
ವರದಿ : ಆಲಂ ಗಬ್ಬೂರು
ದೇಶದಲ್ಲಿ ಲಾಕ್ ಡೌನ್ ಹೇರಿದ ಸಂಧರ್ಭದಲ್ಲಿ 50 ದಿನಗಳ ಕಾಲ ಊಟ ವಿತರಿಸಿದ ಸಂತೋಷ ಆಲ್ಕೋಡ್ ಸಾದಿಖ್ ಖಾನ್ ಅವರಿಗೆ ಸನ್ಮಾನ
ಕೊರೊನ ವೈರಸ್ ಮಹಾಮಾರಿ ಭೀತಿಯಿಂದ ದೇಶದ್ಯಾಂತ ಲಾಕ್ ಡೌನ್ಮಾಡಿದ ಸಂಧರ್ಭದಲ್ಲಿ ನಿರ್ಗತಿಕ ಜನರು ತತ್ತರಿಸಿ ಹಸಿವಿನಿಂದ ಕಂಗಾಲಾಗಿದ್ದರು ಇಂತಹ ಸಮಯದಲ್ಲಿ ನಿರಂತರವಾಗಿ 50 ದಿನಗಳ ಕಾಲ ಮನೇಲಿ ಅಡುಗೆ ಮಾಡಿಕೊಂಡು ಹಸಿದರ ತುಂಬಿಸಿದ ಆಲ್ಕೋಡ್ ಸಂತೋಷ್ ಮತ್ತು ಸಾದಿಖ್ ಖಾನ್ ಯರಗೇರಾ ಅವರಿಗೆ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ಜಿಲ್ಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ಪಲುಗುಲ್ಲ ಮಾತನಾಡಿ ಅದೆಷ್ಟೋ ಜನರು 4 ದಿನ ಸೇವೆ ಮಾಡಿ ಪ್ರಚಾರ ಗಿಟ್ಟಿಸಿಕೊಂಡು ಣುಚಿಕೊಳ್ಳೋರು ಇದ್ದಾರೆ ಆಲ್ಕೋಡ್ ಸಂತೋಷ್ ಮತ್ತು ಸಾದಿಖ್ ಯರಗೇರಾ ನಿರಂತರವಾಗಿ 50 ದಿನಗಳ ಕಾಲ ಊಟವನ್ನು ತೆಗೆದುಕೊಂಡು ಹೋಗಿ ಹಸಿದವರ ಒಡಲಿಗೆ ನೀಡಿರುವುದು ಶ್ಲಾಘನೀಯ
ಈ ಯುವಕರ ಕಾರ್ಯ ಮಾದರಿಯಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷಣಿ DR.ಅರುಣಾ ಹಿರೇಮಠ ಮಾತನಾಡಿದರು.
ಈ ಸಂಧರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ವೆಂಕಟೇಶ್ ಆಲ್ಕೋಡ್ ಪಾಲುಗುಲ್ಲ ವೀರೇಶ್, ಪಾಲುಗುಲ ಚಿನ್ನಯ್ಯ ಅನಿಲ ಅಪ್ರಲ್ ಹಾಗೂ ಸಂತೋಷ್ ಆಲ್ಕೋಡ್ ತಾಯಿ ರಾಜೇಶ್ವರಿ ಅಜ್ಜಿ ತುಳಸಮ್ಮ ಉಪಸ್ಥಿತರಿದ್ದರು.