
— ಸಿರಾಜುದ್ದೀನ್ ಬಂಗಾರ್ ಸಂಪಾದಕರು.
ಇದು ದೇಶದ ನಾಗರಿಕರಿಗೆ ವಸಾಹತುಶಾಹಿ ಭೂತಕಾಲವನ್ನು ಮೀರಲು ಸಹಾಯ ಮಾಡುತ್ತದೆ ಮತ್ತು ಭಾರತೀಯರ ರಾಷ್ಟ್ರೀಯತೆಯ ಬಗ್ಗೆ ಹೆಮ್ಮೆಯ ಭಾವ ಮೂಡಿಸುತ್ತದೆ. ಹಾಗಾಗಿ ಇಂಡಿಯಾ ಎಂಬ ಪದವನ್ನು ಭಾರತ್ ಎಂದು ಬದಲಿಸಲು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಗೆ ಜೂನ್ 2ರಂದು ದಿನಾಂಕ ನಿಗದಿ ಮಾಡಲಾಗಿದೆ.
ದೆಹಲಿ ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆಯಬೇಕಿತ್ತು. ಆದರೆ, ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರು ಇಂದು ಇರದ ಕಾರಣ ವಿಚಾರಣೆ ಮುಂದೂಡಿಕೆಯಾಯಿತು. ಈ ಅರ್ಜಿ ವಿಚಾರಣೆ ಜೂನ್ 2ರಂದು ನ್ಯಾ. ಎ.ಎಸ್.ಬೋಪಣ್ಣ ಅವರು ಪೀಠದಲ್ಲಿ ವಿಚಾರಣೆ ನಡೆಯಲಿದೆ.
ದೇಶದ ನಾಗರಿಕರಿಗೆ ವಸಾಹತುಶಾಹಿ ಭೂತಕಾಲವನ್ನು ಮೀರಲು ಸಹಾಯ ಮಾಡುತ್ತದೆ ಮತ್ತು ಭಾರತೀಯರ ರಾಷ್ಟ್ರೀಯತೆಯ ಬಗ್ಗೆ ಹೆಮ್ಮೆಯ ಭಾವ ಮೂಡಿಸುತ್ತದೆ. ಹಾಗಾಗಿ ಇಂಡಿಯಾ ಎಂಬ ಪದವನ್ನು ಭಾರತ್ ಎಂದು ಬದಲಿಸಲು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.