ಸಿನಿಮಾ ಸುದ್ದಿ

ರೆಬಲ್ ಸ್ಟಾರ್ ಅಂಬರೀಶ್ 68ನೇ ಹುಟ್ಟುಹಬ್ಬದ ನೆನಪು;ಮಿಸ್.ಯು.ಅಂಬಿ

— ಸಿರಾಜುದ್ದೀನ್ ‌ಬಂಗಾರ್,ಕರ್ನಾಟಕ-ಜ್ವಾಲೆ ಸಂಪಾದಕ

ರೆಬೆಲ್ ಸ್ಟಾರ್ ಅಂಬರೀಶ್ ಕಂಪ್ಲೀಟ್ ಬಯೋಡಾಟಾ

ಅಂಬರೀಶ್ (ಮಳವಳ್ಳಿ ಹುಚ್ಚೇಗೌಡ ಅಮರನಾಥ್) (29 ಮೇ 1952 – 24 ನವೆಂಬರ್ 2018)ಭಾರತೀಯ ಚಲನಚಿತ್ರ ನಟ ಮತ್ತು ಕರ್ನಾಟಕ ರಾಜ್ಯದ ಒಬ್ಬ ರಾಜಕಾರಣಿಯಾಗಿದ್ದರು. ಪುಟ್ಟಣ್ಣ ಕಣಗಾಲ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಹಾವು (1972) ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ಖಳ ನಟ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ಹಂತದೊಂದಿಗೆ ಪ್ರಾರಂಭವಾಯಿತು. ವಾಣಿಜ್ಯಿಕವಾಗಿ ಯಶಸ್ಸು ಗಳಿಸಿದ ಅನೇಕ ಚಿತ್ರಗಳಲ್ಲಿ ಸ್ವತಃ ಪ್ರಮುಖ ಖಳನಟನಾಗಿ ಸ್ಥಾಪನೆಗೊಂಡ ನಂತರ, ಅನೇಕ ಸಿನೆಮಾಗಳಲ್ಲಿ ನಾಯಕನಟನಾಗಿ ನಟಿಸಿದರು. ರೆಬೆಲ್ ಸ್ಟಾರ್, ಮಂಡ್ಯದ ಗಂಡು ಎಂಬ ಉಪನಾಮವನ್ನು ಗಳಿಸಿದರು.

ರೆಬಲ್ ಸ್ಟಾರ್ ಅಂಬರೀಶ್ ಅವರು ನಟಿಸಿದ ಕೊನೆಯ ಚಿತ್ರ ಹಾಗೂ ಗೀತೆ
ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ
ಅಧಿಕಾರ ಅವಧಿ
24 ಅಕ್ಟೋಬರ್ 2006 – 15 ಫೆಬ್ರವರಿ 2007
ಪ್ರಧಾನ ಮಂತ್ರಿಮನಮೋಹನ್ ಸಿಂಗ್
ಉತ್ತರಾಧಿಕಾರಿಚೌಧರಿ ಮೋಹನ್ ಜತುವಾ ಮತ್ತು ಎಸ್. ಜಗದ್ರಾಕ್ಷನ್
ಸಂಸತ್ತಿನ ಸದಸ್ಯ
ಅಧಿಕಾರ ಅವಧಿ
1998–2009
ಪೂರ್ವಾಧಿಕಾರಿಎಸ್.ಎಂ. ಕೃಷ್ಣ
ಉತ್ತರಾಧಿಕಾರಿಎನ್. ಚೆಲುವರಾಯ ಸ್ವಾಮಿ
ಮತಕ್ಷೇತ್ರಮಂಡ್ಯ
ವೈಯಕ್ತಿಕ ಮಾಹಿತಿ
ಜನನಎಮ್.ಎಚ್. ಅಮರನಾಥ್
29 May 1952 (age 67)
ಮಂಡ್ಯಕರ್ನಾಟಕ ರಾಜ್ಯಭಾರತ
ಮರಣ24 ನವೆಂಬರ್ 2018 (ವಯಸ್ಸು 66)
ರಾಜಕೀಯ ಪಕ್ಷಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು)ಸುಮಲತಾ (m. 1991)
ಮಕ್ಕಳುಅಭಿಷೇಕ್
ವಾಸಸ್ಥಾನಬೆಂಗಳೂರು
ಉದ್ಯೋಗನಟ
ಬಯೋ

ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮತ್ತು ಜನತಾದಳ ಪಕ್ಷದಿಂದ ಸ್ಪರ್ದಿಸಿ ಲೋಕಸಭೆ ಸದಸ್ಯ ಮತ್ತು ಶಾಸಕರಾಗಿದ್ದರು, ಅವರು ಮೇ 2013 ರಿಂದ ಜೂನ್ 2016 ರ ವರೆಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕರ್ನಾಟಕ ಸರಕಾರದ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಅವರ ನಟನಾ ವೃತ್ತಿಜೀವನಕ್ಕಾಗಿ ಅನೇಕ ರಾಜ್ಯ ಸರ್ಕಾರ ಪ್ರಶಸ್ತಿಗಳನ್ನು ಮತ್ತು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ, ಅಂಬರೀಶ್ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು 63 ನೇ ವಾರ್ಷಿಕ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಕನ್ನಡ ಚಲನಚಿತ್ರ ರಂಗಕ್ಕೆ ೧೯೭೩ರಲ್ಲಿ, ಪುಟ್ಟಣ್ಣ ಕಣಗಾಲ್ ನಿರ್ದೇಶನದ “ನಾಗರಹಾವು” [೯] ಚಿತ್ರದ (ಜಲೀಲನ ಪಾತ್ರ) ಮೂಲಕ ಪಾದಾರ್ಪಣೆ ಮಾಡಿದರು.

ರೆಬಲ್ ಸ್ಟಾರ್ ಮೊದಲ ಚಿತ್ರ “ನಾಗರ ಹಾವು” ಕಾಮಿಡಿ ಸೀನ್

ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಎಚ್.ಕೆ.ಅನಂತರಾವ್ ಅವರ ಕಾದಂಬರಿ ಆಧಾರಿತ ಅಂತ ಚಿತ್ರದ ನಾಯಕನಾಗಿ ಅಭಿನಯಿಸಿದ್ದು ಇವರ ವೃತ್ತಿ ಜೀವನಕ್ಕೆ ಒಂದು ಹೊಸ ಆಯಾಮ ನೀಡಿತು. ಈ ಚಿತ್ರದಲ್ಲಿ ಅನ್ಯಾಯದ ವಿರುದ್ಧ ಸಿಡಿದೇಳುವ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ಪಾತ್ರ ಇವರಿಗೆ ‘ರೆಬೆಲ್ ಸ್ಟಾರ್’ ಎಂಬ ಇಮೇಜು ನೀಡಿತು. ಅನಂತರ ಇವರು ನಾಯಕ, ಖಳನಾಯಕಪಾತ್ರಗಳಲ್ಲಿ ನಟಿಸಿದರು. ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಮಸಣದ ಹೂವು, ಚಕ್ರವ್ಯೂಹ, ಏಳುಸುತ್ತಿನ ಕೋಟೆ, ಹೃದಯ ಹಾಡಿತು, ಸ್ನೇಹಸಂಬಂಧ, ಬ್ರಹ್ಮಾಸ್ತ್ರ, ಅಮರಜ್ಯೋತಿ ಮೊದಲಾದ ಅನೇಕ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ‘ಮಸಣದ ಹೂವು’ ಚಿತ್ರದಲ್ಲಿನ ಇವರ ಪಾತ್ರದ ಅಭಿನಯ ಅವಿಸ್ಮರಣೀಯವಾದದ್ದು. ‘ಹೃದಯ ಹಾಡಿತು’ ಚಿತ್ರ ಇವರ ಚಿತ್ರರಂಗದ ಇಮೇಜನ್ನು ಬದಲಾಯಿಸಿತು.

ರೆಬಲ್‌ ಸ್ಟಾರ್ ಅಂಬರೀಶ್ ಅವರ ಹಿಟ್ ಗೀತೆಗಳು

ಚಕ್ರವ್ಯೂಹ ಹಾಗೂ ಮೌನರಾಗ ಚಿತ್ರಗಳು ಇವರಿಗೆ ಜನಪ್ರಿಯತೆ ತಂದುಕೊಟ್ಟವು!. ಜೋ ಸೈಮನ್ ನಿರ್ದೇಶನದಲ್ಲಿ, ೧೯೮೯ರಲ್ಲಿ ಬಿಡುಗಡೆಯಾದ ಹಾಂಕಾಂಗ್‍ನಲ್ಲಿ ಏಜೆಂಟ್ ಅಮರ್ ಇವರ ನೂರನೇ ಚಿತ್ರ. ಇವರು ಇಲ್ಲಿಯವರೆಗೆ ಸುಮಾರು ೨೦೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.

ರಾಜಕೀಯ ಜೀವನ

ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸಂಸತ್ ಸದಸ್ಯರಾಗಿದ್ದರು. ಇವರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಮೊದಲಿಗೆ ಜನತಾದಳದಲ್ಲಿದ್ದರು. 1994 ರಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮುಂದೆ ಅಂಬರೀಶ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಗೆ ಸೇರಿದರು. 1996ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಅವರು ಎರಡು ವರ್ಷಗಳ ನಂತರ ಪಕ್ಷವನ್ನು ತ್ಯಜಿಸಿದರು. ಅಂಬರೀಶ್ ತರುವಾಯ ಜನತಾ ದಳಕ್ಕೆ ಸೇರಿಕೊಂಡರು ಮತ್ತು ಮಂಡ್ಯದಿಂದ 1998 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿ ಲೋಕಸಭೆಗೆ ಆಯ್ಕೆಯಾದರು. 14 ನೇ ಲೋಕಸಭೆಯಲ್ಲಿ, ಅವರು ಮಾಹಿತಿ ಮತ್ತು ಪ್ರಸಾರ  ರಾಜ್ಯ ಸಚಿವರಾಗಿದ್ದರು. ಅನಂತರ ಕಾವೇರಿ ಚಳವಳಿಯ ಹಿನ್ನೆಲೆಯಲ್ಲಿ ಜನತೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು (2002). ಮೇ 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಸೋತರು.[೧೦] ೨೦೧೩ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಅವರು, ಶ್ರೀ ಸಿದ್ಧರಾಮಯ್ಯನವರ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ರಾಜಕೀಯ ವೃತ್ತಿಜೀವನ

 • ಸದಸ್ಯ, 12ನೇ ಲೋಕಸಭೆ: 1998-1999
 • ಸದಸ್ಯ, 13ನೇ ಲೋಕಸಭೆ: 1999-2004
 • ಸದಸ್ಯ, 14ನೇ ಲೋಕಸಭೆ: 2004-2009
 • ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ,  24 ಅಕ್ಟೋಬರ್ 2006 ರಿಂದ 2008
 • ಸದಸ್ಯ, ಕರ್ನಾಟಕ ವಿಧಾನಸಭೆ: 2013-2018, ವಸತಿ ಸಚಿವ

ಪ್ರಶಸ್ತಿ ಮತ್ತು ಮನ್ನಣೆಗಳು

 • 1982 ರಲ್ಲಿ ‘ಅಂತ’ಗಾಗಿ ಅತ್ಯುತ್ತಮ ನಟನಿಗಾಗಿರುವ ಕರ್ನಾಟಕ ರಾಜ್ಯ ವಿಶೇಷ ಪ್ರಶಸ್ತಿ.
 • ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂವು’ ಚಿತ್ರದಲ್ಲಿ “ಅತ್ಯುತ್ತಮ ಪೋಷಕ ನಟ” (1985-86) ಕರ್ನಾಟಕ ರಾಜ್ಯ ಪ್ರಶಸ್ತಿ
 • ರಾಜೇಂದ್ರ ಬಾಬು ನಿರ್ದೇಶನದ “ಒಲವಿನ ಉಡುಗೊರೆ ” ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ.
 • 2005 ರಲ್ಲಿ ಎನ್ ಟಿಆರ್ ರಾಷ್ಟ್ರೀಯ ಪ್ರಶಸ್ತಿ ಪಡೆದರು.[೧೧]
 • ಫಿಲ್ಮ್ ಫೇರ್ ಜೀವಮಾನ ಸಾಧನೆಯ ಪ್ರಶಸ್ತಿ – ದಕ್ಷಿಣ 2009.
 • ಆಂಧ್ರ ಸರ್ಕಾರವು ನಂದಿ ಪ್ರಶಸ್ತಿಯನ್ನು 2009ರಲ್ಲಿ ನೀಡಿ ಗೌರವಿಸಿತು.
 • 90 ರ ದಶಕದಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ತಿರಸ್ಕರಿಸಿದ ನಂತರ, ತಿರುವನಂತಪುರ ಟಿ.ಎನ್.ಬಾಲಕೃಷ್ಣ ಅವರಿಗೆ ನೀಡಲಾಯಿತು
 • ಟಿವಿ 9 ಸ್ಯಾಂಡಲ್ ವುಡ್ ಸ್ಟಾರ್ ಅವಾರ್ಡ್ಸ್ – 2012, ಜೀವಮಾನ ಸಾಧನೆಯ ಪ್ರಶಸ್ತಿ
 • ಕರ್ನಾಟಕ ಸರ್ಕಾರ ಡಾ. ವಿಷ್ಣುವರ್ಧನ್ ಪ್ರಶಸ್ತಿ 2011 ರಲ್ಲಿ
 • 2013 ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್[೧೨]
 • SIIMA ಜೀವಮಾನ ಸಾಧನೆ ಪ್ರಶಸ್ತಿ 2012
Tags
Continue

Related Articles

Leave a Reply

Your email address will not be published. Required fields are marked *

Back to top button
Close
Close