Uncategorizedಸಿರವಾರ

ಪ್ರತಿಯೊಬ್ಬರು ಸಸಿ ನೆಟ್ಟು ಮಗುವಿನಂತೆ ಪೋಷಿಸಿ-ಆರ್ ವಿ ಎನ್

ವರದಿ :ಸಿರಾಜುದ್ದೀನ್ ಬಂಗಾರ್

ಸಿರವಾರ: ನೆಟ್ಟ ಸಸಿಗಳ ಲಾಲನೆ-ಪೋಷಣೆ ಜತೆಗೆ ಅವುಗಳನ್ನು ಸ್ವಂತ ಮಕ್ಕಳಂತೆ ಸ್ವೀಕರಿಸಿ ಬೆಳೆಸುವ ಮನೋಭಾವ ರೂಢಿಸಿಕೊಂಡಾಗ ಮಾತ್ರ ಪರಿಸರ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಎಂದು ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಇಂದು ಸಿರವಾರ ಪಟ್ಟಣದ ಬಿ.ಬಿ ಪಾಟೀಲ್ ಕಾಲೋನಿನಲ್ಲಿ “ಸಂಕಲ್ಪ ಸೇವಾ ಸಮಿತಿ” ಇವರ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಸಸಿ ನೆಟ್ಟು ನೀರು ಹಾಕುವ ಮುಖಾಂತರ ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ರಾಜ್ಯ ಜೆಡಿಎಸ್ ಯುವ ಮುಂಖಡರಾದ ಶ್ರೀ ರಾಜಾ ರಾಮಚಂದ್ರ ನಾಯಕ ಮಾತನಾಡಿ ಪರಿಸರ ಉಳಿದರೆ ದೇಶ ಉಳಿಯುತ್ತದೆ. ಇದು ಮನುಷ್ಯನ ಬದುಕಿಗೆ ಪಾಠ ಆಗಬೇಕು. ಸಕಲ ಜೀವ ಜಂತುಗಳಿಗೂ ಪರಿಸರ ಅಗತ್ಯವಾಗಿದೆ. ಸ್ವಾರ್ಥಕ್ಕಾಗಿ ಪ್ರತಿನಿತ್ಯ ಪರಿಸರ ವನ್ನು ಹಾಳು ಮಾಡುತ್ತಿದ್ದೇವೆ. ಭೂಮಿ, ನೀರು, ಗಾಳಿ ಎಲ್ಲವೂ ಕಲುಷಿತವಾಗುತ್ತಿದೆ ಎಂದು ತಿಳಿಸಿದರು.

ಪ್ರಚಾರಕ್ಕಾಗಿ ಗಿಡ ನೆಟ್ಟರೆ ಸಾಲದು: ತಹಸೀಲ್ದಾರ್ ಕೆ. ಶೃತಿ ಮಾತನಾಡಿ, ಪರಿ ಸರದ ಮೇಲೆ ಒತ್ತಡ ಹೆಚ್ಚಾಗುತ್ತಿರುವುದರಿಂದ ಅಸಮತೋಲನಕ್ಕೆ ಕಾರಣವಾಗಿದೆ. ಮನುಷ್ಯರು ಮರ, ಗಿಡ, ಮರಳು, ಗಣಿಗಾರಿಕೆ ಇತ್ಯಾದಿಗಳಿಂದ ಪರಿಸರದ ಮೇಲೆ ಒತ್ತಡ ಉಂಟು ಮಾಡುತ್ತಿದೆ. ಇದರಿಂದಾಗಿ ಅಸಮತೋಲನ ಉಂಟಾಗಿದೆ. ಪ್ರಚಾರಕ್ಕಾಗಿ ಗಿಡಗಳನ್ನು ನೆಟ್ಟರೆ ಸಾಲದು, ಅವು ಗಳ ಪೋಷಣೆ ಮಾಡಿ, ನಿಗದಿತ ಸಮಯದವರೆಗೆ ಬೆಳೆಸಬೇಕು. ಪ್ರಸ್ತುತ ಮುಂಗಾರು ಆರಂಭ ವಾಗಿರುವುದರಿಂದ ಈ ಅವಧಿಯಲ್ಲಿ ಗಿಡಗಳನ್ನು ನೆಟ್ಟರೆ ಅವು ಚೆನ್ನಾಗಿ ಬೆಳೆಯುತ್ತವೆ ಎಂದರು.

ಕೇವಲ ಒಂದು ದಿನ ಪರಿಸರ ದಿನಾಚರಣೆ ಮಾಡಿದರೆ ಸಾಲದು. ವರ್ಷಪೂರ್ತಿ ಪರಿಸರ ದಿನಾಚರಣೆ ನಡೆಸಬೇಕು. ಅರಣ್ಯ ನಾಶ ದಿಂದ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕುಡಿಯುವ ನೀರಿಗೂ ಪರಿತಪಿಸಬೇಕಾದ ದಿನಗಳು ಎದುರಾಗು ತ್ತಿವೆ. ಗಿಡಮರಗಳನ್ನು ಕಡಿದು ಕಾಡನ್ನು ಬರಿದಾಗಿಸುತ್ತಿರುವು ದರಿಂದ ಮಳೆ ಕೊರತೆಯಾಗಿದೆ. ಪರಿಸರ ಸಂರಕ್ಷಣೆ ಹಾಗೂ ಉತ್ತಮ ಮಳೆಗಾಗಿ ಪ್ರತಿದಿನವೂ ಸಸಿ ನೆಟ್ಟು ಅವುಗಳನ್ನು ಬೆಳೆಸಲು ಪಣತೊಡಬೇಕು. ಪರಿಸರವನ್ನು ಸಂರಕ್ಷಿಸಿ, ನೆಲ-ಜಲವನ್ನು ಉಳಿಸಬೇಕು ಜೆಡಿಎಸ್ ಮುಖಂಡರಾದ ಜಿ.ಲೋಕ ರೆಡ್ಡಿ ಅವರು ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ಜೆಡಿಎಸ್ ತಾಲೂಕು ಅದ್ಯಕ್ಷ ಮಲ್ಲಿಕಾರ್ಜುನ ಪಾಟೇಲ ಬಲ್ಲಟಿಗಿ, ನಾಗರಾಜ ಭೋಗಾವತಿ,ಸಿರವಾರ ಪಟ್ಟಣ ಪಂಚಾಯತ ಸದ್ಯಸರಾದ ಇಮಾಮ,ಚನ್ನಬಸವ ಗಡ್ಲ, ಅರಣ್ಯ ಅಧಿಕಾರಿಯಾದ ರಾಜೇಶ್ ನಾಯಕ,ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿಯಾದ ಮುನಿ ಸ್ವಾಮಿ, ಪಿ ಎಸ್ ಐ ಸುಜಾತ ನಾಯಕ, ಅರೋಗ್ಯ ಇಲಾಖೆಯ ಅಧಿಕಾರಿಯಾದ ಸುನೀಲ್ ಸರೋದ್, ನಾಯಕ ಹರವಿ,ಗ್ಯಾನಪ್ಪ ಸಿರವಾರ,ದಾನಪ್ಪ ಉಪಸ್ಥಿತರಿದ್ದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close