ರಾಯಚೂರು ಜಿಲ್ಲೆ ಸುದ್ದಿ

ರಾಯಚೂರು: ಮುಂಗಾರು ಬಿತ್ತನೆಗೆ ಸಿದ್ದತೆ ; ರೈತರಿಗೆ ಬೀಜ, ಗೊಬ್ಬರದ್ದೆ ಚಿಂತೆ.!

–ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ

ಜಿಲ್ಲೆಯಲ್ಲಿ ಹತ್ತಿ, ತೊಗರಿ, ಭತ್ತ ಸೇರಿದಂತೆ ವಿವಿಧ ಬೆಳೆಗಳ ಬೆಳೆಯಲು ರೈತರು ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ,

ರಾಯಚೂರು(ಜೂ. 02): ಕೃಷ್ಣ ಹಾಗೂ ತುಂಗಭದ್ರಾ ನದಿಗಳ ಮಧ್ಯೆ ಇರುವ ಪ್ರದೇಶವಾದ ರಾಯಚೂರು ಜಿಲ್ಲೆಯು ಮುಂಗಾರು ಹಾಗೂ ಹಿಂಗಾರು ಬೆಳೆಗೆ ಸೂಕ್ತವಾದ ಫಲವತ್ತಾದ ಭೂಮಿಯನ್ನು ಹೊಂದಿದೆ. ಈ ಮಧ್ಯೆ ಜಿಲ್ಲೆಯಾದ್ಯಂತ  ಮಳೆಯಾಗುತ್ತಿದ್ದು, ರೈತರಲ್ಲಿ ಆಶಾದಾಯಕ ಭರವಸೆ ಮೂಡಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಗ್ರಾಮಗಳಿಗೆ ಮರಳಿದ ವಲಸೆ ಕಾರ್ಮಿಕರು ಈಗ ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈಗ ಮುಂಗಾರು ಬಿತ್ತನೆಗೆ ಸಿದ್ದವಾಗುತ್ತಿದ್ದಾರೆ.

ಸಾಮಾನ್ಯವಾಗಿ ಮೇ ಅಂತ್ಯ ಹಾಗು ಜೂನ್ ಆರಂಭದಲ್ಲಿ ಮುಂಗಾರು ಹಂಗಾಮು ಆರಂಭವಾಗಲಿದ್ದು, ಈ ಬಾರಿ ಮೇ ತಿಂಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ರಾಯಚೂರು ತಾಲೂಕು ಹೊರತು ಪಡಿಸಿ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ವಾಡಿಕೆಯಂತೆ 44 ಎಂ ಎಂ ಮಳೆಯಾಗುತ್ತಿತ್ತು, ಈ ವರ್ಷ 52 ಎಂ ಎಂ ಮಳೆಯಾಗಿದೆ, ಜೂನ್​​ ಒಂದರಂದು ವಾಡಿಕೆಯಂತೆ 2 ಎಂ ಎಂ ಮಳೆಯಾಗಬೇಕಿತ್ತು, ಆದರೆ, 9 ಎಂ ಎಂ ಮಳೆಯಾಗಿದ್ದು, ಈಗ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡುತ್ತಿರುವದರಿಂದ ಜಿಲ್ಲೆಯಲ್ಲಿ ಬರುವ ದಿನಗಳಲ್ಲಿ ಮಳೆಯಾಗಬಹುದು ಎಂಬ ನಿರೀಕ್ಷೆ ಇದೆ.

ಜಿಲ್ಲೆಯಲ್ಲಿ ಹತ್ತಿ, ತೊಗರಿ, ಭತ್ತ ಸೇರಿದಂತೆ ವಿವಿಧ ಬೆಳೆಗಳ ಬೆಳೆಯಲು ರೈತರು ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ, ಒಟ್ಟು ೩.೪೪ ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1.71 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. ಆದರೆ, ಈಗ ಜಿಲ್ಲೆಯ ಕೆಎಸ್​ಸಿಎಂಎಫ್ ನಲ್ಲಿ 7393 ಮೆಟ್ರಿಕ್ ಟನ್, ಖಾಸಗಿಯವರಲ್ಲಿ 73810 ಮೆಟ್ರಿಕ್ ಟನ್ ರಸಗೊಬ್ಬರ ಸ್ಟಾಕ್ ಇದೆ, ಆದರೆ, ಇನ್ನೂ 90 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಅವಶ್ಯವಿದೆ.

ಮುಂಗಾರು ಬಿತ್ತನೆಗೆ ತೊಂದರೆಯಾಗದಂತೆ ಸಕಾಲಕ್ಕೆ ಗೊಬ್ಬರ ಸರಬರಾಜಾಗುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಬಿದ್ ಎಂದು ಹೇಳಿದರು.

ಈಗ 38447 ಕ್ವಿಂಟಾಲ್ ಬೀಜದ ಬೇಡಿಕೆ ಇದ್ದು, ಈಗ 32385 ಕ್ವಿಂಟಾಲ್ ಬೀಜಗಳು ಲಭ್ಯ ಇವೆ. ಒಂದು ಎಕರೆ ಬಿತ್ತನೆ ಮಾಡಲು ಕನಿಷ್ಠ 4 ಸಾವಿರ ರೂಪಾಯಿ ರೈತನಿಗೆ ಅವಶ್ಯವಾಗಿದೆ, ಮಾರ್ಚ, ಎಪ್ರಿಲ್ ಹಾಗು ಮೇ ತಿಂಗಳಲ್ಲಿ ಲಾಕ್ ಡೌನ್ ಯಾಗಿದ್ದರಿಂದ ರೈತನಿಗೆ ದುಡಿಮೆ ಇಲ್ಲ, ಇದೇ ಸಂದರ್ಭದಲ್ಲಿ ಗುಳೇ ಹೋಗಿದ್ದ ರೈತರು ಸಹ ಲಾಕ್ ಡೌನ್ ಹಿನ್ನೆಲೆಯಲ್ಲಿ ವಾಪಸ್ಸಾಗಿದ್ದು ಈ ಮೂರು ತಿಂಗಳಲ್ಲಿ ಕೈ ಖಾಲಿಯಾಗಿದೆ.

ರೈತನಿಗೆ ಬೀಜ ಗೊಬ್ಬರ ಹಾಗು ಬಿತ್ತನೆ ಮಾಡಲು ಆರ್ಥಿಕ ಸಹಾಯ ಬೇಕಾಗಿದೆ, ಈ ಹಿಂದೆ 2008 ರಲ್ಲಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಿತ್ತನೆಗಾಗಿ ರೈತರಿಗೆ ಒಂದು ರೂಪಾಯಿ ಸಹಾಯಧನ ನೀಡಿದ್ದರು, ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ, ರೈತರು ಕೃಷಿ ಚಟುವಟಿಕೆಗಾಗಿ ಮತ್ತೆ ಸಹಾಯಧನ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close