ಅಪರಾಧಕರ್ನಾಟಕ ಸುದ್ದಿ

ದಲಿತ ಯುವಕನ ಮೇಲೆ ಪುಂಡ ಯುವಕರಿಂದ ಮಾರಣಾಂತಿಕ ಹಲ್ಲೆ; ಆರೋಪ

Source : NS18

ಈ ಪುಂಡರ ಗ್ಯಾಂಗ್ ಗ್ರಾಮದ ಹೊರವಲಯದಲ್ಲಿ ಗಾಂಜಾ ಸೇವನೆ ಮಾಡುತ್ತಾರೆ. ಸಂಜೆ ಶಾಲೆ, ಕೆರೆ ಅಂಗಳದಲ್ಲಿ ಬೀಡು ಬಿಟ್ಟು ಗಾಂಜಾ ಸೇವನೆಯಲ್ಲಿ ತೊಡುತ್ತಾರೆ. ಗಾಂಜಾ ಅಮಲಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುತ್ತಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಕೂಡಲೇ ಈ ಪುಂಡರ ಗ್ಯಾಂಗ್ ಮಟ್ಟಹಾಕುವಂತೆ ಗ್ರಾಮಸ್ಥರು ಪೋಲಿಸರಿಗೆ ಒತ್ತಾಯಿಸಿದ್ದಾರೆ.

ತುಮಕೂರು: ಕ್ಷುಲ್ಲಕ ವಿಚಾರಕ್ಕೆ ದಲಿತ ಯುವಕನ ಮೇಲೆ ಅನ್ಯಜಾತಿಯ ಪುಂಡ ಯುವಕರು ಮಾರಣಾಂತಿಕ ಹಲ್ಲೆ ನಡೆಸಿ, ಮನೆಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಂಗಡಿಗೆ ಅಡ್ಡಲಾಗಿ ನಿಲ್ಲಿಸಿದ್ದ ಬೈಕ್ ತೆಗೆಯಲು ಹೇಳಿದ್ದಕ್ಕೆ ಮಲ್ಲನಾಯಕನಹಳ್ಳಿ ಗ್ರಾಮದ ದಲಿತ ಯುವಕ ಮೂರ್ತಿ ಎಂಬಾತನಿಗೆ ಪಕ್ಕದ ಗೊಲ್ಲರಹಟ್ಟಿ ಗ್ರಾಮದ ಯುವಕರು ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ರಾತ್ರಿ ಮನೆಗೆ ನುಗ್ಗಿದ ಪುಂಡರ ಗುಂಪು ಮನೆಯ ಪಾತ್ರೆ ಪಗಡೆಗಳನ್ನ ಬೀದಿಗೆಸೆದು ರೌಡಿಗಳಂತೆ ವರ್ತಿಸಿದ್ದಾರೆ. ಅಲ್ಲದೇ ಆಗಲೂ ಮೂರ್ತಿಗೆ ಹಲ್ಲೆ ಮಾಡಲು ಹುಡುಕಾಡಿದ್ದಾರೆ.‌ ಆದರೆ, ಯುವಕ ಮೂರ್ತಿ ಸಿಗದ ಕಾರಣ ಮನೆ ಮುಂದಿದ್ದ ಬೈಕ್ ಹೊತ್ತೊಯ್ತಿದ್ದಾರೆ ಎಂದು ಹಲ್ಲೆಗೊಳಗಾದ ಮೂರ್ತಿ ಆರೋಪಿಸಿದ್ದಾರೆ.

ಘಟನೆಯಿಂದ ಬೆಚ್ಚಿಬಿದ್ದ ಮಲ್ಲನಾಯಕನಹಳ್ಳಿ ಗ್ರಾಮಸ್ಥರು ಮಿಡಿಗೇಶಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪುಂಡರ ಗ್ಯಾಂಗ್ ಗ್ರಾಮದ ಹೊರವಲಯದಲ್ಲಿ ಗಾಂಜಾ ಸೇವನೆ ಮಾಡುತ್ತಾರೆ. ಸಂಜೆ ಶಾಲೆ, ಕೆರೆ ಅಂಗಳದಲ್ಲಿ ಬೀಡು ಬಿಟ್ಟು ಗಾಂಜಾ ಸೇವನೆಯಲ್ಲಿ ತೊಡುತ್ತಾರೆ. ಗಾಂಜಾ ಅಮಲಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುತ್ತಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಕೂಡಲೇ ಈ ಪುಂಡರ ಗ್ಯಾಂಗ್ ಮಟ್ಟಹಾಕುವಂತೆ ಗ್ರಾಮಸ್ಥರು ಪೋಲಿಸರಿಗೆ ಒತ್ತಾಯಿಸಿದ್ದಾರೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close