ಕರ್ನಾಟಕ ಸುದ್ದಿ

ಕರ್ಮ ಕಾಂಡ; ಕೊರೋನಾ ನೆಗೆಟಿವ್ ಬಂದಾತ ಆಸ್ಪತ್ರೆಗೆ; ಪಾಸಿಟಿವ್ ಬಂದಾತ ಮನೆಗೆ; ಇದು ಮೊಬೈಲ್ ನಂಬರ್ ಮಾಡಿದ ಅವಾಂತರ

— ಸಿರಾಜುದ್ದೀನ್ ಬಂಗಾರ್ ಸಂಪಾದಕರು ಕರ್ನಾಟಕ-ಜ್ವಾಲೆ

ನೆಗೆಟಿವ್ ಇದ್ದ ವ್ಯಕ್ತಿ ಆಸ್ಪತ್ರೆಗೆ, ಪಾಸಿಟಿವ್ ಬಂದವನು ಮನೆಗೆ. ಇಂತಹ ಅವಘಡ ನಡೆದಿರುವುದು ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ದೇವಾಪುರ ತಾಂಡಾದಲ್ಲಿ. 

ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದವನ್ನು ಕ್ವಾರಂಟೈನ್ ಮಾಡಲಾಗಿತ್ತು. ಒಂದೇ ಕುಟುಂಬದ ಸದಸ್ಯರು ಕ್ವಾರಂಟೈನ್ ಆಗಿದ್ದರು. ಎಲ್ಲರ ಪರೀಕ್ಷೆ ಮಾಡಿದಾಗ ಒಬ್ಬರಿಗೆ ಪಾಸಿಟಿವ್ ಬಂದಿದೆ. ಉಳಿದವರಿಗೆ ನೆಗೆಟಿವ್ ಬಂದಿದೆ. ತಾಂಡಾದ 25 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿತ್ತು.

ನೆಗೆಟಿವ್ ಬಂದ ತಾಂಡಾದ ಅನೇಕರು ಕ್ವಾರಂಟೈನ್ ಮುಗಿಸಿಕೊಂಡು ನಿನ್ನೆ ಸಂಜೆ ಮನೆಗೆ ಹೋಗಿದ್ದರು. ಪಾಸಿಟಿವ್ ಬಂದ ವ್ಯಕ್ತಿಯನ್ನು ಕರೆದುಕೊಂಡು ಹೋಗಲು ಇಂದು ತಾಂಡಾಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸಿತ್ತು. ಆಸ್ಪತ್ರೆ ಸಿಬ್ಬಂದಿ ಕೊರೋನಾ ಪಾಸಿಟಿವ್ ಬಂದಿದ್ದ ವ್ಯಕ್ತಿಯ ಹೆಸರು ಮತ್ತು ಮೊಬೈಲ್ ನಂಬರ್ ಕೇಳಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ತಾನೇ ಎಂದು ಮುಂದೆ ಬಂದಿದ್ದಾನೆ. ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿ ಆತನನ್ನು ಕಲಬುರ್ಗಿಗೆ ಕರೆತಂದು ಐಸೋಲೇಷನ್ ವಾರ್ಡ್ ಗೆ ದಾಖಲಿಸಿದೆ.

ನಂತರದಲ್ಲಿ ಸಂಜೆಗೆ ತಾವು ಕರೆದುಕೊಂಡು ಬಂದಿರುವುದು ಬೇರೆ ವ್ಯಕ್ತಿ ಎನ್ನುವುದು ಆಸ್ಪತ್ರೆ ಸಿಬ್ಬಂದಿಗೆ ಗೊತ್ತಾಗಿದೆ. ಹೀಗಾಗಿ ತಾಂಡಾಕ್ಕೆ ವಾಪಸ್ಸಾದ ಸಿಬ್ಬಂದಿ ಪಾಸಿಟಿವ್ ಬಂದ ವ್ಯಕ್ತಿಯನ್ನು ಸಂಜೆ ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿದೆ. ನೆಗಟಿವ್ ಬಂದಿರುವ ವ್ಯಕ್ತಿಯನ್ನು ಮತ್ತೆ ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್​​ ಮಾಡಲಾಗಿದೆ. ಪಾಸಿಟಿವ್, ನೆಗೆಟಿವ್ ಬಂದವರು ಸಹೋದರರು. ಇಬ್ಬರಿಗೂ ಒಂದೇ  ಮೊಬೈಲ್ ನಂಬರ್ ಕೊಡಲಾಗಿತ್ತು. ಹೆಸರೂ ಒಂದೇ ಮಾದರಿಯಲ್ಲಿದ್ದುದರಿಂದ ಗೊಂದಲವಾಗಿದೆ. ಹೆಸರು ಮತ್ತು ಮೊಬೈಲ್ ಸಂಖ್ಯೆಯಿಂದ ಆಗಿದ್ದ ಅವಘಡವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸರಿಪಡಿಸಿದ್ದಾರೆ.

ಒಂದೇ ದಿನ 43 ಜನ ಡಿಸ್ಚಾರ್ಜ್

ಕೊರೋನಾ ಪ್ರಕರಣಗಳ ಏರಿಕೆಯಿಂದ ವಿಚಲಿತಗೊಂಡಿದ್ದ ಕಲಬುರ್ಗಿಗೆ ಇಂದು ಒಂದಷ್ಟು ನಿರಾಳತೆ ಸಿಕ್ಕಿದೆ. ಇಂದು ಕೇವಲ ಇಬ್ಬರಿಗೆ ಮಾತ್ರ ಸೋಂಕು ದೃಢಪಟ್ಟಿದ್ದರೆ, ಬರೋಬ್ಬರಿ 43 ಜನರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. 43 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕಲಬುರ್ಗಿಯ ವೆಂಕಟೇಶ್ವರ ನಗರದ 32 ವರ್ಷದ ವ್ಯಕ್ತಿ ಹಾಗೂ ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ 42 ವರ್ಷದ ವ್ಯಕ್ತಿಗೆ ಸೋಂಕುದ ದೃಢಪಟ್ಟಿದೆ. ವೆಂಕಟೇಶ್ವರ ನಗರದ ನಿವಾಸಿಗೆ ಸೋಂಕು ಹೇಗೆ ಬಂತೆಂಬ ಟ್ರಾವೆಲ್ ಹಿಸ್ಟರಿ ಸಿಕ್ಕಿಲ್ಲ. ಇದನ್ನು ಹೊರತುಪಡಿಸಿದರೆ ಇಂದು ಅತಿ ಹೆಚ್ಚು ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.

ಕಾಳಗಿ ತಾಲೂಕಿನ 11, ಕಲಬುರ್ಗಿ ತಾಲೂಕಿನ 08, ಯಡ್ರಾಮಿ ತಾಲೂಕಿನ 6 ಚಿತ್ತಾಪುರ ತಾಲೂಕಿನ 5, ಆಳಂದ ಮತ್ತು ಚಿಂಚೋಳಿ ತಾಲೂಕುಗಳ ತಲಾ ನಾಲ್ವರು, ಕಮಲಾಪುರ, ಅಫಜಲಪುರ ಹಾಗೂ ಜೇವರ್ಗಿ ತಾಲೂಕುಗಳ ಕೆಲ ರೋಗಿಗಳೂ ಸೇರಿ 43 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು 112 ಆಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 253ಕ್ಕೆ ಏರಿಕೆಯಾಗಿದೆ.

ಇಂದು ಡಿಸ್ಚಾರ್ಜ್ ಆದವರ ಪೈಕಿ ಓರ್ವ ಆರು ತಿಂಗಳ ಬಾಲಕ ಸೇರಿ ಎಂಟು ಜನ ಮಕ್ಕಳು, ಓರ್ವ ಯುವತಿ, 10 ಮಹಿಳೆಯರು ಮತ್ತು ಇತರರು ಪುರುಷರಿದ್ದಾರೆ. ಕಾಳಗಿ ತಾಲೂಕಿನಲ್ಲಿ ಅತಿ ಹೆಚ್ಚು 11 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕಲಬುರ್ಗಿ ನಗರದಲ್ಲಿ ನಾಲ್ವರು, ಕಲಬುರ್ಗಿ ತಾಲೂಕಿನಲ್ಲಿ ನಾಲ್ವರು,  ಯಡ್ರಾಮಿ ತಾಲೂಕಿನಲ್ಲಿ ಆರು ಜನ, ಚಿತ್ತಾಪುರ ತಾಲೂಕಿನಲ್ಲಿ ಐದು, ಆಳಂದ ಮತ್ತು ಚಿಂಚೋಳಿ ತಾಲೂಕುಗಳಲ್ಲಿ ತಲಾ ನಾಲ್ವರು ಹಾಗೂ ಇತರೆ ತಾಲೂಕುಗಳಲ್ಲಿ ಕೆಲವರು ಗುಣಮುಖರಾಗಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close