ಕರ್ನಾಟಕ ಸುದ್ದಿ

ಕಲಬುರ್ಗಿಯ ಮೋಮಿನಪುರ ಕೊರೋನಾ ಹಾಟ್ ಸ್ಟಾಟ್ ; ಮನೆ ಮನೆ ಸ್ಕ್ರೀನಿಂಗ್ ಆರಂಭಿಸಿದ ಜಿಲ್ಲಾಡಳಿತ

ವರದಿ : ಶಾಂತರೆಡ್ಡಿ ಕಲ್ಬುರ್ಗಿ, ಕರ್ನಾಟಕ ಜ್ವಾಲೆ

ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದರೂ, ಮೋಮಿನಪುರದಲ್ಲಿ ಸೋಂಕು ಹತೋಟಿಗೆ ಬರುತ್ತಿಲ್ಲ. ಹೀಗಾಗಿ ಜನ ಮೋಮಿನಪುರವೆಂದ್ರೆ ಬೆಚ್ಚಿ ಬೀಳುತ್ತಾರೆ.

ಕಲಬುರ್ಗಿ(ಮೇ.17): ಕಲಬುರ್ಗಿಯಲ್ಲಿ ಮೋಮಿನಪುರ ಕೊರೋನಾ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಮೋಮಿನಪುರ ಅಂದ್ರೆ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೇ ಬಡಾವಣೆಯಲ್ಲಿ ಇದುವರೆಗೆ 32 ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಇದರ ಅಕ್ಕಪಕ್ಕದ ಪ್ರದೇಶಗಳಿಗೂ ವ್ಯಾಪಿಸಿರುವ ಸೋಂಕು. ಪೇಷಂಟ್ 205 ರಿಂದ ಹಾಟ್ ಸ್ಪಾಟ್ ಹಿಸ್ಟರಿ ಆರಂಭಗೊಂಡಿದ್ದು, ಅದಕ್ಕೆ ಇನ್ನೂ ತೆರೆ ಬಿದ್ದಿಲ್ಲ. 55 ವರ್ಷದ ವ್ಯಕ್ತಿ ಬಟ್ಟೆ ಅಂಗಡಿ ಹೊಂದಿದ್ದ. ಚಿಕಿತ್ಸೆ ಫಲಿಸದೆ 55 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದ. ಆತನೊಬ್ಬನಿಂದಲೇ ಸುಮಾರು 23 ಜನರಿಗೆ ಸೋಂಕು ತಗುಲಿದೆ. ಅದೇ ಬಡಾವಣೆಯಲ್ಲಿ ಕೊರೋನಾ ವ್ಯಾಪಕ ಸ್ವರೂಪ ಪಡೆದುಕೊಂಡಿದೆ.

ಶನಿವಾರವೂ ಇದೇ ಪ್ರದೇಶದ ಏಳು ಜನರಿಗೆ ಸೋಂಕು ದೃಢಪಟ್ಟಿದೆ. ಇದರ ಅಕ್ಕ-ಪಕ್ಕದ ಬಡಾವಣೆಗಳಲ್ಲಿಯೂ ಸೋಂಕು ವ್ಯಾಪಿಸಿದೆ. ಪುಟಾಣಿ ಗಲ್ಲಿ, ಹಳೆ ಭೋವಿ ಗಲ್ಲಿ, ಮಿಲಂದ್ ಚೌಕ್, ಗಾಜಿಪುರ, ಸಾತ್ ಗುಂಬಜ್ ಮತ್ತಿತರ ಕಡೆಯೂ ಸೋಂಕು ಕಾಣಿಸಿಕೊಂಡಿದೆ. ಅಲ್ಲಿಯೂ ಎಂಟು ಜನರಿಗೆ ಸೋಂಕಿರುವುದು ದೃಢಪಟ್ಟಿದೆ. ಜೊತೆಗೆ ಆ ಪ್ರದೇಶದಲ್ಲಿ ಇಬ್ಬರ ಸಾವನ್ನಪ್ಪಿದ್ದಾರೆ. ಮತ್ತಷ್ಟು ಜನರಿಗೂ ಸೋಂಕು ವ್ಯಾಪಿಸುವ ಭೀತಿ ಎದುರಾಗಿದೆ.

ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದರೂ, ಮೋಮಿನಪುರದಲ್ಲಿ ಸೋಂಕು ಹತೋಟಿಗೆ ಬರುತ್ತಿಲ್ಲ. ಹೀಗಾಗಿ ಜನ ಮೋಮಿನಪುರವೆಂದ್ರೆ ಬೆಚ್ಚಿ ಬೀಳುತ್ತಾರೆ. ಅತಿ ಹೆಚ್ಚು ಪ್ರಕರಣ ಕಂಡು ಬಂದ ಹಿನ್ನೆಲೆ ಆರೋಗ್ಯ ಇಲಾಖೆ ಮೋಮಿನಪುರದಲ್ಲಿ ರಾಂಡಮ್ ಆಗಿ ಥ್ರೋಟ್ ಸ್ಯಾಂಪಲ್ ಸಂಗ್ರಹ ಆರಂಭಿಸಿದೆ.  ಮನೆ ಮನೆ ಸ್ಕ್ರೀನಿಂಗ್ ಆರಂಭಿಸಿದ್ದು, 6078 ಜನರ ಸ್ಕ್ರೀನಿಂಗ್ ಮಾಡಲಾಗಿದೆ. ಹೈ ರಿಸ್ಕ್ ಇರುವ ಮತ್ತು 60 ವರ್ಷ ದಾಟಿದ 99 ಜನರ ಥ್ರೋಟ್ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಿಕೊಡಲಾಗಿದೆ.

ಮೋಮಿನಪುರ ಪ್ರದೇಶ ಒಳಗೊಂಡಂತೆ ವಾರ್ಡ್ ಸಂಖ್ಯೆ 23, 24, ಹಾಗೂ 25 ರಲ್ಲಿ ನಾಲ್ಕು ಸಾವಿರ ಮನೆಗಳ 21,320 ಜನರ ಸ್ಕ್ರೀನಿಂಗ್ ಮಾಡುವ ಗುರಿ ಹೊಂದಲಾಗಿದೆ. ಪ್ರತಿ ಸ್ಕೀನಿಂಗ್ ತಂಡದಲ್ಲಿ ಓರ್ವ ವೈದ್ಯ, ಅಂಗನವಾಡಿ ಕಾರ್ಯಕರ್ತೆ ಮತ್ತು ಗಂಟಲ ದ್ರವ ಪಡೆಯಲು ತಾಂತ್ರಿಕ ಸಿಬ್ಬಂದಿ ಇರಲಿದ್ದಾರೆ. ತಪಾಸಣೆ ಕಾರ್ಯದ ಉಸ್ತುವಾರಿಯನ್ನು ಆರೋಗ್ಯ ಇಲಾಖೆಯ ಕಂಟೈನ್ ಮೆಂಟ್ ಝೋನ್ ನೋಡಲ್ ಅಧಿಕಾರಿ ಡಾ.ವೇಣುಗೋಪಾಲ ಅವರಿಗೆ ವಹಿಸಲಾಗಿದೆ.

ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರಿಕೆ:

ಕೊರೋನಾ ವ್ಯಾಪಕ ಹಿನ್ನೆಲೆಯಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರಿಕೆ ಮಾಡಲಾಗಿದೆ. ಮೇ 31 ರವರೆಗೆ ನಿಷೇಧಾಜ್ಞೆ ಮುಂದುವರಿಸಲಾಗಿದೆ. ನಿಷೇಧಾಜ್ಞೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್ ಬಿ ಆದೇಶ ಹೊರಡಿಸಿದ್ದಾರೆ. ಇಂದು ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಲ್ಲಿತ್ತು. ಅಗತ್ಯ ಸೇವೆಗಳಿಗೆ ಈ ಆದೇಶ ಅನ್ವಯವಿಲ್ಲ. ಸಾಮೂಹಿಕ’ ಧಾರ್ಮಿಕ, ವೈಯಕ್ತಿಕ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಗುಂಪು ಗುಂಪಾಗಿ ಸೇರುವಂತಿಲ್ಲ. ಅನಗತ್ಯವಾಗಿ ಅಡ್ಡಾಡುವಂತೆಯೂ ಇಲ್ಲ. ಹಲವು ಷರತ್ತು ವಿಧಿಸಿ ನಿಷೇಧಾಜ್ಞೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close