ಕರ್ನಾಟಕ ಸುದ್ದಿ

ಬ್ರೆಕೀಂಗ್ ನ್ಯೂಸ್ ; ಜೂನ್​ನಲ್ಲೇ ಪರಿಷತ್ ಚುನಾವಣೆ: 7 ಸ್ಥಾನಗಳಿಗೆ ಗರಿಗೆದರಿದ ಆಕಾಂಕ್ಷಿಗಳ ಲಾಬಿ

ವರದಿ: ಸಿರಾಜುದ್ದೀನ್ ಬಂಗಾರ

ಸದ್ಯದ ವಿಧಾನಸಭೆ ಬಲಾಬಲ ಪರಿಗಣಿಸಿದಾಗ ಈ 7 ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳು ಬಿಜೆಪಿಗೆ ಒಲಿಯಲಿವೆ. ಕಾಂಗ್ರೆಸ್​ಗೆ 2 ಹಾಗೂ ಜೆಡಿಎಸ್​ಗೆ 1 ಸ್ಥಾನದ ಅವಕಾಶ ಇದೆ.

ಜೂನ್​ನಲ್ಲಿ ಖಾಲಿ ಬೀಳಲಿರುವ ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯಬೇಕಿರುವ ಚುನಾವಣೆ ಕೊರೋನಾ ಕಾರಣದಿಂದ ಮುಂದೂಡಿಕೆಯಾಗುವ ಭೀತಿ ಇತ್ತು. ಆದರೆ, ಮಹಾರಾಷ್ಟ್ರದಲ್ಲಿ ಪರಿಷತ್ ಚುನಾವಣೆ ನಡೆಸಿದ್ದ ಆಯೋಗವು ಕರ್ನಾಟಕಲ್ಲೂ ಚುನಾವಣೆ ನಡೆಸಲು ಸಿದ್ಧವಾಗಿದೆ. ಇದರೊಂದಿಗೆ ಪರಿಷತ್ ಚುನಾವಣೆ ಮೇಲಿದ್ದ ಕೊರೋನಾ ಕಾರ್ಮೋಡ ಸರಿದಂತಾಗಿದೆ. ಮೂಲಗಳ ಪ್ರಕಾರ, ಜೂನ್ ಅಂತ್ಯದಲ್ಲಿ 7 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹಾಗೆಯೇ, ಐದು ಸ್ಥಾನಗಳಿಗೆ ರಾಜ್ಯಪಾಲರು ನಾಮನಿರ್ದೇಶನ ಮಾಡಲಿದ್ದಾರೆ. ಆದರೆ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ 4 ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆ ಮಾತ್ರ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಜೂನ್ ತಿಂಗಳಿಗೆ ಒಟ್ಟು 16 ಪರಿಷತ್ ಸ್ಥಾನಗಳ ಸದಸ್ಯತ್ವ ಅವಧಿ ಮುಗಿಯುತ್ತದೆ. ಚುನಾಯಿತ ಪರಿಷತ್ ಸ್ಥಾನಗಳು 7 ಇವೆ. ನಾಮನಿರ್ದೇಶಿತ ಸ್ಥಾನಗಳು 5, ಪದವೀಧರ ಕ್ಷೇತ್ರಗಳ ಸ್ಥಾನಗಳು 2 ಹಾಗೂ ಶಿಕ್ಷಕರ ಕ್ಷೇತ್ರಗಳ ಸ್ಥಾನಗಳು 2 ಖಾಲಿ ಉಳಿಯಲಿವೆ. ಈಗ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರಗಳ 4 ಸ್ಥಾನ ಹೊರತುಪಡಿಸಿ ಉಳಿದ 12 ಸ್ಥಾನಗಳು ಭರ್ತಿಯಾಗಲಿವೆ. ರಾಜ್ಯಪಾಲರು 5 ಸ್ಥಾನಗಳಿಗೆ ನಾಮ ನಿರ್ದೇಶನ ಮಾಡಲಿದ್ಧಾರೆ. ಇನ್ನುಳಿದ 7 ಸ್ಥಾನಗಳಿಗೆ ಜೂನ್ 30ರಂದು ಚುನಾವಣೆಯಾಗುವುದು ನಿಶ್ಚಿತವೆನ್ನಲಾಗಿದೆ.

ಸದ್ಯದ ವಿಧಾನಸಭೆ ಬಲಾಬಲ ಪರಿಗಣಿಸಿದಾಗ ಈ 7 ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳು ಬಿಜೆಪಿಗೆ ಒಲಿಯಲಿವೆ. ಕಾಂಗ್ರೆಸ್​ಗೆ 2 ಹಾಗೂ ಜೆಡಿಎಸ್​ಗೆ 1 ಸ್ಥಾನದ ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ದೊಡ್ಡ ಲಾಬಿ ಶುರುವಾಗುತ್ತಿದೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಬಿಜೆಪಿಗೆ ವಲಸೆ ಬಂದಿರುವರಿಂದ ಹಿಡಿದು ಅನೇಕ ಸ್ಥಳೀಯ ಮುಖಂಡರು ಪಕ್ಷದ ಟಿಕೆಟ್ ಪಡೆಯಲು ಈಗಾಗಲೇ ಕಸರತ್ತು ಶುರು ಮಾಡಿದ್ದಾರೆ.

ಜೂನ್ 30ಕ್ಕೆ ಪರಿಷತ್​ನಲ್ಲಿ ಚುನಾಯಿತ ಸ್ಥಾನಗಳ ಅವಧಿ ಮುಗಿಯಲಿರುವ ಪಟ್ಟಿ:
1) ಜಯಮ್ಮ (ಕಾಂಗ್ರೆಸ್)
2) ಹೆಚ್.ಎಂ. ರೇವಣ್ಣ (ಕಾಂಗ್ರೆಸ್)
3) ನಸೀರ್ ಅಹ್ಮದ್ (ಕಾಂಗ್ರೆಸ್)4) ಎಂ.ಸಿ. ವೇಣುಗೋಪಾಲ್ (ಕಾಂಗ್ರೆಸ್)
5) ಎನ್.ಎಸ್. ಬೋಸ್​ರಾಜು (ಕಾಂಗ್ರೆಸ್)
6) ಟಿ.ಎ. ಸರವಣ (ಜೆಡಿಎಸ್)
7) ಡಿ.ಯು. ಮಲ್ಲಿಕಾರ್ಜುನ (ಪಕ್ಷೇತರ)

ಜೂನ್ 23ಕ್ಕೆ ಅವಧಿ ಮುಗಿಯಲಿರುವ ನಾಮನಿರ್ದೇಶಿತ ಸದಸ್ಯರು:
1) ಕೆ. ಅಬ್ದುಲ್ ಜಬ್ಬಾರ್
2) ತಿಪ್ಪಣ್ಣಪ್ಪ ಕಮಕನೂರು
3) ಇಕ್ಬಾಲ್ ಅಹ್ಮದ್
4) ಐವಾನ್ ಡಿಸೋಜಾ
5) ಜಯಮಾಲಾ

ಜೂನ್ 30ಕ್ಕೆ ಖಾಲಿ ಉಳಿಯುವ ಪದವೀಧರ ಕ್ಷೇತ್ರಗಳು:
1) ಚೌಡರೆಡ್ಡಿ ತೂಪಳ್ಳಿ (ಜೆಡಿಎಸ್), ಆಗ್ನೇಯ ಪದವೀಧರ ಕ್ಷೇತ್ರ
2) ಎಸ್.ವಿ. ಸಂಕನೂರು (ಬಿಜೆಪಿ), ಪಶ್ಚಿಮ ಪದವೀಧರ ಕ್ಷೇತ್ರ

ಜೂನ್ 30ಕ್ಕೆ ಖಾಲಿ ಉಳಿಯುವ ಶಿಕ್ಷಕರ ಕ್ಷೇತ್ರಗಳು
1) ಶರಣಪ್ಪ ಮತ್ತೂರು (ಕಾಂಗ್ರೆಸ್), ಈಶಾನ್ಯ ಶಿಕ್ಷಕರ ಕ್ಷೇತ್ರ
2) ಪುಟ್ಟಣ್ಣ (ಬಿಜೆಪಿ), ಬೆಂಗಳೂರು ಕ್ಷೇತ್ರ

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close