ಕರ್ನಾಟಕ ಸುದ್ದಿ

ಏಳನೇ ತರಗತಿ ಅಲ್ಲ, ಐದನೇ ತರಗತಿಯವರೆಗೆ ಮಾತ್ರ ಆನ್​ಲೈನ್ ಕ್ಲಾಸ್ ರದ್ದು: ಸಚಿವ ಸುರೇಶ್ ಕುಮಾರ್

Posted by :Sirajuddin Bangar.

Source: NS18

ಬೆಂಗಳೂರು(ಜೂನ್ 11): ಏಳನೇ ತರಗತಿಯವರೆಗಿನ ಮಕ್ಕಳಿಗೆ ಆನ್​ಲೈನ್ ಕ್ಲಾಸ್ ಮಾಡುವಂತಿಲ್ಲ ಎಂದು ಸರ್ಕಾರ ನಿರ್ಧರಿಸಿದೆ ಎಂಬಂತಹ ಸುದ್ದಿಯನ್ನ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಳ್ಳಿಹಾಕಿದ್ದಾರೆ. ಪ್ರೀಸ್ಕೂಲ್ ಮತ್ತು ಒಂದರಿಂದ ಐದನೇ ತರಗತಿಯವರೆಗೆ ಆನ್​ಲೈನ್ ತರಗತಿಗಳನ್ನ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಇವತ್ತು ಟ್ವೀಟ್ ಮಾಡಿದ್ದಾರೆ.

ಏಳನೇ ತರಗತಿಯವರೆಗೆ ಆನ್​ಲೈನ್ ಪಾಠಕ್ಕೆ ಅವಕಾಶ ನೀಡಬಾರದು ಎಂಬುದು ಕೆಲ ಸಂಪುಟ ಸದಸ್ಯರ ಸಲಹೆ ಮಾತ್ರವಾಗಿದೆ. ಅನೌಪಚಾರಿಕವಾಗಿ ನಡೆದ ಚರ್ಚೆಯ ವೇಳೆ ಬಂದ ಸಲಹೆ ಇದಾಗಿದೆ. ಸಂಪುಟದಲ್ಲಿ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಮ್ಮ ಟ್ವೀಟ್​ನಲ್ಲಿ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ

Continue

Related Articles

Leave a Reply

Your email address will not be published. Required fields are marked *

Back to top button
Close
Close