ಅಂತರಾಷ್ಟ್ರೀಯ

ಕೃಷಿಕರಿಗೆ ಅಚ್ಛೇ ದಿನ್ ; 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಶೇ. 83ರವರೆಗೆ ಹೆಚ್ಚಳ

Posted By: Sirajuddin Bangar

Source:NS18

ನವದೆಹಲಿ(ಜೂ. 01): ಪ್ರಕೃತಿ ವಿಕೋಪ ಮತ್ತು ಅಸಮರ್ಪಕ ಮಾರುಕಟ್ಟೆ ವ್ಯವಸ್ಥೆಯಿಂದ ಹೈರಾಣಗೊಂಡಿರುವ ರೈತರಿಗೆ ಕೇಂದ್ರ ಸರ್ಕಾರ ನೆರವಿನ ಹಸ್ತ ಚಾಚಿದೆ. ಮುಂಗಾರು ಬಿತ್ತನೆಯ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ನೀಡಿದ ಮಾಹಿತಿ ಪ್ರಕಾರ 14 ಬೆಳೆಗಳಿಗೆ ಶೇ. 50ರಿಂದ ಶೇ. 83ರಷ್ಟು ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ.

ಈಗಿನ ಸರ್ಕಾರಕ್ಕೆ 1 ವರ್ಷದ ಪೂರೈಸಿದ ನಂತರ ಮೊದಲ ಬಾರಿಗೆ ಪ್ರಧಾನಿ ಕರೆದ ಸಂಪುಟ ಸಭೆಯಲ್ಲಿ ರೈತರ ಬೆಳೆಗೆ ಬೆಂಬಲ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ವಲಯಗಳಲ್ಲಿ ವಿವಿಧ ಕ್ರಮಗಳಿಗೆ ಅನುಮೋದನೆ ನೀಡಲಾಗಿದೆ.

ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಈಗಿರುವ ಎಪಿಎಂಸಿ ಕಾಯ್ದೆ ಬದಲು ಹೊಸ ಕಾನೂನು ಜಾರಿಗೆ ತರಲು ಇದೇ ವೇಳೆ ಕೇಂದ್ರ ಸರ್ಕಾರ ಚಿಂತಿಸಿದೆ. ಹಾಗೆಯೇ, ರೈತರು ತಮ್ಮ ಉತ್ಪನ್ನಗಳನ್ನ ಬೇರೆ ರಾಜ್ಯಗಳಲ್ಲಿ ಮಾರುವ ಅವಕಾಶ ನೀಡಲೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಇದೇ ವೇಳೆ, ಇವತ್ತಿನ ಸಂಪುಟ ಸಭೆಯಲ್ಲಿ ಎಂಎಸ್​ಎಂಇ ವಲಯಗಳಿಗೆ ಪುಷ್ಟಿ ನೀಡುವ ಕ್ರಮಗಳಿಗೆ ಒಪ್ಪಿಗೆ ನೀಡಲಾಯಿತು. ಸಂಕಷ್ಟದಲ್ಲಿರುವ ಮಧ್ಯಮ ಮತ್ತು ಸಣ್ಣ ಉದ್ಯಮ (ಎಂಎಸ್​ಎಂಇ)ಗಳಿಗೆ 20 ಸಾವಿರ ಕೋಟಿ ರೂ ಸಬಾರ್ಡಿನೇಟ್ ಸಾಲವನ್ನು ಸಂಪುಟ ಸಭೆಯಲ್ಲಿ ಮಂಜೂರು ಮಾಡಲಾಗಿದೆ. ಇದರಿಂದ ದೇಶದ 2 ಲಕ್ಷ ಸಣ್ಣ ಉದ್ಯಮಗಳಿಗೆ ಲಾಭವಾಗುವ ನಿರೀಕ್ಷೆ ಇದೆ.

ಹಾಗೆಯೇ, ಎಂಎಸ್​ಎಂಇ ವಲಯದ ಮಾನದಂಡವನ್ನೂ ಸ್ವಲ್ಪ ಬದಲಿಸಲಾಗಿದೆ. ಮಧ್ಯಮ ಮಟ್ಟದ ಉದ್ಯಮಗಳ ಟರ್ನೋವರ್ ಮಿತಿಯನ್ನು 100 ಕೋಟಿ ಬದಲಿಗೆ 250 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ, 250 ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವ ಕಂಪನಿ ಎಂಎಸ್​ಎಂಇ ಕೆಟಗರಿಯಲ್ಲೇ ಉಳಿಯುತ್ತದೆ. ಅದನ್ನು ಬೃಹತ್ ಉದ್ಯಮ ವಲಯಕ್ಕೆ ಸೇರಿಸಲಾಗುವುದಿಲ್ಲ.

Continue

Related Articles

Leave a Reply

Your email address will not be published. Required fields are marked *

Back to top button
Close
Close