ಅಂತರಾಷ್ಟ್ರೀಯ

ಇಂದು ರಾಮಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ

Posted By: Sirajuddin Bangar

Source: NS18

ಅಯೋಧ್ಯೆ(ಜೂ.10): ಶತಕಗಳಿಂದಲೂ ಉತ್ತರ ಪ್ರದೇಶದ ಬಾಬರಿ ಮಸೀದಿ-ರಾಮಜನ್ಮ ಭೂಮಿ ವಿವಾದ ಬಗೆಹರಿದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ಅಯೋಧ್ಯೆಯ ಬಾಬರಿ ಮಸೀದಿ ಇದ್ದ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಇಂದು ಮಂದಿರ ನಿರ್ಮಾಣದ ಗುದ್ದಲಿಪೂಜೆ ಕಾರ್ಯಕ್ರಮ ನೆರವೇರಲಿದೆ.

ಕೊರೋನಾ ಸಮಸ್ಯೆ ನಡುವೆಯು ಉತ್ತರ ಪ್ರದೇಶದ ಸರ್ಕಾರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದೆ. ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ’ ನಿತ್ಯಗೋಪಾಲ್ ದಾಸ್ ಅವರಿಂದ‌ ಶಿಲಾನ್ಯಾಸ ನೇರವೇರುವ ಸಾಧ್ಯತೆ ಇದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ ಅಡಿ ಬರುವ ಉಪ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ‌. ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿದೆ

ಬಾಬರಿ ಮಸೀದಿ-ರಾಮಜನ್ಮ ಭೂಮಿ ವಿವಾದದ ಟೈಮ್‍ಲೈನ್ ಈ ರೀತಿ ಇದೆ.

* 1528 – ಮೊಘಲ್ ಸಾಮ್ರಾಟ ಬಾಬರ್ ಕಮಾಂಡರ್ ಮಿರ್ ಬಾಕಿಯಿಂದ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣ

* 1885 – ವಿವಾದಗ್ರಸ್ತ ಜಾಗದಲ್ಲಿ ಗೋಪುರ ನಿರ್ಮಾಣಕ್ಕೆ ಅವಕಾಶ ಕೋರಿ ಮಹಾಂತ ರಘುಬೀರ್ ದಾಸ್‍ರಿಂದ ಫೈಜಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ, ತಿರಸ್ಕೃತ

* 1949 – ವಿವಾದಗ್ರಸ್ತ ಮಸೀದಿಯ ಕೇಂದ್ರ ಗುಮ್ಮಟದೊಳಗೆ ರಾಮಲಲ್ಲಾ ವಿಗ್ರಹಗಳ ಪ್ರತಿಷ್ಠಾಪನೆ* 1950 – ಈ ವಿಗ್ರಹಗಳ ಪೂಜೆಗೆ ಅನುಮತಿ ಕೋರಿ ಗೋಪಾಲ್ ಶೀಮ್ಲಾ, ರಾಮಚಂದ್ರ ದಾಸ್‍ರಿಂದ ಫೈಜಾಬಾದ್ ಕೋರ್ಟ್‍ಗೆ ಅರ್ಜಿ

* 1959 – ಜಾಗದ ಸ್ವಾಧೀನ ಕೋರಿ ನಿರ್ಮೋಹಿ ಅಖಾರದಿಂದ ಅರ್ಜಿ

* 1981 – ಸುನ್ನಿ ವಕ್ಫ್ ಮಂಡಳಿಯಿಂದಲೂ ಜಾಗದ ಒಡೆತನಕ್ಕಾಗಿ ಮನವಿ

* 1986 – ವಿವಾದಗ್ರಸ್ತ ಜಾಗದಲ್ಲಿ ಹಿಂದೂಗಳ ಪೂಜೆಗೆ ಅನುವು ಮಾಡಿಕೊಡುವಂತೆ ಕೋರ್ಟ್ ಆದೇಶ

* 1989 – ವಿವಾದಗ್ರಸ್ತ ಜಾಗದ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಅಲಹಬಾದ್ ಹೈಕೋರ್ಟ್ ಆದೇಶ

* 1990 – ದೇಶಾದ್ಯಂತ ಅಯೋಧ್ಯೆ ರಥ ಯಾತ್ರೆ ನಡೆಸಿದ ಎಲ್‍ಕೆ ಅಡ್ವಾಣಿ(1990ರ ಸೆಪ್ಟೆಂಬರ್‍ನಲ್ಲಿ ಎಲ್‍ಕೆ ಅಡ್ವಾಣಿ ರಥಯಾತ್ರೆ ಆರಂಭಿಸಿದರು. ದೇಶದ ಹಿಂದೂಗಳನ್ನು ಭಾವನಾತ್ಮಕವಾಗಿ, ರಾಜಕೀಯ ಒಗ್ಗೂಡಿಸಿದ್ರು.

* 1992 – ಡಿಸೆಂಬರ್ 6 – ಬಾಬ್ರಿ ಮಸೀದಿ ಧ್ವಂಸ* 2002 – ಜಾಗದ ಒಡೆತನ ಯಾರಿಗೆ ಸೇರಿದ್ದು ಎನ್ನುವ ವ್ಯಾಜ್ಯ ಕುರಿತು ಅಲಹಬಾದ್ ಹೈಕೋರ್ಟ್‍ನಲ್ಲಿ ವಿಚಾರಣೆ

* 2010 – ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮ್ ಲಲ್ಲಾ ಮೂರು ವಾರಸುದಾರರಿಗೆ ವಿವಾದಿತ ಜಾಗದ ಸಮಾನ ಹಂಚಿಕೆ ಮಾಡಿ ತೀರ್ಪು

* 2011 – ಅಯೋಧ್ಯೆ ಭೂ ವಿವಾದ ಕುರಿತ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ

* 2017 – ಪರಸ್ಪರ ಸಂಧಾನ ಸಮ್ಮತಿ ಮೂಲಕ ವ್ಯಾಜ್ಯ ಇತ್ಯರ್ಥ ಪಡಿಸಿಕೊಳ್ಳಲು ಸಿಜೆಐ ಜೆ.ಎಸ್ ಖೇಹರ್ ಸಲಹೆ

* 2017 – ಅಲಹಾಬಾದ್ ಹೈಕೋರ್ಟ್‍ನ 1994ರ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್‍ನಲ್ಲಿ ತ್ರಿಸದಸ್ಯ ಪೀಠ ರಚನೆ

*2019ರ ನವೆಂಬರ್ 19ರಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದಿಂದ 1993 ರಲ್ಲಿ ಬಾಬರಿ ಮಸೀದಿಯ ವಿವಾದಿತ ಜಾಗದ ಅಕ್ಕಪಕ್ಕ ಇರುವ 67 ಎಕರೆ ಭೂಮಿ ರಾಮ ಜನ್ಮ ಭೂಮಿ ವ್ಯಾಸ್‌ ಸಮಿತಿಗೆ ಸೇರಿದ್ದು ಎಂದು ತೀರ್ಪು ಪ್ರಕಟ

*  ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್‌ ರಚಿಸುವಂತೆ ಸೂಚನೆ*2020ರ ಫೆ. 5ರಂದು ಕೇಂದ್ರ ಸರ್ಕಾರದಿಂದ ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ ರಚನೆ

* ಚಂಪತ್‌ರಾಯ್‌ ಅವರನ್ನು ಟ್ರಸ್ಟ್‌ ಪ್ರಧಾನ ಕಾರ‍್ಯದರ್ಶಿಯಾಗಿ, ಸ್ವಾಮಿ ಗೋವಿಂದ ದೇವ್‌ ಗಿರಿ ಅವರನ್ನು ಖಜಾಂಚಿಯಾಗಿ ನೇಮಕ

* ಎಲ್‌ ಆಂಡ್‌ ಟಿ ಕಂಪನಿಗೆ ರಾಮಮಂದಿರ ನಿರ್ಮಾಣ ಮಾಡುವ ಗುತ್ತಿಗೆ ನೀಡಿರುವ ಟ್ರಸ್ಟ್*ಇಂದು* ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ

* ಕೊರೋನಾ ಸಮಸ್ಯೆ ನಡುವೆಯು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿರುವ ಉತ್ತರ ಪ್ರದೇಶ ಸರ್ಕಾರ

* ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ’ ನಿತ್ಯಗೋಪಾಲ್ ದಾಸ್ ಅವರಿಂದ‌ ಶಿಲಾನ್ಯಾಸ* ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ’ ಅಡಿ ಬರುವ ಉಪ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗಿ.* ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿಬಂದೋಬಸ್ತ್

Continue

Related Articles

Leave a Reply

Your email address will not be published. Required fields are marked *

Back to top button
Close
Close