ಅಂತರಾಷ್ಟ್ರೀಯ

ಬ್ರೆಕೀಂಗ್ ನ್ಯೂಸ್ ; ರೈತರು ಕಿಸಾನ್​ ಕ್ರೆಡಿಟ್​ ಕಾರ್ಡ್​ ಪಡೆಯೋದು ಹೇಗೆ, ಇದರ ಲಾಭಗಳೇನು?; ಇಲ್ಲಿದೆ ಮಾಹಿತಿ

Posted By : Sirajuddin Bangar

Source: NS18

How To Apply Kisan Credit Card: ಮೀನುಗಾರಿಕೆ ಮತ್ತು ಪಶುಸಂಗೋಪನೆ ವೃತ್ತಿಯಲ್ಲಿರುವವರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಕೊಡುವುದಾಗಿ ಸರ್ಕಾರ ಹೇಳಿದೆ. ರೈತರಿಗೆ ಸಾಕಷ್ಟು ಲಾಭಗಳಿರುವ ಈ ಕಾರ್ಡನ್ನು ಪಡೆಯೋದು ಹೇಗೆ? ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ದೇಶಾದ್ಯಂತ 2.5 ಕೋಟಿ ಜನರು ಕಿಸಾನ್​ ಕಾರ್ಡ್ ಹೊಂದಿದ್ದಾರೆ. ಕಿಸಾನ್​ ಕಾರ್ಡ್​ ಹೊಂದಿರುವವರಿಗೆ ಸಾಲು ನೀಡಲು ಕೇಂದ್ರ ಸರ್ಕಾರ 2 ಲಕ್ಷ ಕೋಟಿ ಹಣವನ್ನು ಮುಡಿಪಿಟ್ಟಿದೆ. ಇನ್ನು, ಮೀನುಗಾರಿಕೆ ಮತ್ತು ಪಶುಸಂಗೋಪನೆ ವೃತ್ತಿಯಲ್ಲಿರುವವರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಕೊಡುವುದಾಗಿ ಸರ್ಕಾರ ಹೇಳಿದೆ. ರೈತರಿಗೆ ಸಾಕಷ್ಟು ಲಾಭಗಳಿರುವ ಈ ಕಾರ್ಡನ್ನು ಪಡೆಯೋದು ಹೇಗೆ? ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಕಿಸಾನ್​ ಕಾರ್ಡ್​ಗೆ ಅರ್ಜಿ ಸಲ್ಲಿಸೋದು ಹೇಗೆ?:

ಹಂತ 1- ನಿಮ್ಮ ಬ್ಯಾಂಕ್​ನ ಅಧಿಕೃತ ವೆಬ್​ ಸೈಟ್​ಗೆ ಭೇಟಿ ನೀಡಿ ಅಥವಾ ನಿಮ್ಮ ಬ್ಯಾಂಕ್​ಗೆ ಭೇಟಿ ನೀಡಿ.ಹಂತ

2: ಲೋನ್​ ಆಯ್ಕೆ ಕ್ಲಿಕ್​ ಮಾಡಿದ ನಂತರ ‘Apply for KCC’ ಎಂದು ಸರ್ಚ್​ ಮಾಡಿಹಂತ

3- ಅಲ್ಲಿ ಸಿಗುವ ಫಾರ್ಮ್​ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿಹಂತ

4: ನಂತರ  ‘submit’ ಬಟನ್​ ಕ್ಲಿಕ್​ ಮಾಡಿ ಹಂತ

5- ಸಬ್​ಮಿಟ್ ಮಾಡದ ನಂತರ ನಿಮಗೆ ಒಂದು ಸಂಖ್ಯೆ ಸಿಗುತ್ತದೆ.ಹಂತ

6: ಆ ನಂಬರ್​ ಅನ್ನು ಸೇವ್​ ಮಾಡಿಟ್ಟುಕೊಳ್ಳಿ

ಕಿಸಾನ್​ ಕ್ರೆಡಿಟ್​ ಕಾರ್ಡ್​ಗೆ ಯಾವ ಯಾವ ದಾಖಲೆಗಳು ಬೇಕು?

  • ಸಂಪೂರ್ಣವಾಗಿ ಭರ್ತಿ ಮಾಡಲಾದ ಫಾರ್ಮ್​ ಹಾಗೂ ಅದರ ಮೇಲೆ ನಿಮ್ಮ ಸಹಿ.
  • ಆಧಾರ್,​ ಪಾನ್​,  ವೋಟಿಂಗ್ ಕಾರ್ಡ್​ ಅಥವಾ ಡ್ರೈವಿಂಗ್​ ಲೈಸೆನ್ಸ್​​ನ ಪ್ರತಿ
  • ವಿಳಾಸ ಖಚಿತಪಡಿಸಲು ದಾಖಲೆಗಳು ಅಗತ್ಯ. (ಆಧಾರ್​ ಕಾರ್ಡ್​, ವೋಟರ್​ ಐಡಿ, ವಾಹನ ಪರವಾನಿಗೆ ಹೊರತುಪಡಿಸಿ)
  • ಭೂ ಪತ್ರ
  • ಎರಡು ಪಾಸ್​ಪೋರ್ಟ್​ ಸೈಜ್​ನ ಫೋಟೋ

ಕಿಸಾನ್​ ಕಾರ್ಡ್​ ಲಾಭಗಳು:

  •  ಸಾಲ ಮರುಪಾವತಿ ಸುಲಭ
  • ಸುಲಭವಾಗಿ ದೀರ್ಘಾವಧಿ ಸಾಲ ಲಭ್ಯ
  • ಗೊಬ್ಬರ, ಬಿತ್ತನೆ ಬೀಜಗಳ ಖರೀದಿಯಲ್ಲಿ ಸಹಕಾರಿ
  • ಕಡಿಮೆ ದಾಖಲೆ ಮತ್ತು ಹೆಚ್ಚಿನ ಲಾಭ
Tags
Continue

Related Articles

Leave a Reply

Your email address will not be published. Required fields are marked *

Back to top button
Close
Close