
— ಸಿರಾಜುದ್ದೀನ್ ಬಂಗಾರ್, ಪತ್ರಕರ್ತರು ಸಿರವಾರ
ಇಂದು ಬೆಳಿಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹೆಚ್ ವಿಶ್ವನಾಥ್ ಮಾತುಕತೆ ನಡೆಸಿದ್ದಾರೆ. ಈ ಹಿಂದೆ ಮಾತು ಕೊಟ್ಟಂತೆ ನನ್ನನ್ನು ಪರಿಷತ್ ಸದಸ್ಯನಾಗಿ ಮಾಡಿ, ಮಂತ್ರಿ ಮಾಡುವಂತೆ ಸಿಎಂಗೆ ಒತ್ತಡವೇರಿದ್ದಾರೆ.
ಬಿಜೆಪಿ ಸರ್ಕಾರ ರಚನೆಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಿಂದ ಹೊರ ಬಂದು ಉಪ ಚುನಾವಣೆಯಲ್ಲಿ ನಿಂತು ಸೋತ ಅಭ್ಯರ್ಥಿಗಳು ಇದೀಗ ಪರಿಷತ್ ಸ್ಥಾನಗಳಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಕಳೆದ ಉಪ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸೋತ ಹೆಚ್ ವಿಶ್ವನಾಥ್, ಹೊಸಕೋಟೆ ಕ್ಷೇತ್ರದಿಂದ ಎಂಟಿ ಬಿ ನಾಗರಾಜ್ ಪರಿಷತ್ ಗಾಗಿ ಸ್ಥಾನಕ್ಕಾಗಿ ಫೈಟ್ ನಡೆಸುತ್ತಿದ್ದಾರೆ. ಈ ನಡುವೆ ಮಾಜಿ ಶಾಸಕ ಆರ್ ಶಂಕರ್ ಕೂಡ ಪರಿಷತ್ ಸ್ಥಾನಕ್ಕಾಗಿ ಲಾಭಿ ಮಾಡುತ್ತಿದ್ದಾರೆ.
ಇವರೆಲ್ಲರೂ ಮೈತ್ರಿ ಸರ್ಕಾರ ಕೆಡವಿ, ಬಿಜೆಪಿ ಸರ್ಕಾರದ ರಚನೆಗೆ ಕಾರಣರಾದಂತವರು. ಹೆಚ್ ವಿಶ್ವನಾಥ್ ಹಾಗೂ ಎಂ ಟಿ ಬಿ ನಾಗರಾಜ್ ಚುನಾವಣೆಯಲ್ಲಿ ನಿಂತು ಸೋತರೇ, ಆರ್ ಶಂಕರ್ ಮಾತ್ರ ಚುನಾವಣೆಯಲ್ಲಿ ನಿಂತಿರಲಿಲ್ಲ. ಅವರು ಚುನಾವಣೆಗೆ ನಿಲ್ಲದೆ ಬೇರೆಯವರಿಗೆ ತನ್ನ ಕ್ಷೇತ್ರ ಬಿಟ್ಟು ಕೊಟ್ಟಿದ್ರು. ಇದೀಗ ಈ ಮೂವರು ಪರಿಷತ್ ಸ್ಥಾನಕ್ಕೆ ಸಿಎಂ ಬಳಿ ಪಟ್ಟು ಹಿಡಿದಿದ್ದಾರೆ.
ಇಂದು ಬೆಳಿಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹೆಚ್ ವಿಶ್ವನಾಥ್ ಮಾತುಕತೆ ನಡೆಸಿದ್ದಾರೆ. ಈ ಹಿಂದೆ ಮಾತು ಕೊಟ್ಟಂತೆ ನನ್ನನ್ನು ಪರಿಷತ್ ಸದಸ್ಯನಾಗಿ ಮಾಡಿ, ಮಂತ್ರಿ ಮಾಡುವಂತೆ ಸಿಎಂಗೆ ಒತ್ತಡವೇರಿದ್ದಾರೆ. ಇನ್ನೂ ಎಂಟಿಬಿ ನಾಗರಾಜ್ ಕೂಡ ತನ್ನನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ.
ಇವರ ಜೊತೆಗೆ ಆರ್ ಶಂಕರ್ ಕೂಡ ತನ್ನನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡುವಂತೆ ಸಿಎಂ ಬಳಿ ಪಟ್ಟು ಹಿಡಿದಿದ್ದಾರೆ. ಈ ನಡುವೆ ಮೂಲ ಬಿಜೆಪಿಗರು ಕೂಡ ಪರಿಷತ್ ಸ್ಥಾನಕ್ಕಾಗಿ ಲಾಭಿ ಮಾಡುತ್ತಿದ್ದಾರೆ. ಇತ್ತ ವಲಸಿಗ ಬಿಜೆಪಿಗರು ಫೈಟ್ ಗಿಳಿದಿರುವದರಿಂದ ಬಿಜೆಪಿಯಲ್ಲಿ ಪರಿಷತ್ ಸ್ಥಾನಕ್ಕಾಗಿ ಫೈಟ್ ಹೆಚ್ಚಾಗಿದೆ.