದರು.
ಹತ್ತು ವರ್ಷಗಳಿಂದ ಹಸಿರು ಮನೆ ನಿರ್ಮಾಣ ಮಾಡಿಕೊಂಡು 8 ಎಕರೆ ಪ್ರದೇಶದಲ್ಲಿ ಹೂವು ಬೆಳೆಯಲಾಗುತ್ತಿದೆ. ಆದರೆ 2019-2020ನೇ ಸಾಲಿನ ಪಹಣಿಯಲ್ಲಿ ಕೃಷಿ ಏತರ ಬೆಳೆ ಎಂದು ನಮೋದಿಸಲಾಗಿದೆ. ಇನ್ನೂ ಕೆಲಸವು ಜಮೀನುಗಳನ್ನು ಖಾಲಿ ಬೀಳು, ಜೋಳ, ಹೂ ತೋಟಕ್ಕೆ ರಾಗಿ ಅಂತೆಲ್ಲಾ ತಪ್ಪಾಗಿ ನಮೂದು ಮಾಡಿದ್ದಾರೆ. ಲಾಕ್ಡೌನ್ ಜಾರಿಯಿಂದಾಗಿ ಹೂವು ಬೆಳೆಗಾರರಿಗೆ ಆಗಿರುವ ನಷ್ಟವನ್ನು ತುಂಬಿಕೊಡುವ ಸಲುವಾಗಿ ಹೆಕ್ಟೇರ್ಗೆ 25 ಸಾವಿರ, ಮೆಕ್ಕೆಜೋಳ ಜೋಳ ರೈತರಿಗೆ 5 ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.
ಹೀಗೆ ಮುಂದುವರಿದ ಅವರು, ಈ ಪರಿಹಾರದ ಮೊತ್ತವನ್ನು ಪಡೆಯಲು ಪಹಣಿಯಲ್ಲಿ ಹೂವು ಬೆಳೆ ಸೇರಿದಂತೆ ಇತರೆ ಯಾವ ಬೆಳೆ ಇದೆ ಎನ್ನುವುದು ಇರಲೇಬೇಕು. ಇದು ಯಾರೋ ಒಬ್ಬ ರೈತರ ಸಮಸ್ಯೆ ಮಾತ್ರ ಆಗಿಲ್ಲ. ಈ ಹಿಂದೆ ಕೇಂದ್ರ ಸರ್ಕಾರ ಬೆಂಬಲ ಬೆಲೆ, ಬೆಳೆ ಯೋಜನೆಯಲ್ಲಿ ರಾಗಿ ಖರೀದಿಗು ಸಹ ಇದೇ ನಿಯಮ ಮಾಡಿದ್ದರಿಂದ ಬಹುತೇಕ ರೈತರು ರಾಗಿ ಮಾರಾಟ ಮಾಡಲು ತೊಂದರೆ ಅನುಭವಿಸುವಂತಾಗಿದೆ. ಈಗ ಹೂವು ಹಾಗೂ ಮುಸುಕಿನಜೋಳದ ಬೆಳೆ ಪರಿಹಾರ ಪಡೆಯಲು ಸಹ ಅಡ್ಡಿಯಾಗಿದೆ ಪಹಣಿ ಯಲ್ಲಿ ಸರಿಯಾದ ನಮೂದು ಇಲ್ಲವಾದ್ರೆ ಪರಿಹಾರ ಸಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರನ್ನು ಭೇಟಿ ಮಾಡಿದ್ದ ತಹಶೀಲ್ದಾರ್ ಟಿ.ಎಸ್.ಶಿವರಾಜ್, ಪಹಣಿಯಲ್ಲಿ ಬೆಳೆ ಸಮೀಕ್ಷೆ ವರದಿ ದಾಖಲಾಗಿರುವ ದೋಷವನ್ನು ಸರಿಪಡಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಒಂದೆರಡು ದಿನಗಳಲ್ಲಿ ನಿರ್ಧಾರಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದು, ರೈತರ ಹೊಲಗಳಿಗೆ ಭೇಟಿ ನೀಡಿ ತಪ್ಪು ಮಾಡಿದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.ರೈತರ ಸಮಸ್ಯೆ ಬೇಗ ಪರಿಹಾರಿಸಿ ಪರಿಹಾರ, ಮಳೆಗಾಲದ ಸವಲತ್ತು ಉಪಯುಕ್ತ ಮಾಡಿಕೊಡಲು ಶೀಘ್ರ ಕಾರ್ಯಪ್ರವೃತ್ತ ಆಗಲು ಸೂಚಿಸಿದ್ದಾರೆ.ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಇದೇ ಸಮಸ್ಯೆ ಎದುರಾಗಿ ರೈತರು ಪರಿಹಾರ ಪಡೆಯಲು ಪರದಾಡುವ ಸ್ಥಿತಿ ಎದುರಾಗಿದೆ, ಇನ್ನಾದ್ರೂ ಎಚ್ಚೆತ್ತು ಕ್ರಮ ಕೈಗೊಳ್ಳುವರ ಅಧಿಕಾರಿಗಳು ಕಾದು ನೋಡಬೇಕು.