ಕರ್ನಾಟಕ ಸುದ್ದಿ

ಕೊರೋನಾ ಎಫೆಕ್ಟ್​: ಇದುವರೆಗೂ ಬಿಎಂಟಿಸಿಗೆ ಆದ ಕಲೆಕ್ಷನ್​​ ಎಷ್ಟು ಗೊತ್ತೇ?

–ಸಿರಾಜುದ್ದೀನ್ ಬಂಗಾರ್ ಸಂಪಾದಕರು ಕರ್ನಾಟಕ-ಜ್ವಾಲೆ ನ್ಯೂಸ್

ಜೂನ್ 1ರಿಂದ ಇದರ ಸಂಖ್ಯೆಯಿಂದ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಆದರೆ ಇವರೆಲ್ಲ ಮೊದಲು ಓಡಾಡಿದಂತೆ ಬಿಎಂಟಿಸಿ ಬಸ್ ಹತ್ತದೇ ಸ್ವಂತ ವಾಹನಗಳ ಮೊರೆ ಹೋಗಿದ್ದಾರೆ. ಪಬ್ಲಿಕ್ ಟ್ರಾನ್ಸ್ ಪೋರ್ಟ್ ಸೇಫಲ್ಲ ಎಂಬ ಭಯ ಜನರನ್ನು ಕಾಡುತ್ತಿದೆ.

ಲಾಕ್​​ಡೌನ್ ಸಡಲಿಕೆಯಾಗಿ ಎರಡು ವಾರ ಕಳೆದರೂ ಪ್ರಯಾಣಿಕರು ಮಾತ್ರ ಸಾರ್ವಜನಿಕ ಸಾರಿಗೆ ಬಸ್​ಗಳನ್ನು ನೆಚ್ಚಿಕೊಳ್ಳುತ್ತಿಲ್ಲ. ಬೆಂಗಳೂರಿನಲ್ಲಿ ಮೊದಲಿನಂತೆ ಜನಜೀವನ ಆರಂಭವಾಗುತ್ತಿದ್ದರೂ ಕೊರೊನೋ ಗುಮ್ಮ ಭಯದಿಂದ ತಮ್ಮ ಸ್ವಂತ ವಾಹನದಲ್ಲಿ ಓಡಾಟ ಹೆಚ್ಚಾಗಿದೆ. ಇದರಿಂದ ಬಿಎಂಟಿಸಿ ಬಸ್ ಗಳು ಖಾಲಿ ಖಾಲಿ ಓಡಾಡುತ್ತ ನಷ್ಟ ಅನುಭವಿಸುತ್ತಿವೆ.

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಲಾಕ್‌ಡೌನ್ ಸಡಲಿಕೆಯಾಗಿ ಜನರ ಓಡಾಟ ಹೆಚ್ಚಾದರೂ ಬಿಎಂಟಿಸಿ ಬಸ್‌ ನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿಲ್ಲ. ಕಳೆದೆರಡು ತಿಂಗಳಿನಿಂದ ಲಾಕ್‌ಡೌನ್‌ನಿಂದ ಬಿಎಂಟಿಸಿ ವಾಹನಗಳು ರೋಡಿಗಿಳಿದಿದ್ದಿಲ್ಲ. ಆದರೀಗ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿ ಎರಡು ವಾರ‌ ಕಳೆದಿದೆ.

ವಾರ ಕೇವಲ ಪಾಸ್ ಇದ್ದವರು ಓಡಾಡಬಹುದಿತ್ತು. 70 ರೂಪಾಯಿ ಕೊಟ್ಟು ಬಸ್ ನಲ್ಲಿ ಪ್ರಯಾಣದಿಂದ ಜನರು ಹಿಂದೆ ಸರಿದಿದ್ದಾರೆ. ಆನಂತರ ಟಿಕೆಟ್‌ ವ್ಯವಸ್ಥೆ ಮಾಡಿ ಮೂರುವರೆ ಸಾವಿರ ಬಸ್ ಗಳ ಸೇವೆ ಆರಂಭಿಸಿದರು. ಆದರೆ ಬಿಎಂಟಿಸಿ ನಿರೀಕ್ಷೆಯಂತೆ ಪ್ರಯಾಣಿಕರು ಬರುತ್ತಿಲ್ಲ. ಆದರೆ ಕಚೇರಿ, ಕಂಪನಿಗಳಿಗೆ ಸಿಬ್ಬಂದಿ, ವ್ಯಾಪಾರಿ, ಕಾರ್ಮಿಕರು ತಮ್ಮ ಸ್ವಂತ ಬೈಕ್, ಕಾರು, ಕಂಪನಿಗಳ‌ ವಾಹನ ಬಳಸುತ್ತಿದ್ದಾರೆ.

ಜೂನ್ 1ರಿಂದ ಇದರ ಸಂಖ್ಯೆಯಿಂದ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಆದರೆ ಇವರೆಲ್ಲ ಮೊದಲು ಓಡಾಡಿದಂತೆ ಬಿಎಂಟಿಸಿ ಬಸ್ ಹತ್ತದೇ ಸ್ವಂತ ವಾಹನಗಳ ಮೊರೆ ಹೋಗಿದ್ದಾರೆ. ಪಬ್ಲಿಕ್ ಟ್ರಾನ್ಸ್ ಪೋರ್ಟ್ ಸೇಫಲ್ಲ ಎಂಬ ಭಯ ಜನರನ್ನು ಕಾಡುತ್ತಿದೆ‌.

ಬಿಎಂಟಿಸಿ ಕಲೆಕ್ಷನ್ ಫುಲ್ ಡಲ್

ಕೊರೋನಾ ಮುಂಚೆ ಬಿಎಂಟಿಸಿ ದಿನವೊಂದಕ್ಕೆ ಮೂರು ಕೋಟಿ ಕಲೆಕ್ಷನ್ ಆಗುತ್ತಿತ್ತು. ಆರು ಸಾವಿರ ಬಸ್ ಗಳಲ್ಲಿ 3 ಕೋಟಿ ಕಲೆಕ್ಷನ್ ದಿನನಿತ್ಯ ಸರಾಸರಿ ಆಗುತ್ತಿತ್ತು. ಆದರೀಗ 3200 ಬಸ್ ಓಡಿಸಿದರೂ ದಿನವೊಂದಕ್ಕೆ 85 ಲಕ್ಷ ಮೀರಿಲ್ಲ. ಒಂದು ಕೋಟಿ ಕಲೆಕ್ಷನ್ ಸಹ ಆಗುತ್ತಿಲ್ಲ. ಬಸ್ ಗಿಂತ ಬೈಕ್, ಆಟೋ, ಕ್ಯಾಬ್ ಸೇಫ್ ಎಂಬ ಭಾವನೆ ಜನರಲ್ಲಿದೆ. ಲಾಕ್ ಡೌನ್ ಸಡಲಿಕೆಯಾದ್ರೂ ಭಾನುವಾರ ವೀಕೆಂಡ್ ನಲ್ಲಿ ಬಿಎಂಟಿಸಿ ಓಡಾಟವೂ ಅರ್ಧಕ್ಕರ್ದ ಕಡಿಮೆಯಾಗಿದೆ.

ಮೇ.28ರಂದು ಬಿಎಂಟಿಸಿ ಬಸ್ ನಲ್ಲಿ 5 ಲಕ್ಷ ಜನ ಪ್ರಯಾಣ ಮಾಡಿದ್ದು, ಅಂದು 78 ಲಕ್ಷ ಕಲೆಕ್ಷನ್ ಆಗಿದೆ. ಮೇ.29ರಂದು 5.23 ಲಕ್ಷ ಜನ ಪ್ರಯಾಣ  ಮಾಡಿದ್ದು, 81 ಲಕ್ಷ ಕಲೆಕ್ಷನ್ ಆಗಿದೆ. ಮೇ. 30ರಂದು 5.80 ಲಕ್ಷ ಜನ ಪ್ರಯಾಣ ಮಾಡಿದ್ದು, 85 ಲಕ್ಷ ಕಲೆಕ್ಷನ್ ಆಗಿದೆ. ಇನ್ನು ಮೇ. 31ರಂದು ಭಾನುವಾರ 2.98 ಲಕ್ಷ ಜನ ಪ್ರಯಾಣ ಮಾಡಿದ್ದು, 41 ಲಕ್ಷ ಕಲೆಕ್ಷನ್ ಆಗಿದೆ.

ಮೊದಲು ಬಿಎಂಟಿಸಿ ಬಸ್ ನಲ್ಲಿ ಓಡಾಡುತ್ತಿದ್ದೆವು. ಆದರೀಗ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಅಷ್ಟು ಸೇಫಲ್ಲ ಎನಿಸುತ್ತೆ. ಬೈಕ್​​ನಲ್ಲಿ ಓಡಾಡುತ್ತೇನೆ. ಅಗತ್ಯ ಬಿದ್ದಲ್ಲಿ ಮಾತ್ರ ಬಸ್​ನಲ್ಲಿ ಓಡಾಡುತ್ತೇನೆ ಎಂದು ರಾಜಾಜಿನಗರ ವ್ಯಾಪಾರಿ ಸಂಪತ್‌ರಾಜ್ ಹೇಳಿದರೆ, ಸದ್ಯ ಶಾಲಾಕಾಲೇಜು ಓಪನ್‌ ಇಲ್ಲ ಸರ್. ಹೊರಗಡೆ ಎಲ್ಲೂ ಹೆಚ್ಚಾಗಿ ಹೋಗೋದಿಲ್ಲ. ಅಗತ್ಯವಿದ್ದರೆ ಮಾತ್ರ ಫ್ರೆಂಡ್ಸ್ ಜೊತೆ ಬೈಕ್ ನಲ್ಲಿ ಓಡಾಡುತ್ತೇನೆ. ಮನೆಯಲ್ಲಿ ಬಸ್‌ ನಲ್ಲಿ ಓಡಾಡುವಾಗ ಹುಷಾರು ಎಂದೇಳಿತ್ತಾರೆ ಎಂದು ಬಸವೇಶ್ವರ ನಗರ ವಿದ್ಯಾರ್ಥಿ ವಿನುತ್ ಅಭಿಪ್ರಾಯಪಡುತ್ತಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close