
— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ
ಮಹಾಮಾರಿ ಸೊಂಕುವಿನಿಂದ ಆದ ನಷ್ಟಗಳು ಅಷ್ಟಿಷ್ಟಲ್ಲ.ವಿಶ್ವದ್ಯಾಂತ ಯಮ-ರೂಪ ತಾಳಿರುವ ಈ ಭಯಾನಕ ಸೊಂಕಿನಿಂದ ತಿಂಗಳುಗಳೆ ಕಳೆದರೂ ಇನ್ನೂ ಮುಂದೆಯೂ ನಿಲ್ಲುವ ಮಾತೆ ಇಲ್ಲ.! ದಿನೆ-ದಿನೆ ಹೆಚ್ಚುತ್ತಿರುವ ಈ ಸೊಂಕಿನಿಂದ ಜನ-ಜೀವನ ಅಸ್ತವ್ಯಸ್ತ.
ಇವೆಲ್ಲವುದರ ನಡುವೆ ಕಂಪ್ಯೂಟರ್ ತರಬೇತಿ / ಹೊಲಿಗೆ ಯಂತ್ರ ತರಬೇತಿ ಕೇಂದ್ರಗಳ ಮೇಲೆಯೆ ಅವಲಂಬಿತರಾಗಿರುವ ಅದೇಷ್ಟು ಕುಟುಂಬಗಳು ಬೀದಿಗೆ ಬಂದಿವೆ ಅಂದರೆ ನಂಬಲೂ ಅಸಾಧ್ಯ.
ಸರ್ಕಾರವು ಈ ತರಬೇತಿ ಕೇಂದ್ರಗಳನ್ನ ಶಾಲಾ-ಕಾಲೇಜುಗಳಿಗೆ ಹೋಲಿಸಿತ್ತಿರುವುದೆ, ತರಬೇತಿ ಕೇಂದ್ರಗಳಿಗೆ ದೊಡ್ಡ ತೆಲೆ ನೋವಾಗಿದೆ. ಹೊಟ್ಟೆಗೆ ತಣ್ಣೀರು ಬಟ್ಟೆ ಎಂಬಂತೆ ಸರ್ಕಾರದ ಅನುಮತಿಗಾಗಿ ಪ್ರತಿನಿತ್ಯ ಕಾಯುತ್ತ ಕುಳಿತಿರುವ ಸ್ಥಿತಿ ನಿರ್ಮಾಣವಾಗಿದೆ.
ವಿಧ್ಯಾರ್ಥಿಗಳಿಗೆ ಉದ್ಯೋಗ ತರಬೇತಿ ನೀಡಿ, ಅವರ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿರುವ ತರಬೇತಿ ಕೇಂದ್ರಗಳನ್ನ ಸರ್ಕಾರ ನಿರ್ಲಕ್ಷಿಸಿದೆ, ನಾವು ತರಬೇತಿ ಕೇಂದ್ರವನ್ನೆ ನಂಬಿಕೊಂಡು ಕುಟುಂಬ ಸಾಗಿಸುತ್ತಿದ್ದೆವೆ ಆದರೆ ನಮ್ಮ ನೋವು ಯಾರಿಗೂ ಕಾಣುತ್ತಿಲ್ಲ ಎಂಬುದು ತರಬೇತಿ ಕೇಂದ್ರಗಳ ಮುಖ್ಯಸ್ಥರ ಗೋಳಾಗಿದೆ.
ಲಾಕಡೌನ ಸಡಲಿಕೆ ಬಾರ್/ರೆಸ್ಟೊರೆಂಟ್ ಗಳಿಗೆ ಕೊಟ್ಟಿದೆ ಆದ್ರೆ ನಮಗೆ ತಿರಸ್ಕರಿಸಿದೆ. ಸರ್ಕಾರದ ನಿಯಮಾವಳಿಯಂತೆ ಸಾಮಾಜಿಕ ಅಂತರ/ಮಾಸ್ಕ್ ಕಡ್ಡಾಯ/ ಸ್ಯಾನಿಟೈಜರ ಬಳಕೆ ಮಾಡುವುದಾಗಿ ಸಂಬಂದಪಟ್ಟ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಉಪಯೋಗವಾಗಿಲ್ಲ.. ನಮ್ಮ ಪರಿಸ್ಥಿತಿ ಬೀದಿಗೆ ಬಂದಿಳಿದಿದೆ..ಇನ್ನೂ ಹೀಗೆ ಮುಂದುವರೆದರೆ ನಾವು ಬದುಕುವುದೇ ಕಷ್ಟ ಎಂಬುದು ಖಾಸಗಿ/ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳ ಗೋಳಾಗಿದೆ.
ಇನ್ನೂ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳ ಸ್ಥಿತಿ ಹೇಳತೀರದಾಗಿದೆ ಅತ್ತ ತರಬೇತಿ ಕೇಂದ್ರಗಳ ಬಾಡಿಗೆ,ಇಂಟರ್ನೆಟ್, ವಿದ್ಯುತ್ ಬಿಲ್,ಫೋನ್ ಬಿಲ್ ಸೇರಿದಂತೆ ಅವರಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂಧಿಗಳ ಹಣಪಾವತಿ ಇದ್ಯಾವುದು ಕಟ್ಟಲು ಆಗದೆ ಕೇಂದ್ರಗಳು ಕಂಗಾಲಾಗಿವೆ ಹಾಗೂ ಕೆಲ ತರಬೇತಿ ಕೇಂದ್ರಗಳು ಶಾಸ್ವತವಾಗಿ ಬಂದ್ ಆಗಿವೆ.! ಸರ್ಕಾರ ಇಷ್ಟೇಕೆ ನಮ್ಮ ಬಗ್ಗೆ ನಿರ್ಲಕ್ಷ ? ನಮ್ಮ ಗೋಳು ಕೇಳಲು ಯಾರಿಲ್ಲವೆ ?ನಮಗೆ ಸಂಬಂಧ ಪಟ್ಟ ಅಧಿಕಾರಿಗಳು ನಮಗೆ ಕ್ಯಾರೆ ಅನ್ನುತ್ತಿಲ್ಲ, ನಮಗೆ ಏನು ಸಂಬಂದಸವೆ ಇಲ್ಲ ಎಂಬಂತೆ ಮೌನರಾಗಿದ್ದು ನೋವಿನ ಸಂಗತಿ ಎಂಬುದು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳ ಮುಖ್ಯಸ್ಥರ ಗೋಳಾಗಿದೆ..
ನಮಗೂ ಕುಟುಂಬವಿದೆ, ನಮಗೆ ಸಂಬಂದಪಟ್ಟ ಅಧಿಕಾರಿಗಳ ಕುಟುಂಬಗಳಿವೆ ಆದರೆ ನಾವು ಕಷ್ಟದಲ್ಲಿ ಹೊತ್ತಿನ ಊಟಕ್ಕೂ ಹಣವಿಲ್ಲದೆ ಒದ್ದಾಡುತ್ತಿರಿವುದು ನಮ್ಮ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ, ಕೊನೆಗೆ ನಾವು ಮುಂದಿನ ಕ್ರಮಕ್ಕಾಗಿ ಮಾತನಾಡಿದರೂ ನಮಗೆ ಗೊತ್ತಿಲ್ಲ ನಿಮ್ಮಿಷ್ಟ ಏನಾದ್ರ ಮಾಡಿಕೊಳ್ಳಿ ಎಂದು ಹೇಳಿತ್ತಿರುವು ನಿಜಕ್ಕೂ ದುಖಃದ ಸಂಗತಿಯಾಗಿದೆ ಎಂಬುದು ತರಬೇತಿ ಕೇಂದ್ರಗಳ ಮುಖ್ಯಸ್ಥರ ಅಳಲು.
ಸರ್ಕಾರ ಇವರುಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಆಯಾ ಸಂಬಂಧ ಪಟ್ಟ ಮಾನ್ಯತೆ ಪಡೆದ ಸಂಸ್ಥೆಗಳಿಗೆ ನ್ಯಾಯ ಒದಗಿಬೇಕಾಗಿದೆ.