ಸಿನಿಮಾ ಸುದ್ದಿ

ವಿಶ್ವ ಮಟ್ಟದಲ್ಲಿ ಹೊಸ ದಾಖಲೆ ನಿರ್ಮಿಸಿದ ಅಲ್ಲು ಅರ್ಜುನ್ ಬುಟ್ಟ ಬೊಮ್ಮ ಹಾಡು….!

— ಸಿರಾಜುದ್ದೀನ್ ಬಂಗಾರ್,ಕರ್ನಾಟಕ-ಜ್ವಾಲೆ ಸಂಪಾದಕರು

ಅಲ್ಲು ಅರ್ಜುನ್​ ಹಾಗೂ ತ್ರಿವಿಕ್ರಮ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದ ಅಲಾ ವೈಕುಂಠಪುರಂಲೋ ಸಿನಿಮಾ ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸಿತ್ತು. ಈ ಸಿನಿಮಾದ ಹಾಡುಗಳು ಸಹ ಪ್ರೇಕ್ಷಕರ ಮನ ಗೆದಿದ್ದವು. ಕಲೆಕ್ಷನ್​ ವಿಷಯದಲ್ಲಿ ಈಗಾಗಲೇ ದಾಖಲೆ ಮಾಡಿರುವ ಈ ಸಿನಿಮಾ, ಈಗ ಹಾಡಿನ ವಿಷಯದಲ್ಲೂ ಹೊಸ ರೆಕಾರ್ಡ್​ ನಿರ್ಮಿಸಿದೆ. 

ಅಲಾ ವೈಕುಂಠಪುರಂಲೋ ಸಿನಿಮಾದ ಹಾಡುಗಳಲ್ಲಿ ರಾಮುಲೊ ರಾಮುಲಾ ಹಾಗೂ ಬುಟ್ಟ ಬೊಮ್ಮ ಹೆಚ್ಚು ಖ್ಯಾತಿ ಪಡೆದವು. ಅದರಲ್ಲೂ ಅಲ್ಲು ಅರ್ಜುನ್​ ಸಖತ್ ಸ್ಟೆಪ್ ಹಾಕಿರುವ ಬುಟ್ಟ ಬೊಮ್ಮ ಸಿನಿಮಾ ಬಿಡುಗೆಯಾದಾಗಲೇ ಯೂಟ್ಯೂಬ್​ನಲ್ಲಿ ಕೋಟಿ ಕೋಟಿ ವೀಕ್ಷಣೆ ಪಡೆದುಕೊಂಡಿತ್ತು.ಈಗ ಇದೇ ಹಾಡಿಗೆ ಯೂಟ್ಯೂಬ್​ನಲ್ಲಿ 19 ಕೋಟಿಗೂ ಅಧಿಕ ವೀಕ್ಷಣೆ ಸಿಕ್ಕಿದೆ. 200 ಮಿಲಿಯನ್​ಗೆ ಅಂದರೆ 20 ಕೋಟಿಗೆ ಬಹಳ ಹತ್ತಿರದಲ್ಲಿದೆ. ಥಮನ್​ ಸಂಗೀತ ನಿರ್ದೇಶನದ ಈ ಹಾಡನ್ನು ಅರ್ಮಾನ್ ಮಲ್ಲಿಕ್​ ಹಾಡಿದ್ದಾರೆ.

ತೆಲುಗಿನಲ್ಲಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ವೀಕ್ಷಣೆ ಪಡೆದ ಹಾಡು ಇದಾಗಿದೆ. ಈ ಹಾಡಿಗೆ ಲೋಕಲ್​ನಿಂದ ​ಜಾಗತಿಕ ಮಟ್ಟದವರೆಗೆ ಅಭಿಮಾನಿಗಳಿದ್ದಾರೆ.ಇತ್ತೀಚೆಗಷ್ಟೆ ಕ್ರಿಕೆಟಿಗ ಡೇವಿಡ್​ ವಾರ್ನರ್​ ತಮ್ಮ ಹೆಂಡತಿ ಹಾಗೂ ಮಗುವಿನೊಂದಿಗೆ ಡ್ಯಾನ್ಸ್​ ಮಾಡಿ ವಿಡಿಯೋ ಹಂಚಿಕೊಂಡಿದ್ದರು. ನಟಿ ಶಿಲ್ಪಾ ಹಾಗೂ ತಂಗಿ ಶಮಿತಾ ಶೆಟ್ಟಿ ಸಹ ಈ ಇದೇ ಹಾಡಿಗೆ ಟಿಕ್​ಟಾಕ್​ನಲ್ಲಿ ಸ್ಟೆಪ್​ ಹಾಕಿದ್ದರು.

ವಿಶ್ವದಾದ್ಯಂತ ಖ್ಯಾತಿ ಪಡೆದ ನೂರು ವಿಡಿಯೋ ಹಾಡುಗಳಲ್ಲಿ ಬುಟ್ಟ ಬೊಮ್ಮ 15ನೇ ಸ್ಥಾನದಲ್ಲಿದೆಯಂತೆ. ಈ ಬಗ್ಗೆ ಇಂಗ್ಲಿಷ್​ ಪತ್ರಿಕೆಯೊಂದು ವರದಿ ಮಾಡಿದೆಯಂತೆ. ಈಬಗ್ಗೆ ಸಂಗೀತ ನೀರ್ದೇಶಕ ಥಮನ್​ ಟ್ವೀಟ್​ ಮಾಡಿದ್ದಾರೆ.

ತೆಲುಗು ಹಾಡೊಂದು ವಿಶ್ವ ಮಟ್ಟದಲ್ಲಿ ದಾಖಲೆ ನಿರ್ಮಿಸಿರುವುದು ನಿಜಕ್ಕೂ ಖುಷಿಯ ವಿಷಯ. ಅಲ್ಲು ಅರ್ಜುನ್​ ಅಭಿಮಾನಿಗಳು ಥಮನ್​ ಅವರ ಟ್ವೀಟ್​ ನೋಡಿ ಸಂಭ್ರಮಿಸುತ್ತಿದ್ದಾರೆ. ಇನ್ನು ಈ ಸಿನಿಮಾದ ಆಲ್ಬಂನಲ್ಲಿರುವ ವಿಡಿಯೋ ಹಾಡುಗಳಿಗೆ ಯೂಟ್ಯೂಬ್​ನಲ್ಲಿ ಒಟ್ಟಾರೆ ನೂರು ಕೋಟಿ ಅಂದರೆ ಒಂದು ಬಿಲಿಯನ್​ ವೀಕ್ಷಣೆ ಸಿಕ್ಕಿದೆಯಂತೆ

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close