
Posted by: Sirajuddin Bangar
Source: NS18
ಬೆಂಗಳೂರು(ಜೂನ್ 08): ಜೂನ್ 19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇವತ್ತು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಖರ್ಗೆ ಅವರಿಗೆ ಬಿ-ಫಾರ್ಮ್ ವಿತರಿಸಿದರು. ಈ ವೇಳೆ ನಾಮಪತ್ರಕ್ಕೆ ಠೇವಣಿಯಾಗಿ 10 ಸಾವಿರ ರೂಪಾಯಿಯನ್ನು ದಿನೇಶ್ ಗುಂಡೂರಾವ್ ಅವರೇ ನೀಡಲು ಮುಂದೆ ಬಂದ ಘಟನೆ ನಡೆಯಿತು.
ಬಿಫಾರ್ಮ್ ಪಡೆಯುವಾಗ ನಾಮಪತ್ರಕ್ಕೆ ಠೇವಣಿ ಹಣ ಯಾರು ಕೊಡುತ್ತೀರಾ ಎಂದು ಮಲ್ಲಿಕಾರ್ಜುನ ಖರ್ಗೆ ಕೇಳಿದರು. ಆಗ ಡಿಕೆಶಿ ತಮ್ಮ ಜೇಬಿಗೆ ಕೈಹಾಕಿದರು. ಅದರಲ್ಲಿ ಹಣ ಇರಲಿಲ್ಲ. ನಂತರ ಪಕ್ಕದಲ್ಲಿದ್ದ ದಿನೇಶ್ ಗುಂಡೂರಾವ್ ಬಳಿ 10 ಸಾವಿರ ರೂ ಇದೆಯಾ ಎಂದು ಡಿಕೆಶಿ ಕೇಳಿದರು. ಆಗ ನಾನು ಕೊಡುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.