ಅಂತರಾಷ್ಟ್ರೀಯ

ಬ್ರೇಕಿಂಗ್ ನ್ಯೂಸ್: ದೆಹಲಿಯಲ್ಲಿ ಕೊರೋನಾ ಅಟ್ಟಹಾಸ, ಹಾಸಿಗೆಗೆ ಪರದಾಟ, ಶವಸಂಸ್ಕಾರದ ಜಾಗಕ್ಕೆ ಹುಡುಕಾಟ

–ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಾಮಾರಿ ಕೊರೋನಾ ಸೋಂಕು ದಿನೇ ದಿನೇ ದುಪ್ಪಟ್ಟಾಗುತ್ತಲೇ ಇದೆ.‌ ಪರಿಣಾಮವಾಗಿ ಕೊರೋನಾ ರೋಗಿಗಳಿಗೆ ಹಾಸಿಗೆ ಇಲ್ಲದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕೊರೋನಾದಿಂದ ಸಾಯುವವರ ಶವಸಂಸ್ಕಾರ ಮಾಡುವುದಕ್ಕೂ ಜಾಗವಿಲ್ಲದಂತಾಗಿದೆ.

ಈ‌ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ಪೀಡಿತರಿಗೆ ಹೆಚ್ಚುವರಿ ಹಾಸಿಗೆಗಳನ್ನು ಸಿದ್ದಪಡಿಸಿಕೊಳ್ಳಿ ಮತ್ತು ಕೊರೋನಾದಿಂದ ಸಾಯುವವರ ಶವಸಂಸ್ಕಾರ ಮಾಡಲು ಜಾಗಗಳನ್ನು ಹುಡುಕಿ ಎಂದು‌ ಎಲ್ಲಾ ಜಿಲ್ಲಾಡಳಿತಗಳಿಗೆ  ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಪತ್ರ ಬರೆದಿದೆ. ಜೊತೆಗೆ ಈ ಕೆಲಸವನ್ನು ಆದ್ಯತೆ ಮೇರೆಗೆ ಮಾಡಿ ಎಂದು ಪತ್ರದಲ್ಲಿ ಒತ್ತಿ ಹೇಳಿದೆ.

ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ಪೀಡಿತರನ್ನು ಕ್ವಾರಂಟೈನ್ ಮಾಡಲು, ಚಿಕಿತ್ಸೆ ನೀಡಲು ಬ್ಯಾಂಕ್ವೆಟ್ ಹಾಲ್ ಗಳು, ಕ್ರೀಡಾಂಗಣಗಳು, ಸಮುದಾಯ ಭವನಗಳು, ಸಮುಚ್ಛಯ ಮಾದರಿ ಕಟ್ಟಡಗಳನ್ನು ಗುರುತಿಸಿ. ಅವುಗಳನ್ನು ಕೊರೋನಾ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಿ ಎಂದು ಜಿಲ್ಲಾಡಳಿಗಳಿಗೆ ಸೂಚನೆ ನೀಡಲಾಗಿದೆ.

ಇದಲ್ಲದೆ ಕೊರೋನಾದಿಂದ ಸತ್ತವರನ್ನು ಬಹಳ ಜಾಗರೂಕತೆಯಿಂದ ಶವಸಂಸ್ಕಾರ ಮಾಡಬೇಕಾಗಿರುವುದರಿಂದ ಸೂಕ್ತ ಜಾಗಗಳನ್ನು ಹುಡುಕಿ. ವಸತಿ ಪ್ರದೇಶದಿಂದ ದೂರ ಇರುವ ಜನನಿಬೀಡ ಜಾಗಗಳನ್ನು ಪತ್ತೆಹಚ್ಚಿ. ಅಲ್ಲಿ ಕೊರೋನಾದಿಂದ ಮಡಿದವರ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿ.‌ ದೆಹಲಿಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ಕ್ರಮಗಳು ಅನಿವಾರ್ಯ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಪತ್ರದಲ್ಲಿ‌ ತಿಳಿಸಿದೆ.

ನಿನ್ನೆ ಸಂಜೆವರೆಗೆ ದೆಹಲಿಯ ‌ಕೊರೋನಾ ಸೋಂಕು ಪೀಡಿತರ ಸಂಖ್ಯೆ 20,834ಕ್ಕೆ ಏರಿಕೆಯಾಗಿತ್ತು.‌ ಸಾವಿನ ಸಂಖ್ಯೆ 523ಕ್ಕೆ ಏರಿಕೆಯಾಗಿತ್ತು. ದೇಶದಲ್ಲಿ ಅತಿಹೆಚ್ಚು ಪ್ರಕರಣ ಇರುವ ರಾಜ್ಯಗಳ ಪೈಕಿ‌ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮೊದಲ ಮೂರು ಸ್ಥಾನದಲ್ಲಿವೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close