ಅಂತರಾಷ್ಟ್ರೀಯ

ಮಹಾಮಾರಿ ಕೊರೋನಾ ವಿರುದ್ಧದ ಹೋರಾಟವೇ ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆ; ಅಮಿತ್ ಶಾ

–ಸಿರಾಜುದ್ದೀನ್ ಬಂಗಾರ್,ಸಂಪಾದಕರು ಕರ್ನಾಟಕ-ಜ್ವಾಲೆ ಸಿರವಾರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಕೊರೋನಾ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ. ಇದನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ಧಾರೆ. ನೆಟ್​ವರ್ಕ್ 18 ಗ್ರೂಪ್​ನ ಮುಖ್ಯ ಸಂಪಾದಕ ರಾಹುಲ್ ಜೋಷಿ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಮಿತ್ ಶಾ ಅವರು ಕೋವಿಡ್ ವಿರುದ್ಧದ ಹೋರಾಟವನ್ನು ಮೋದಿ ಸರ್ಕಾರದ ಅತಿದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಅಡಿಯಲ್ಲಿ ಭಾರತ ಸಮರ್ಥವಾಗಿ ಹೋರಾಡುತ್ತಿದೆ. ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಈ ಹೋರಾಟದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಇಲ್ಲಿಯವರೆಗೆ ಪ್ರತಿ ಒಂದು ಲಕ್ಷ ಜನಸಂಖ್ಯೆಯಲ್ಲಿ ಸೋಂಕಿತರ ಪ್ರಮಾಣ 12.6 ಮಾತ್ರ ಇದೆ. ಚೇತರಿಕೆ ದರ ಕೂಡ ಶೇ. 42ರಷ್ಟಿದೆ. ಇದು ಅಮೆರಿಕ, ಬ್ರಜಿಲ್ ಮತ್ತಿತರ ದೇಶಗಳಿಗೆ ಹೋಲಿಸಿದರೆ ಬಹಳ ಒಳ್ಳೆಯ ಸಂಖ್ಯೆ ಎಂದು ಅಮಿತ್ ಶಾ ಹೇಳಿದ್ಧಾರೆ.

ಈ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ಸಂಪೂರ್ಣವಾಗಿ ಗೆಲುವು ಸಾಧಿಸಲಿದೆ ಎಂದೂ ಅಮಿತ್ ಶಾ ಈ ಸಂದರ್ಶನದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

ಇನ್ನು, ಈ ವಿಶೇಷ ಇಂಟರ್​ವ್ಯೂನಲ್ಲಿ ಅಮಿತ್ ಶಾ ಅವರು ಸರ್ಕಾರದ ಅಭಿವೃದ್ಧಿ ಸಾಧನೆಗಳ ವಿವರ ನೀಡಿದ್ಧಾರೆ. ಹಾಗೆಯೇ ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸಂಕಷ್ಟ ನಿವಾರಿಸಲು ಸರ್ಕಾರದ ಮಾಡಿದ ಪ್ರಯತ್ನಗಳನ್ನ ತಿಳಿಸಿದ್ದಾರೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close