ಸಿರವಾರ

ಅಂಗಡಿ ಮುಂಗಟ್ಟುಗಳಲ್ಲಿ, ಸಾರ್ವಜನಿಕರು ಮಾಸ್ಕ್, ಸಾಮಾಜಿಕ ಅಂತರ,ಸ್ಯಾನಿಟೈಜರ್ ಬಳಕೆ ಕಡ್ಡಾಯ; ಕೆ.ಮುನಿಸ್ವಾಮೀ

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ ಜ್ವಾಲೆ ಸಿರವಾರ

ಸಿರವಾರ ಜೂ.06 : ಕೊರೋನ ಸೊಂಕು ದಿನೆ-ದಿನೆ ವ್ಯಾಪಕವಾಗಿ ಹರಡುತ್ತೀರುವ ಹಿನ್ನಲೆಯಲ್ಲಿ ಈ ಸೊಂಕಿನಿಂದ ಪ್ರತಿಯೊಬ್ಬರು ಸುರಕ್ಷಿತರಾಗಿರಬೇಕು. ಇದಕ್ಕಾಗಿ ಸರ್ಕಾರ ಹೊರಡಿಸಿದ ಕೆಲ ನಿಯಮಗಳಾದ ಮಾಸ್ಕ್, ಸಾಮಾಜಿಕ ಅಂತರ,ಸ್ಯಾನಿಟೈಜರ ಬಳಕೆ ಕಡ್ಡಾಯ ಎಂದು ಸಿರವಾರ ಪ.ಪಂ ಮುಖ್ಯಾಧಿಕಾರಿಗಳಾದ ಕೆ.ಮುನಿಸ್ವಾಮೀಯವರು ಇಂದು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಸ್ಕ್ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಒಂದು ಮೀಟರ್‌ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸುವ ಆದೇಶವನ್ನು ಸರ್ಕಾರ ಜಾರಿಗೆ ತಂದಿದೆ.

ಕೋವಿಡ್-19 ಸಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಜರ್ ಬಳಸುವುದು ಸರ್ಕಾರದಿಂದ ಆದೇಶವಾಗಿರುವದರಿಂದ , ಮಾಸ್ಕ್ ಬಳಸದ ಜನರಿಗೆ ಪ್ರತಿ ದಿನ ಕಡ್ಡಾಯವಾಗಿ ಕನಿಷ್ಟ 100 ದಂಡ ವಿಧಿಸಲೇಬೇಕು ಎಂದು ಆದೇಶಿಸಲಾಗಿದೆ.

ಪ್ರತಿ ಅಂಗಡಿ ಮುಂಗಟ್ಟುಗಳಲ್ಲಿ ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಿದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ಅಂಗಡಿ ಮಾಲಿಕರು ಈ ನಿಯಮಗಳ ಪಾಲನೆ ಮಾಡಲೆಬೇಕು ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ

Continue

Related Articles

Leave a Reply

Your email address will not be published. Required fields are marked *

Back to top button
Close
Close