ಅಂತರಾಷ್ಟ್ರೀಯ

ತಮಿಳುನಾಡಿನಲ್ಲಿ ಕೋವಿಡ್​​-19: ಒಂದೇ ದಿನ 2,174 ಮಂದಿಗೆ ವೈರಸ್​​; 50 ಸಾವಿರ ದಾಟಿದ ಸೋಂಕಿತರ ಸಂಖ್ಯೆ

Posted by: Sirajuddin Bangar

Source:NS18

ಚೆನ್ನೈ(ಜೂ.18): ಮಾರಕ ಕೊರೋನಾ ವೈರಸ್​ ಆರ್ಭಟ ತಮಿಳುನಾಡಿನಲ್ಲಿ ಮುಂದುವರಿದಿದೆ. ನಿನ್ನೆ ಒಂದೇ ದಿನ 24 ಗಂಟೆಯಲ್ಲಿ 2,174 ಮಂದಿಗೆ ಕೋವಿಡ್​​-19 ವೈರಸ್​​ ಹೊಸದಾಗಿ ಬಂದಿದೆ. ಈ ಮೂಲಕ ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯೂ 50 ಸಾವಿರದ ಗಡಿ ದಾಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೆಲ್ತ್​​​ ಬುಲೆಟಿನ್​​ನಿಂದ ತಿಳಿದು ಬಂದಿದೆ.

ಸದ್ಯ, ತಮಿಳುನಾಡಿನಲ್ಲಿ ಒಟ್ಟು 50,193 ಕೋವಿಡ್​​-19 ಪ್ರಕರಣಗಳು ದಾಖಲಾಗಿದೆ. ಈ ಪೈಕಿ ಚೆನ್ನೈವೊಂದರಲ್ಲೇ ನಿನ್ನೆ 1,276 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಚೆನ್ನೈನಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯೂ 35,556ಕ್ಕೆ ಏರಿಕೆಯಾಗಿದೆ.

ಇನ್ನು, ಕಳೆದ 24 ಗಂಟೆಯಲ್ಲಿ ಮಾರಕ ಕೊರೋನಾಗೆ 49 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ತಮಿಳಿಗರ ನಾಡಿನಲ್ಲಿ ಮೃತರ ಸಂಖ್ಯೆಯೂ 576 ಆಗಿದೆ. ಇದರಲ್ಲಿ ಚೆನ್ನೈ ನಗರವೊಂದರಲ್ಲೇ ಈವರೆಗೂ ಕೊರೋನಾಗೆ 461 ಜನ ಅಸುನೀಗಿದ್ದಾರೆ.

ಇತ್ತೀಚೆಗೆ ತಮಿಳುನಾಡಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೇ ಕಾರಣಕ್ಕೆ ಮದ್ರಾಸ್ ಹೈಕೋರ್ಟ್ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಚಾಟಿ ಬೀಸಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಎಂ ಇ ಪಳನಿ ಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ತಮಿಳುನಾಡಿನಲ್ಲಿ ಕೋವಿಡ್​​-19 ಪ್ರಕರಣಗಳು ಸಂಖ್ಯೆ ಹೆಚ್ಚಿರುವ ಪ್ರಮುಖ ನಗರಗಳಲ್ಲಿ ಸಂಪೂರ್ಣ ಲಾಕ್​​ಡೌನ್ ಘೋಷಣೆ ಮಾಡಿದೆ.

ತಮಿಳುನಾಡು ರಾಜಧಾನಿ ಚೆನ್ನೈ, ತಿರುವಳ್ಳೂರ್, ಚೆಂಗಲ್ ಪೇಟ್ ಮತ್ತು ಕಾಂಚಿಪುರಂನಲ್ಲಿ ಸಂಪೂರ್ಣ ಲಾಕ್​​ಡೌನ್ ಘೋಷಣೆ ಮಾಡಲಾಗಿದೆ. ಹಾಗೆಯೇ ಸೋಂಕಿತರಿಲ್ಲದ ಪ್ರದೇಶಗಳಲ್ಲಿ ಲಾಕ್​​ಡೌನ್ ವಿನಾಯಿತಿ ನೀಡಲಾಗಿದೆ. ಜತೆಗೆ ತಮಿಳುನಾಡು ಸರ್ಕಾರ ಕೊರೋನಾ ವೈರಸ್​​​ ನಿಯಂತ್ರಣಕ್ಕೆ ತರಲು ಕೇಂದ್ರದಿಂದ 9 ಸಾವಿರ ರೂ. ಹಣ ನೀಡಿ ಎಂದು ಪಟ್ಟು ಹಿಡಿದಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close