
Posted By : Sirajuddin Bangar
Source : NS1
ಇದೀಗ ಧಾರವಾಡ ಉಪನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಉಮಾ ಒಟ್ಟು 7 ಜನರು ಸೇರಿ ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾಳೆ.
ಧಾರವಾಡ(ಮೇ.17): ನಗರದ ಕಮಲಾಪುರ ಬಡಾವಣೆಯಲ್ಲಿ ನಡೆದ ವಿಕಲಚೇತನ ವ್ಯಕ್ತಿಯ ಕೊಲೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವಿಕಲಚೇತನ ವ್ಯಕ್ತಿ ಉಮೇಶ ಬಾಳಗಿಯನ್ನು ಆತನ ಸಹೋದರರಾದ ಚೆನ್ನಪ್ಪ ಬಾಳಗಿ(23) ಮತ್ತು ಬಸಪ್ಪ ಬಾಳಗಿ (20) ಮಧ್ಯಾಹ್ನ ರಸ್ತೆ ನಡುವೆ ಭೀಕರವಾಗಿ ಹತ್ಯೆಗೈಯಲಾಗಿತ್ತು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆಸಲಾಗಿದೆ ಎನ್ನಲಾಗಿದೆ. ಹಲವಾರು ವರ್ಷಗಳಿಂದ ಎರಡೂ ಕುಟುಂಬದ ನಡುವೆ 13 ಗುಂಟೆ ಜಾಗದ ವಿಚಾರವಾಗಿ ಜಗಳ ನಡೆಯುತ್ತಿತ್ತು. ಇದೇ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.
ಮೇ.15 ರ ಶುಕ್ರವಾರ ಮನೆಯಿಂದ ಹೊರಗೆ ಹೋಗುತ್ತಿದ್ದ ಉಮೇಶನ ಜೊತೆ ಜಗಳ ಶುರುವಾದ ಬಳಿಕ ಆತನ ಮೇಲೆ ಇಬ್ಬರು ಅಣ್ಣಂದಿರು ಹಲ್ಲೆ ಮಾಡಿ ಕೊಲೆಗೈಯುತ್ತಾರೆ. ಹಾರಿ ಹಾಗೂ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಅದೂ ಕೂಡ ಉಮೇಶನ ಪತ್ನಿ ಸಮಾ ಬಾಳಗಿ ಎದುರಲ್ಲಿಯೇ ನಡೆದು ಹೋಗಿದೆ. ಪತಿಯ ಹಲ್ಲೆಕಂಡು ನಿಸ್ಸಾಯಕಳಾಗಿ ಕೂಗಿಕೊಳ್ಳಲು ಮುಂದಾದ ಉಮಾಳನ್ನು ಕಂಡು, ಆರೋಪಿಗಳು ಉಮಾಳ ಮೇಲೆ ಹಲ್ಲೆ ಮಾಡಲು ಇಬ್ಬರೂ ಓಡಿ ಬಂದಾಗ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಆಕೆ ಬಚಾವ್ ಆಗುತ್ತಾಳೆ. ಈ ಎಲ್ಲ ದೃಶ್ಯಗಳು ಕೊಲೆಯಾದ ಉಮೇಶ ಅವರ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಧಾರವಾಡ ಉಪನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಉಮಾ ಒಟ್ಟು 7 ಜನರು ಸೇರಿ ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾಳೆ. ಆದರೆ, ಕ್ಯಾಮರಾದಲ್ಲಿ ಇಬ್ಬರು ಕೊಲೆ ಮಾಡಿರುವುದು ಮಾತ್ರ ಸೆರೆಯಾಗಿದೆ. ಅಲ್ಲದೇ ಮೊದಲಿಗೆ ಉಮಾ ಸಿಸಿ ಟಿವಿಯ ಡಿವಿಆರ್ ನ್ನು ಕೊಲೆಗಾರರೇ ಹೊತ್ತೊಯ್ದಿದ್ದಾರೆ ಅಂತಾ ಹೇಳಿದ್ದರು. ಆದರೆ, ಪೊಲೀಸರ ತನಿಖೆ ಬಳಿಕ ಉಮಾ ಬಳಿಯೇ ಡಿವಿಆರ್ ಇತ್ತು. ಉಮಾ ನಿಂದ ಡಿವಿಆರ್ ವಶ ಪಡಿಸಿಕೊಂಡು ಇಬ್ಬರ ಮೇಲೆ ಪ್ರಕರಣ ದಾಖಲು ಮಾಡಿಕೊಂದಿದ್ದಾರೆ.
ಕೊಲೆಗೆ ಆಸ್ತಿ ವಿಚಾರನಾ ಅಥವಾ ಬೇರೆ ಯಾವುದಾದರು ಗಲಾಟೆ ಇರಬಹುದಾ ಎಂಬುದು ಪೊಲೀಸರು ತನಿಖೆ ಬಳಿಕೆ ಸತ್ಯಾಂಶ ಹೊರ ಬರಲಿದೆ.