
Published By : Sirajudidn Bangar
Source : NS18
ನಾಲ್ಕನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದರೂ ಸಿಎಂ ಬಿ.ಎಸ್ ಯಡಿಯೂರಪ್ಪ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿ ರಾಜ್ಯ ರಸ್ತೆ ಸಾರಿಗೆ ಬಸ್ಗಳು, ಆಟೋ ಮತ್ತು ಟ್ಯಾಕ್ಸಿಗಳು ನಾಳೆಯಿಂದ ಎಂದಿನಂತೆ ರಸ್ತೆಗಿಳಿಯಬಹುದು ಎಂದು ಘೋಷಿಸಿದ್ದಾರೆ.
ಬೆಂಗಳೂರು(ಮೇ.18): ಕರ್ನಾಟಕ ಸರ್ಕಾರ ಜನಸಂದಣಿ ಉಂಟಾಗಬಹುದಾದ ಚಟುವಟಿಕೆ ಹೊರತುಪಡಿಸಿ ನಾಳೆಯಿಂದ ಸಾರ್ವಜನಿಕ ಹಾಗೂ ಖಾಸಗಿ ಸಾರಿಗೆ ಸಂಚಾರ ಮತ್ತು ವ್ಯಾಪಾರ ವಹಿವಾಟು ಮಾಡಲು ಸಂಪೂರ್ಣ ಅವಕಾಶ ನೀಡಿದೆ. ನಾಲ್ಕನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದರೂ ಸಿಎಂ ಬಿ.ಎಸ್ ಯಡಿಯೂರಪ್ಪ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿ ರಾಜ್ಯ ರಸ್ತೆ ಸಾರಿಗೆ ಬಸ್ಗಳು, ಆಟೋ ಮತ್ತು ಟ್ಯಾಕ್ಸಿಗಳು ನಾಳೆಯಿಂದ ಎಂದಿನಂತೆ ರಸ್ತೆಗಿಳಿಯಬಹುದು ಎಂದು ಘೋಷಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಲು ರೆಡ್ ಜೋನ್ ಬಿಟ್ಟು ಎಲ್ಲೆಡೆಯೂ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನಾಳೆಯಿಂದಲೇ ಬಸ್ ಸಂಚಾರ ಪ್ರಾರಂಭವಾಗಲಿದೆ. ಖಾಸಗಿ ಬಸ್ ಸಹ ಪ್ರಾರಂಭವಾಗಲಿದ್ದು, ಕೇವಲ ಮೂವತ್ತು ಮಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದರು.
ಇನ್ನು, ಕೆಎಸ್ಆರ್ಟಿಸಿ, ಬಿಎಂಟಿಸಿ ನಾಳೆ ರಸ್ತೆಗಳಿಯಲಿವೆ. ಎಲ್ಲಾ ಕಡೆ ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕು. ಹೊರ ರಾಜ್ಯದಿಂದ ಬರುವವರಿಗೆ ಹಂತ ಹಂತವಾಗಿ ಕ್ವಾರಂಟೈನ್ ಕ್ರಮ ಮುಂದುವರೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅನಿವಾರ್ಯ ಬಿಟ್ಟು ಜನ ಬೇರೆ ಕಾರಣಕ್ಕೆ ಬರಂಗಿಲ್ಲ ಎಂದು ಎಚ್ಚರಿಕೆ ನೀಡಿದರು.
ಆಟೋ ,ಟ್ಯಾಕ್ಸಿಯಲ್ಲಿ ಚಾಲಕರು ಬಿಟ್ಟು ಇಬ್ಬರು ಮಾತ್ರ ಇರಬೇಕು. ನಾಳೆಯಿಂದಲೇ ಆಟ ಮತ್ತು ಟ್ಯಾಕ್ಸಿಗೆ ಅನುಮತಿ ನೀಡಲಾಗಿದೆ. ಮಾಲ್, ಸಿನಿಮಾ ಹೋಟೆಲ್ ಬಿಟ್ಟು ಎಲ್ಲಾ ಅಂಗಡಿ ತೆರೆಯಬಹುದು. ಟ್ರೈನ್ ನಮ್ಮ ರಾಜ್ಯದ ಒಳಗೆ ಸಂಚಾರ ಮಾಡಬಹದು. ಸೆಲ್ಯೂನ್ ಓಪನ್ಗೆ ಅವಕಾಶ ನೀಡಿದ್ದೇವೆ ಎಂದು ಹೇಳಿದರು.
ಪ್ರತಿ ಭಾನುವಾರ ಕಂಪ್ಲೀಟ್ ಲಾಕ್ಡೌನ್ ಮಾಡಲಾಗುವುದು. ಭಾನುವಾರ ಸಂಪೂರ್ಣ ಎಲ್ಲರೂ ರೆಸ್ಟ್ ಮಾಡಬೇಕು, ಎಲ್ಲಿಯೂ ಓಡಾಡುವ ಆಗಿಲ್ಲ. ಪಾರ್ಕ್ ಬೆಳಿಗ್ಗೆ 7 ರಿಂದ 9:30 ಮತ್ತು ಸಂಜೆ 5ರಿಂದ 7 ಎಲ್ಲಾ ಓಡಾಡಲು ಅವಕಾಶ ಕೊಡಲಾಗಿದೆ ಎಂದರು.
ಬೆಂಗಳೂರು ಹೆಚ್ಚು ಕೋವಿಡ್ 19 ಕೇಸ್ ಇರುವ ಪ್ರದೇಶ ಬಿಟ್ಟು ಉಳಿದ ಕಡೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮೇ31 ವರೆಗೂ ನೋಡ್ತೀವಿ. ಮುಂದಿನ ಬೆಳವಣಿಗೆ ನೋಡಿ ಎಲ್ಲವೂ ತೀರ್ಮಾನ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಬಸ್ ಚಾರ್ಜ್ ಜಾಸ್ತಿ ಮಾಡಲ್ಲ. ರಾತ್ರಿ ಏಳು ಗಂಟೆಯಿಂದ ಬೆಳಗ್ಗೆ ಏಳು ಗಂಟೆವರೆಗೂ ಕರ್ಪ್ಯೂ ಇರುತ್ತೆ. ಬೀದಿ ಬದಿ ವ್ಯಾಪಾರಿಗಳಿಗೆ ಅನಮತಿ ಕೊಟ್ಟಿದ್ದೇವೆ. ಜಿಮ್ ತೆರೆಯಲು ಅವಕಾಶ ಇಲ್ಲ ಎಂದು ತಿಳಿಸಿದರು.