ಅಪರಾಧಕರ್ನಾಟಕ ಸುದ್ದಿ

ಬ್ರೇಕಿಂಗ್ ನ್ಯೂಸ್ : ಸ್ಯಾಂಡಲವುಡ್ ಕಲಾವಿದನ ಬರ್ಬರ ಹತ್ಯೆ..!

Posted By : Sirajuddin Bangar, Editor

Source : NS18 CRIME NEWS

ಬೆಂಗಳೂರು (ಮೇ 17): ಲಾಕ್​ಡೌನ್​ನಿಂದಾಗಿ ಅಪಘಾತ ಹಾಗೂ ಕೊಲೆ ಪ್ರಕರಣಗಳು ಕಡಿಮೆ ಆಗಿವೆ. ಪೊಲೀಸರು ಹೆಚ್ಚು ಸುತ್ತಾಟ ನಡೆಸುತ್ತಿರುವುದು ಅಪರಾಧ ಪ್ರಕರಣಗಳು ಕಡಿಮೆ ಆಗಲು ಪ್ರಮುಖ ಕಾರಣ. ಈ ಮಧ್ಯೆ ಬೆಂಗಳೂರಲ್ಲಿ ನಡೆದ ಬರ್ಬರ ಹತ್ಯೆಗೆ ಜನತೆ ಬೆಚ್ಚಿ ಬಿದ್ದಿದೆ.  

ವಿಜಯ ಕುಮಾರ್(30) ಕೊಲೆಯಾದ ವ್ಯಕ್ತಿ. ಬೆಂಗಳೂರಿನ ಆರ್.ಆರ್. ನಗರದಲ್ಲಿ ಈ ಕೊಲೆ ನಡೆದಿದೆ. ರಸ್ತೆ ಬದಿಯಲ್ಲಿ ಕರೆದು, ಈತನ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಸದ್ಯ, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರೀಕ್ಷೆ ನಡೆಸಿದ್ದಾರೆ.

ವಿಜಯ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು.  ನಟ ಕಿಚ್ಚ ಸುದೀಪ್ ಅಭಿಮಾನಿ  ಬಳಗದಲ್ಲಿ ಸಕ್ರಿಯ ಸದಸ್ಯನಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದರು.

ಆರ್ಮುಗಂ ದೇವಸ್ಥಾನದ ಸಮೀಪ ಈ ಕೊಲೆ ನಡೆದಿದೆ. ತಡರಾತ್ರಿ ದುಷ್ಕರ್ಮಿಗಳು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಅಂದಹಾಗೆ ಈ ಕೊಲೆ ನಡೆಯಲು ಕಾರಣವೇನು ಎನ್ನುವುದು ಇನ್ನು ತಿಳಿದು ಬಂದಿಲ್ಲ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close