ಅಹಾರ-ಅಡುಗೆಮಹಿಳಾ-ವಿಭಾಗ

ನಳಪಾಕ : ಈದ್‌ ಸಂಭ್ರಮಕ್ಕೆ ವರ್ಕಿ ಮೀಠಾ, ಮಟನ್ ಸುಖಾಪಾಲ್‌

ನಳಪಾಕ : ಆಯೇಷಾ ಆಫ್ರತ್

ಲಾಕ್‌ಡೌನ್‌ ಮಧ್ಯೆಯೇ ರಂಜಾನ್ ಮಾಸ ಆರಂಭವಾಗಿ ಹಬ್ಬದ ಸಂಭ್ರಮ ಎದುರುಗೊಂಡಿದೆ. ಹಬ್ಬವೆಂದಾಗ ಬಗೆ ಬಗೆಯ ಖಾದ್ಯಗಳು ಸಾಮಾನ್ಯ. ರಂಜಾನ್ ಸಂಭ್ರಮಕ್ಕೆ ಒಂದೊಂದು ಕಡೆ ಒಂದೊಂದು ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. ಬಿರಿಯಾನಿ, ಕಬಾಬ್, ಮೀಠಾ(ಸಿಹಿ) ಅಂತೂ ಸಾಮಾನ್ಯ. ಅದರಲ್ಲಿಯೂ ಮೈಸೂರು ಸಾಂಪ್ರದಾಯಿಕ ನಗರಿ. ಅಡುಗೆಯಲ್ಲೂ ಸಂಪ್ರದಾಯದ ರುಚಿ ಉಳಿಸುವುದು ಇಲ್ಲಿನ ಜನರ ವೈಖರಿ. ರಂಜಾನ್‌ಗೆ ಮೈಸೂರು ಸ್ಪೆಷಲ್ ದಮ್ ಬಿರಿಯಾನಿ, ವರ್ಕಿ ಮೀಠಾ (ಸುರುಳಿ ಬಟಾರ್) ಮತ್ತು ಮಟನ್ ಸುಖಾಪಾಲ್ ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ ಆಯೇಷಾ ಆಫ್ರತ್‌

ಮೈಸೂರು ದಮ್ ಬಿರಿಯಾನಿ

ಸಾಮಗ್ರಿಗಳು: ಚಿಕನ್ – 1 ಕೆ.ಜಿ., ಅಕ್ಕಿ – 1 ಕೆ.ಜಿ., ಈರುಳ್ಳಿ- 3/4 ಕೆ.ಜಿ., ಟೊಮೊಟೊ- 1/2 ಕೆ.ಜಿ., ಶುಂಠಿ ಬೆಳ್ಳುಳ್ಳಿ ಪೇಸ್ಟ್- 100 ಗ್ರಾಂ, ಸಾಜೀರ-5 ಗ್ರಾಂ, ಏಲಕ್ಕಿ- 4-5, ಲವಂಗ- 8-9 ಚಕ್ಕೆ- 3-4, ಕಸ್ತೂರಿ ಮೇಥಿ- 5 ಗ್ರಾಂ, ಮೆಂತೆ ಸೊಪ್ಪು-2 ಕಟ್ಟು, ಪುದಿನ -1 ಕಟ್ಟು, ಕೊತ್ತಂಬರಿ ಸೊಪ್ಪು- 1 ಕಟ್ಟು, ಮೊಸರು- 1/4 ಲೀಟರ್, ಎಣ್ಣೆ- 150 ಮಿಲಿ ಲೀಟರ್‌, ತುಪ್ಪ- 50 ಗ್ರಾಂ, ಲೆಮನ್‌ ಹಳದಿ ಬಣ್ಣ- 1/4 ಟೀ ಚಮಚ, ಅರಿಸಿನ- 2 ಟೀ ಚಮಚ, ಲಿಂಬೆಹಣ್ಣು -1, ಉಪ್ಪು – ರುಚಿಗೆ ತಕ್ಕಷ್ಟು, ಮೆಣಸಿನ ಹುಡಿ – 2 ಚಮಚ, ಹಸಿ ಮೆಣಸಿನಕಾಯಿ – 2 -3

ತಯಾರಿಸುವ ವಿಧಾನ: ಸಕ್ಕರೆ ಮತ್ತು ಖೋವವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಡಿ. ಇನ್ನೊಂದು ಪಾತ್ರೆಗೆ ಹಾಲು ಹಾಕಿ ಒಲೆ ಮೇಲೆ ಇಟ್ಟು ಕುದಿಯಲು ಬಿಡಿ. ಅದಕ್ಕೆ ಸಕ್ಕರೆ ಮತ್ತು ಖೋವ ಮಿಶ್ರಣವನ್ನು ಹಾಕಿ. ವರ್ಕಿಯನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿ. ಸ್ವಲ್ಪ ದಪ್ಪಗೆ ಇರಲಿ. ಹಾಲು ಕುದಿಯುವಾಗ ವರ್ಕಿ ಹಾಕಿ ಚೆನ್ನಾಗಿ ಕೈ ಆಡಿಸಿ. ಅದಕ್ಕೆ ಮಿಲ್ಕ್ ಮೇಡ್ ಏಲಕ್ಕಿ ಪುಡಿ ಹಾಕಿ ಕೈ ಆಡಿಸುತ್ತಾ ಇರಬೇಕು. ನಂತರ 100 ಗ್ರಾಮ್ ತುಪ್ಪ ಹಾಕಿ ಚೆನ್ನಾಗಿ ಕುದಿಸಿ ಪಾಯಸದ ಹದಕ್ಕೆ ಬಂದಾಗ ಗ್ಯಾಸ್ ಆಫ್ ಮಾಡಿ. ನಂತರ ಒಂದು ಪ್ಯಾನ್‌ಗೆ 150 ಗ್ರಾಂ ತುಪ್ಪ ಹಾಕಿ ಅದಕ್ಕೆ ಗೋಡಂಬಿ, ಬಾದಾಮಿ, ಸಿರೆಂಜಿಯನ್ನು ಹುರಿದು ಪಾಯಸಕ್ಕೆ ಸೇರಿಸಿ.

ಮಟನ್ ಸುಖಾಪಾಲ್‌

ಬೇಕಾಗುವ ಸಾಮಗ್ರಿಗಳು: ಮಟನ್ -1 ಕೆ.ಜಿ., ಶುಂಠಿ–ಬೆಳ್ಳುಳ್ಳಿ ಪೇಸ್ಟ್-3 ಟೇಬಲ್ ಚಮಚ, ಮೆಣಸಿನಪುಡಿ – 4 ಟೇಬಲ್ ಚಮಚ, ಟೊಮೆಟೊ – 1/4 ಕೆ.ಜಿ., ಅರಿಸಿನ- 1 1/2 ಟೀ ಚಮಚ, ಎಣ್ಣೆ – 200ಮಿಲಿ ಲೀಟರ್‌, ಕೊತ್ತಂಬರಿ ಸೊಪ್ಪು – 1 ಕಟ್ಟು, ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಮಟನ್ ತುಂಡುಗಳು ತೆಳ್ಳಗಿರಲಿ. ಮುಳ್ಳುಗಳಿದ್ದರೆ ಜಜ್ಜಿಕೊಳ್ಳಿ. ಕುಕ್ಕರ್‌ಗೆ ಮಟನ್ ಹಾಕಿ ಅದಕ್ಕೆ ಉಪ್ಪು, ಅರಿಸಿನ ಸೇರಿಸಿ ಮಧ್ಯಮ ಉರಿಯಲ್ಲಿ 4 ವಿಷಲ್ ತೆಗೆದು ಇಡಿ. ಟೊಮೆಟೊವನ್ನು ಮಿಕ್ಸಿಯಲ್ಲಿ ಅರೆದು ಇಟ್ಟುಕೊಳ್ಳಿ. ದೊಡ್ಡ ಪ್ಯಾನ್‌ಗೆ ಎಣ್ಣೆ ಹಾಕಿ ಬೇಯಿಸಿದ ಮಾಂಸ ಹಾಕಿ ದೂರ ದೂರಕ್ಕೆ ಹರಡಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಹುಡಿ, ಅರಿಸಿನ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅರೆದ ಟೊಮೆಟೊ ಸೇರಿಸಿ ಚೆನ್ನಾಗಿ ತಿರುಗಿಸಿ. ಆಗಾಗ ಎಣ್ಣೆ ಸೇರಿಸುತ್ತಾ ಕೈ ಆಡಿಸುತ್ತಿರಿ. ಮಾಂಸ ದೂರ ದೂರಕ್ಕೆ ಇದ್ದು ಚೆನ್ನಾಗಿ ಹುರಿದುಕೊಳ್ಳಬೇಕು. ಉಲ್ಟಾ ಪಲ್ಟಾ ಮಾಡಿ ಎಣ್ಣೆ ಸೇರಿಸುತ್ತಾ ಕಾಯಿಸಿರಿ. ಗ್ರೇವಿ ಬೇಕಾದಲ್ಲಿ ಗ್ಯಾಸ್ ಆಫ್ ಮಾಡಿ. ಡ್ರೈ ಬೇಕಾದರೆ ಮಸಾಲೆ ಚೆನ್ನಾಗಿ ಆರಲಿ. ಚಪಾತಿ, ದೋಸೆ, ಪರೋಟ ಜೊತೆ ತಿನ್ನಲು ಚೆನ್ನಾಗಿರುತ್ತದೆ.

Tags
Continue

Leave a Reply

Your email address will not be published. Required fields are marked *

Back to top button
Close
Close