ಮಾನವಿರಾಯಚೂರು ಜಿಲ್ಲೆ ಸುದ್ದಿಸಿರವಾರ

ಸಿರವಾರ : ಗಣದಿನ್ನಿ ಕಾಲುವೆ ಹತ್ತೀರ ಭಿಕರ ರಸ್ತೆ ಅಪಘಾತ 35ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ವರದಿ : ಸಿರಾಜುದ್ದೀನ್ ಬಂಗಾರ್

ಸಿರವಾರ ಮೇ.16 : ಸಿರವಾರ ಪಟ್ಟಣದ ಹತ್ತಿರದಲ್ಲಿರುವ ಗಣದಿನ್ನಿ ಕಾಲುವೆ ಹತ್ತಿರ ಭಿಕರ ರಸ್ತೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ 35ಕ್ಕೂ ಹೆಚ್ಚು ಜನರು ಗಂಭೀರ ಗಾಯಕ್ಕೊಳಗಾಗಿದ್ದಾರೆ,ಅವರನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರು ರಿಮ್ಸ್ ಅಸ್ಪತ್ರಗೆ ಕಳುಹಿಸಲಾಗಿದೆ.

ಗಣದಿನ್ನಿ ಗ್ರಾಮದಲ್ಲಿ ನರೇಗಾ ಕೂಲಿಕಾರ್ಮಿಕರು ಕೇಲಸ ಮುಗಿಸಿಕೊಂಡು ಮನೆಗೆ ಮರಳುತ್ತೀರುವಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಬೆಳ್ಳಿಗೆ ಸುಮಾರು 11:30 ರ ಹೊತ್ತಿಗೆ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಗಾಯಗೊಂಡ ಜನರನ್ನು ಹತ್ತಿರದ ಸಿರವಾರ ತಾಲೂಕ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ಕರೆತಂದಿದ್ದು, ಗಂಭಿರವಾಗಿ ಗಾಯಗೊಂಡವರಿಗೆ ಮಾನ್ವಿ ತಾಲೂಕು ವೈದ್ಯಾಧಿಕಾರಿಗಳಾದ ಡಾ:ಚಂದ್ರಶೇಖರಯ್ಯ, ಸಿರವಾರ ಆರೋಗ್ಯ ಅಧಿಕಾರಿಗಳಾದ ಡಾ:ಪರಿಮಳ ರಾಠೋಡ, ಡಾ:ಸುನೀಲ್ ಸರೋದೆ ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ರೋಗಿಗಳನ್ನು 108 ವಾಹನ ಮುಖಾಂತರ ಕಳುಹಿಸಿಲಾಗಿದೆ. ದೇವರ ದಯೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close