
Posted by: Sirajuddin Bangar
Source:NS18
ಮೈಸೂರು(ಜೂ.19): 2014ರಲ್ಲಿ ಯೋಗವನ್ನ ವಿಶ್ವಯೋಗ ದಿನವನ್ನಾಗಿ ಘೋಷಣೆ ಮಾಡಿದ ನಂತರ ದೇಶಾದ್ಯಂತ ಯೋಗಕ್ಕೆ ಹೆಚ್ಚಿನ ಮನ್ನಣೆ ಸಿಕ್ಕಿತ್ತು. ಅದರಲ್ಲು ಯೋಗದ ಮೂಲ ಮೈಸೂರಿನಲ್ಲಿ ಪ್ರತಿ ವರ್ಷ ಯೋಗ ದಿನದಂತು ಸಾವಿರಾರು ಸಂಖ್ಯೆಯಲ್ಲಿ ಯೋಗಾಪಟುಗಳು ಒಂದೆಡೆ ಸೇರಿ ಸಾಮೂಹಿಕ ಯೋಗ ಪ್ರದರ್ಶನ ನೀಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಗಿನ್ನಿಸ್ ದಾಖಲೆಗೆ ಕೊಂಚದರಲ್ಲೆ ವಂಚಿತರಾಗುತ್ತಿರುವ ಮೈಸೂರು, ಸಾಮೂಹಿಕ ಯೋಗ ಪ್ರದರ್ಶನದಲ್ಲಿ ದೇಶದಲ್ಲೆ ಮುಂಚೂಣಿಯಲ್ಲಿದೆ.
ಸಂಸದ ಪ್ರತಾಪ್ ಸಿಂಹ ಈ ಬಿಜೆಪಿ ಸರ್ಕಾರದ ಅವಧಿಯೊಳಗೆ ಪ್ರಧಾನಿ ಮೋದಿ ಅವರನ್ನ ಯೋಗದಿನಕ್ಕೆ ಕರೆತಂದೆ ತರುತ್ತೇನೆ ಎಂದು ಪಣತೊಟ್ಟಿದ್ದಾರೆ. ಅಂತಹ ಮೈಸೂರಿನಲ್ಲಿ ಈ ಬಾರಿ ಸಾಮೂಹಿಕ ಯೋಗ ಪ್ರದರ್ಶನ ರದ್ದಾಗುವ ಎಲ್ಲಾ ಸಾಧ್ಯತೆ ಇದೆ. ಕೊರೋನಾ ಭೀತಿ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಈ ಬಾರಿ ವರ್ಚುವಲ್ ಯೋಗದ ಮೂಲಕ ಮನೆಯ ಟೆರಸ್ನಲ್ಲೆ ಯೋಗ ಮಾಡಲು ಕರೆ ನೀಡಲಾಗಿದೆ.
ಈ ಭಾನುವಾರ ಅಂತರರಾಷ್ಟ್ರೀಯ ಯೋಗಾ ದಿನಾಚರಣೆ. ಆದ್ರೆ ಕೊರೋನಾ ಆತಂಕದಲ್ಲಿ ಇದೀಗ ಸಾಮೂಹಿಕ ಯೋಗಾಕ್ಕೆ ಬ್ರೇಕ್ ಬಿದ್ದಿದ್ದು, ದಾಖಲೆ ಬರೆದಿದ್ದ ಮೈಸೂರಿಗರಿಗೆ ನಿರಾಸೆಯಾಗಿದೆ. ಈ ನಿರಾಸೆ ಮಧ್ಯೆಯೇ ಮೈಸೂರಿನ ಯೋಗ ಸಂಸ್ಥೆಗಳು ಗುಡ್ ನ್ಯೂಸ್ ನೀಡಿದ್ದು, ನಿಮ್ಮ ಮನೆಯ ಟೆರೆಸ್ಗಳ ಮೇಲೆ ಯೋಗ ಮಾಡಿ ವರ್ಚುವಲ್ ಯೋಗ ಮಾಡಲು ಕರೆ ನೀಡಲಾಗಿದೆ. ಸಾವಿರಾರು ಜನರು ಒಂದೆಡೆ ಸೇರಿ ಮಾಡುತ್ತಿದ್ದ ಯೋಗ ಈಗ ಟೇರಸ್ ಯೋಗಕ್ಕೆ ಸೀಮಿತವಾಗಲಿದೆ. ಈ ಬಗ್ಗೆ ಮೈಸೂರಿನ ಯೋಗ ಸಂಸ್ಥೆಗಳು ಟೆರೆಸ್ ಮಾಡಲು ಕರೆ ನೀಡಿವೆ.
ಯೋಗ ದಿನಾಚರಣೆ ಅಂದ್ರೆ ಸಾಕು ಮೈಸೂರಿಗರಿಗೆ ಒಂದು ರೀತಿಯ ಖುಷಿಯ ವಿಚಾರ. ಈ ಬಾರಿ ಎಲ್ಲ ದಾಖಲೆ ಸರಿಗಟ್ಟಿ ಮೈಸೂರು ಗಿನ್ನಿಸ್ ದಾಖಲೆ ಬರೆಯಲು ಸಹ ಸಜ್ಜಾಗಿತ್ತು. ಆದ್ರೆ ಕೊರೋನಾದ ಆರ್ಭಟದ ಮಧ್ಯೆ ಇದೀಗಾ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಬ್ರೇಕ್ ಬಿದ್ದಿದ್ದು, ಯೋಗ ಪಟುಗಳು, ಯೋಗಾಸಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬೇಸರದ ಸುದ್ದಿಯ ಮಧ್ಯೆಯೇ ಸಮಾಧಾನಕರ ವಿಚಾರವೊಂದು ಯೋಗಾಸಕ್ತರಿಗೆ ಸಿಕ್ಕಿದ್ದು, ಮನೆಯ ಟೇರಸ್ ಮೇಲೆಯೇ ವರ್ಚುವಲ್ ಯೋಗ ಮಾಡಲು ಯೋಗ ಸಂಸ್ಥೆಗಳು ಕರೆ ಕೊಟ್ಟಿದೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಈ ವರ್ಷ ಸಾಮೂಹಿಕ ಯೋಗ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ್ದು, ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯಂದು ವರ್ಚುಯಲ್ ಟೆರೇಸ್ ಯೋಗ ಮಾಡಲು ನಿರ್ಧಾರ ಮಾಡಲಾಗಿದೆ. ಜೂನ್ 21ರಂದು ನಡೆಯುವ ವಿಶ್ವ ಯೋಗ ದಿನಾಚರಣೆಯಂದು ಮನೆಯಲ್ಲಿ ಮತ್ತು ‘ಮನೆಯವರೊಂದಿಗೆ ಯೋಗ’ ಘೋಷಣೆಯಡಿ ಮನೆ ಮೇಲಿನ ಟೆರೇಸ್ನಲ್ಲಿ ಯೋಗ ಮಾಡಲು ಶಾಸಕ ರಾಮದಾಸ್ ಕರೆ ಕೊಟ್ಟಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಮಾಡಿದ ಶಾಸಕ ರಾಮದಾಸ್ ಈ ಭಾನುವಾರ ಬೆಳಗ್ಗೆ 7 ರಿಂದ 7:45 ರವರೆಗೆ ಯೋಗ ಮಾಡಬೇಕೆಂದು ಕರೆ ನೀಡಿದ್ದು, ಮೈಸೂರು ಯೋಗ ಫೆಡರೇಶನ್ ಮತ್ತು ಜಿ.ಎಸ್.ಎಸ್. ಯೋಗ ಸಂಸ್ಥೆಯ ಮುಖ್ಯಸ್ಥ ಶ್ರೀಹರಿ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ರವಿಶಂಕರ್, ಮೈಸೂರು ಯೋಗ ಒಕ್ಕೂಟದ ಬಿ. ಪಿ. ಮೂರ್ತಿ, ಮೈಸೂರು ಯೋಗ ಸ್ಪೋರ್ಟ್ಸ್ ಫೌಂಡೇಷನ್ ನ ಗಣೇಶ್ ಕುಮಾರ್, ಬಾಬಾ ರಾಮದೇವ್ ಪತಂಜಲಿ ಯೋಗ ಶಿಕ್ಷಣ ಸಮಿತಿ ಈ ಟೇರಸ್ ವರ್ಚ್ಯುಯಲ್ ಯೋಗವನ್ನ ಬೆಂಬಲಿಸಿದೆ. ಅಲ್ಲದೆ ಇದು ನಮ್ಮ ಯೋಗದಿನವನ್ನ ಪ್ರತಿನಿಧಿಸುವ ವಿಚಾರ ಅಂತಾರೆ ಶಾಸಕ ಎಸ್.ಎ.ರಾಮದಾಸ್.
ಒಟ್ಟಾರೆ ಸಾಮೂಹಿಕ ಯೋಗ ಇಲ್ಲ ಏನ್ ಮಾಡೋದು ಎಂದು ಬೇಸರ ವ್ಯಕ್ತಪಡಿಸಿದ್ದ ಯೋಗಾಸಕ್ತರಿಗೆ ಕೊಂಚ ನಿರಾಳವೆಂಬಂತೆ ಯೋಗ ಸಂಸ್ಥೆಗಳ ಸಹಕಾರದೊಂದಿಗೆ ಟೇರಸ್ ಯೋಗ ಪ್ರಾಯೋಗಿಕವಾಗಿ ಬರಲಿದೆ. ಕೊರೊನಾ ನಡುವೆ ಈ ವರ್ಚುವಲ್ ಯೋಗ ಯಶಸ್ವಿಯಾದರೆ, ಈ ಬಾರಿ ಕೊರೊನಾ ವಿರುದ್ದ ಯೋಗದ ಮೂಲಕವು ಹೋರಾಟ ಮಾಡಬಹುದಾಗಿದೆ. ಆ ಮೂಲಕ ಸಾಮೂಹಿಕ ಯೋಗಕ್ಕೆ ಬ್ರೇಕ್ ಹಾಕಿ ಅಲ್ಲಿಂದ ಕೊರೊನಾ ಹರಡೋದಕ್ಕು ಬ್ರೇಕ್ ಹಾಕಬಹುದಾಗಿದೆ.