ಅಂತರಾಷ್ಟ್ರೀಯ

ನಾಸಾಗೆ ಕೋವಿಡ್-19 ವೆಂಟಿಲೇಟರ್ ತಯಾರಿಸುತ್ತಿರುವ ಬೆಂಗಳೂರಿನ ಸಂಸ್ಥೆ

ಮಾರಕ ಕೊರೋನಾ ವೈರಸ್​ ಬಿಸಿ ಅಮೇರಿಕಾದ ನಾಸಾಗೂ ತಟ್ಟಿದೆ. ಈ ಸೋಂಕಿನ ವಿರುದ್ಧ ಹೋರಾಡಲು ವಿಶಿಷ್ಟವಾದ ಕೋವಿಡ್-19 ವೆಂಟಿಲೇಟರ್ ಡಿಸೈನ್ ಮಾಡಿರುವ ನಾಸಾ ಈಗ​, ಇದರ ತಯಾರಿಕೆಯ ಜವಾಬ್ದಾರಿಯನ್ನು ಬೆಂಗಳೂರಿನ ಸಂಸ್ಥೆಯೊಂದಕ್ಕೆ ನೀಡಿದೆ.

ಹೌದು, ನಾಸಾ ದೇಶದ ಒಟ್ಟು 3 ಸಂಸ್ಥೆಗಳಿಗೆ ಈ ಜವಾಬ್ದಾರಿ ನೀಡಿದೆ. ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜಿಸ್ ನಾಸಾಗಾಗಿ ಕೋವಿಡ್ ವೆಂಟಿಲೇಟರ್ ತಯಾರಿಸುತ್ತಿದೆ. ನಾಸಾದ ಜೆಟ್ ಪ್ರಪಲ್ಶನ್ ಲ್ಯಾಬ್​​ನಲ್ಲಿ ಇದರ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ.

ವಿಶ್ವದಾದ್ಯಂತ 21 ಸಂಸ್ಥೆಗಳಿಗೆ ನಾಸಾ ಈ ವಿಶಿಷ್ಟ ವೆಂಟಿಲೇಟರ್ ತಯಾರಿಕಾ ಜವಾಬ್ದಾರಿ ನೀಡಿದೆ .ಭಾರತ, ಮೆಕ್ಸಿಕೊ, ಬ್ರೆಜಿಲ್, ಮಲೇಷಿಯಾ ಮತ್ತು ಯುಎಇಯ ಸಂಸ್ಥೆಗಳು ನಾಸಾಗೆ ವೆಂಟಿಲೇಟರ್ ತಯಾರಿಸುತ್ತಿವೆ. ವೆಂಟಿಲೇಟರ್​ನ ತಂತ್ರಜ್ಞಾನ, ಸಾಫ್ಟ್ ವೇರ್, ಸ್ಕೆಚಸ್ ಎಲ್ಲವನ್ನೂ ಆಲ್ಫಾ ಡಿಸೈನ್ ಟೆಕ್ನಾಲಜೀಸ್‌ ಗೆ ನಾಸಾ ಕೊಟ್ಟಿದೆ.

ಬೇರೆ ವೆಂಟಿಲೇಟರ್​​ಗಳಿಗಿಂತ ಅತ್ಯಂತ ಕಡಿಮೆ ಬಿಡಿ ಭಾಗಗಳನ್ನು ಬಳಸಿ ಈ ವಿಶಿಷ್ಟ ವೆಂಟಿಲೇಟರ್ ತಯಾರಿಕೆ ಮಾಡಬಹುದಾಗಿದೆ. ಹಾಗಾಗಿ ಬೆಲೆಯೂ ಕೂಡಾ ಬೇರೆ ವೆಂಟಿಲೇಟರ್​​ಗಳಿಗಿಂತ ಕಡಿಮೆ ಇರಲಿದೆ. ಇದು ವಿಶ್ವದಾದ್ಯಂತ ಎಲ್ಲಾ ರೋಗಿಗಳಿಗೆ ಅನುಕೂಲಕರವಾಗಲಿದೆ ಎನ್ನಲಾಗಿದೆ.

ಸದ್ಯಕ್ಕೆ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ನಾಸಾಗೆ ಒಟ್ಟು 5 ವೆಂಟಿಲೇಟರ್ ಗಳ ಪ್ರೊಟೊಟೈಪ್ ತಯಾರಿಸಿ ಕಳಿಸಲು ಸಜ್ಜಾಗುತ್ತಿದೆ. ಎಫ್​​ಡಿಎ ಒಪ್ಪಿಗೆ ಸಿಕ್ಕರೆ ಅಮೇರಿಕಾದಲ್ಲಿ ಮತ್ತು ಯೂರೋಪ್​​ನಲ್ಲಿ ಮಾರಾಟ ಮಾಡಲು ಸಂಸ್ಥೆ ಚಿಂತನೆ ನಡೆಸಿದೆ.

ಮುಂದಿನ ದಿನಗಳಲ್ಲಿ ಭಾರತದಲ್ಲೂ 5 ವೆಂಟಿಲೇಟರ್ ತಯಾರಿಸಿ ಐಸಿಎಂಆರ್ ಗೆ ಪ್ರೊಟೊಟೈಪ್ ಕಳಿಸಲು ನಿರ್ಧರಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ವೆಂಟಿಲೇಟರ್​​ಗಳಿಗಿಂತ ಇದು ವಿಶಿಷ್ಟ ಮತ್ತು ಅತ್ಯಗತ್ಯ ತಂತ್ರಜ್ಞಾನ ಹೊಂದಿದೆ. ಇದು ಭವಿಷ್ಯದಲ್ಲಿ ಅತ್ಯುತ್ತಮ ಮಾರುಕಟ್ಟೆ ಹೊಂದಿದೆ ಎನ್ನುವ ಭರವಸೆ ಆಲ್ಫಾ ಡಿಸೈನ್ ಟೆಕ್ನಾಲಜೀಸ್‌ ಸಂಸ್ಥೆಯದ್ದು.

Continue

Related Articles

Leave a Reply

Your email address will not be published. Required fields are marked *

Back to top button
Close
Close