ಕರ್ನಾಟಕ ಸುದ್ದಿ

ಬ್ರೆಕೀಂಗ್ ನ್ಯೂಸ್ ; ಲಾಕ್‌ಡೌನ್‌ ರಜೆಯಲ್ಲಿ ಸಹಪಾಠಿಗಳಿಗಾಗಿ ಒಂದು ಸಾವಿರ ಮಾಸ್ಕ್ ಸಿದ್ದಪಡಿಸಿದ ವಿದ್ಯಾರ್ಥಿನಿ..!

Posted By: Sirajuddin Bangar

Source: NS18

ಬೆಳಗಾವಿ (ಜೂನ್‌ 01); ಲಾಕ್‌ಡೌನ್ ರಜೆಯ ಸಂದರ್ಭದಲ್ಲಿ ಬಹುತೇಕ ವಿದ್ಯಾರ್ಥಿಗಳು ಕೇರಮ್, ಚೇಸ್ ಹಾಗೂ ಲೊಡೊ ಗೆಮ್ ನಲ್ಲಿ ಬ್ಯೂಸಿ ಆಗಿದ್ದಾರೆ. ಆದರೇ ಬೆಳಗಾವಿಯ ವಿದ್ಯಾರ್ಥಿನಿಯೊಬ್ಬಳು ಮಾತ್ರ ಈ ಸಂದರ್ಭದಲ್ಲಿ ಸಮಾಜಿಕ ಕೆಲಸ ಮಾಡುವ ಮೂಲಕ ಇದೀಗ ಎಲ್ಲರ ಶ್ಲಾಘನೆಗೆ ಕಾರಣವಾಗಿದ್ದಾಳೆ. ಲಾಕ್‌ಡೌನ್‌ ರಜೆಯನ್ನು ಉತ್ತಮ ಕಾರ್ಯಕ್ಕೆ ಬಳಸಿಕೊಳ್ಳಲು ಮುಂದಾಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಗಳಿಗಾಗಿ ಬರೋಬ್ಬರಿ ಒಂದು ಸಾವಿರ ಮಾಸ್ಕ್ ಸಿದ್ದಪಿಡಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.

ಬೆಳಗಾವಿಯ ವಡವಾವಿಯ ನಿವಾಸಿಯಾದ ಶ್ರೇಯಾ ಸವಾಶೇರಿ ಎಲ್ಲರ ಮೆಚ್ಚುಗೆ ಪಾತ್ರವಾಗಿರೋ ವಿದ್ಯಾರ್ಥಿನಿ. ಲಾಕ್ ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿನಿ ಸಮಯ ವ್ಯರ್ಥ ಮಾಡಿಲ್ಲ. ಬದಲಾಗಿ ಸಿಕ್ಕ ಸಮಯವನ್ನು ಸೂಕ್ತವಾಗಿ ಬಳಸಿಕೊಂಡು   ಒಂದು ಸಾವಿರ ಮಾಸ್ಕ್ ಸಿದ್ದ ಪಡಿಸಿದ್ದಾಳೆ.

ತಾನೇ ಸ್ವತಃ ಎಲ್ಲ ಮಾಸ್ಕ್ ಗಳನ್ನು ಟೈಲರಿಂಗ್ ಯಂತ್ರದಲ್ಲಿ ಹೊಲಿಗೆ ಹಾಕುವ ಮೂಲಕ ಗಮನ ಸೆಳೆದಿದ್ದಾಳೆ. ಅಭಿನಯ ಸ್ಪರ್ಧೆಯಲ್ಲಿ ಬಂದಿರೋ 8 ಸಾವಿರ ರೂಪಾಯಿ ಹಣವನ್ನು ಬಟ್ಟೆ, ದಾರಕ್ಕಾಗಿ ಖರ್ಚು ಮಾಡಿದ್ದಾಳೆ. ಹೀಗೆ ಸಿದ್ದವಾಗಿರೋ ಮಾಸ್ಕ್ ಗಳನ್ನು ಮುಂಬವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆಯಲ್ಲಿ ಸಹ ಪಾಠಿಗಳಿಗೆ ನೀಡಲು ತಿರ್ಮಾನಿಸಿದ್ದಾಳೆ.

ಪುತ್ರಿಯ ಯೋಚನೆಗೆ ಪೋಷಕರು ಸಹ ಸಾಥ್ ನೀಡಿದ್ದು, ಮಾಸ್ಕ್ ಸಿದ್ಧಪಡಿಸಲು ಸಹಕಾರ ನೀಡಿದ್ದಾರೆ. ಜತೆಗೆ ಬೆಳಗಾವಿ ಜಿಲ್ಲೆಯಲ್ಲಿ ಅಸಾಧಾರಣ ವಿದ್ಯಾರ್ಥಿ ಎಂದು ಬಿರುದು ಪಡೆದಿದ್ದ ಶ್ರೇಯಾ ಸವಾಸೇರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 10 ಸಾವಿರ ರೂಪಾಯಿ ಬಹುಮಾನ ನೀಡಲಾಗಿತ್ತು. ಈ ಹಣವನ್ನು ಸಿಎಂ ಪರಿಹಾರ ನಿಧಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮೂಲಕ ನೀಡಲಾಗಿದೆ.

ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಶ್ರೇಯಾಗೆ ನೃತ್ಯ, ಗಾಯನ, ಭಾಷಣ, ಜಾನಪದ ಗೀತೆಗಳ ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳು ಬಂದಿದೆ. ಬಹುಮಾನ ರೂಪದಲ್ಲಿ ಬಂದಿರುವ ಹಣವನ್ನು ಅವರು ಸಮಾಜಮುಖಿ ಕಾರ್ಯಗಳಿಗೆ ಶ್ರೇಯಾ ಬಳಕೆ ಮಾಡುತ್ತಿದ್ದಾರೆ. ಜತೆಗೆ ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತದಾನದ ಬಗ್ಗೆಯೂ ಈಕೆ ಜಾಗೃತಿ ಮೂಡಿಸುವ ಮೂಲಕ ಜಿಲ್ಲೆಯಲ್ಲಿ ಮನೆಮಾತಾಗಿದ್ದಳು.

ವಿದ್ಯಾರ್ಥಿನಿ ಶ್ರೇಯಾ ಸಮಾಜಮುಖಿ ಕೆಲಸಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಸುರೇಶ ಅಂಗಡಿ,  ಎಂ ಎಲ್ ಸಿ ಮಹಾಂತೇಶ ಕವಠಗಿಮಠ ಸೇರಿ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿನಿ ಶ್ರೇಯಾ ಕೆಲಸಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close