ಕರ್ನಾಟಕ ಸುದ್ದಿ

ATMಗೆ ತುಂಬಬೇಕಾಗಿದ್ದ 1 ಕೋಟಿ ರೂ. ಹಣದೊಂದಿಗೆ ಏಜೆನ್ಸಿಯ ನೌಕರ ಪರಾರಿ

Posted by : Sirajuddin Bangar

Source : NS18

 1 ಕೋಟಿ ರೂ. ಹಣದ ಜತೆ ನಾಪತ್ತೆಯಾದ ಅಶೋಕ್ ವಿರುದ್ದ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಲಾಗಿದೆ. ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿ ಮ್ಯಾನೇಜರ್ ರಾಜು‌ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರು (ಮೇ 18): ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಎಟಿಎಂಗೆ ತುಂಬ ಬೇಕಾಗಿದ್ದ 1 ಕೋಟಿ ರೂ. ಹಣದ ಸಮೇತ ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿ ನೌಕರ ಪರಾರಿಯಾಗಿರುವ ಘಟನೆ ನಡೆದಿದೆ. ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿ ನೌಕರ ಅಶೋಕ್ 1 ಕೋಟಿ ರೂ.ನೊಂದಿಗೆ ಪರಾರಿಯಾಗಿದ್ದಾನೆ.

ಮೇ 14ರಂದು ಎಟಿಎಂಗಳಿಗೆ ಹಣ ತುಂಬಲು ಸೆಕ್ಯೂರ್ ವ್ಯಾಲ್ಯೂ ಸಂಸ್ಥೆ 4.5 ಕೋಟಿ ರೂ. ಹಣವನ್ನು ಡ್ರಾ ಮಾಡಬೇಕಿತ್ತು. ಹೀಗಾಗಿ, 3.5 ಕೋಟಿ ರೂ. ಹಣವನ್ನು ಡ್ರಾ ಮಾಡಿ ರಾಮು ಮತ್ತು ಶ್ರೀನಿವಾಸ್​ಗೆ ಅಶೋಕ್ ಕೊಟ್ಟಿದ್ದ. ನಂತರ ಬಾಕಿ 1 ಕೋಟಿ ರೂ. ಹಣವನ್ನು ಡ್ರಾ ಮಾಡಿಕೊಂಡು ಅಶೋಕ್ ಪರಾರಿಯಾಗಿದ್ದಾನೆ. ಸೇಂಟ್ ಮಾರ್ಕ್ ರಸ್ತೆಯಲ್ಲಿರುವ ಎಸ್​ಬಿಐ ಬ್ಯಾಂಕ್​ನಿಂದ ಡ್ರಾ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ.

1 ಕೋಟಿ ರೂ. ಹಣದ ಜತೆ ನಾಪತ್ತೆಯಾದ ಅಶೋಕ್ ವಿರುದ್ದ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಲಾಗಿದೆ. ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿ ಮ್ಯಾನೇಜರ್ ರಾಜು‌ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಅಶೋಕ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close