ಅಂತರಾಷ್ಟ್ರೀಯ

ಲಾಕ್ ಡೌನ್ ಇದ್ರೂ ಬ್ಯಾಂಕಿಗೆ ನುಗ್ಗಿದ ದರೋಡೆಕೋರರು, 21 ಲಕ್ಷ ದೋಚಿ ಪರಾರಿ

Posted By : Sirajuddin Bangar

Source : PTI

ಮಥುರಾ: ಕೊರೋನಾವೈಅರಸ್ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಧ್ಯೆ, ನಾಲ್ಕು ಶಸ್ತ್ರಸಜ್ಜಿತ ದಾಳಿಕೋರರು ಮಂಗಳವಾರ ಬ್ಯಾಂಕೊಂದಕ್ಕೆ ನುಗ್ಗಿ ಬರೋಬ್ಬರಿ 21 ಲಕ್ಷ ರೂ.ದೋಚಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

ಮಂಗಳವಾರ ಮಧ್ಯಾಹ್ನ ಮಥುರಾದಲ್ಲಿನ ಆರ್ಯಾವರ್ತ ಗ್ರಾಮೀಣ ಬ್ಯಾಂಕ್ ನ ದಾಮೋದರಪುರ ಶಾಖೆಗೆ ನುಗ್ಗಿದ ನಾಲ್ವರು ದರೋಡೆಕೋರರು ಬ್ಯಾಂಕಿನಲ್ಲಿದ್ದ ಹಣವನ್ನು ಲೂಟಿ ಮಾಡಿದ್ದಾರೆ. ಈ ವೇಳೆ ಬ್ಯಾಂಕಿನಲ್ಲಿ ಕೇವಲ ಮೂವರು ಸಿಬ್ಬಂದಿಗಳು ಮಾತ್ರ ಹಾಜರಿದ್ದರು.

ಘಟನೆ ನಡೆದಾಗ ಶಾಖೆಯಲ್ಲಿದ್ದವರಲ್ಲಿ ಬ್ಯಾಂಕ್ ಸಿಬ್ಬಂದಿ ನರೇಂದ್ರ ಚೌಧರಿ ಒಬ್ಬರಾಗಿದ್ದು ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬರು ಬ್ಯಾಂಕ್ ಶಾಖೆಗೆ ಪ್ರವೇಶಿಸಿ ತಲೆಗೆ ಬಂದೂಕು ಇಟ್ಟು ಹಣವನ್ನು ನೀಡುವಂತೆ ಒತ್ತಾಯಿಸಿದ್ದಾಗಿ ಹೇಳಿದ್ದಾರೆ. ಇದಾದ ನಂತರ ಇತರ ಮೂವರು ಬ್ಯಾಂಕಿನೊಳಗೆ ಬಂದು ಸಹಾಯಕ ವ್ಯವಸ್ಥಾಪಕ ನೀಲಂ ಸಿಂಗ್ ಮತ್ತು ಕ್ಯಾಷಿಯರ್ ಶ್ರಿಸ್ತಿ ಸಕ್ಸೇನಾ ಅವರ ಬಳಿ ಪಿಸ್ತೂಲ್ ತೋರಿಸಿಸದ್ದು ಮಾಡದಂತೆ ಬೆದರಿಕೆ ಹಾಕಿದ್ದಾರೆ ಎಂದು ಚೌಧರಿ ವಿವರಿಸಿದರು.

ಹಣ ದೋಚಿದ ದರೋಡೆಕೋರರು ಬ್ಯಾಂಕಿನ ಸಿಬ್ಬಂದಿಗಳ  ಮೊಬೈಲ್ ಫೋನ್ ತೆಗೆದುಕೊಂಡು ಹೋದದ್ದಲ್ಲದೆ ಎಲ್ಲರನ್ನೂ ವಾಶ್ ರೂಂನಲ್ಲಿ ಸಹಾಯಕ ವ್ಯವಸ್ಥಾಪಕರೊಂದಿಗೆ ಲಾಕ್ ಮಾಡಿದ್ದಾರೆ ಅದಾಗಿ ಕ್ಯಾಷಿಯರ್ ಗೆ ಬಲವಾದ ಭದ್ರತೆ ಇರುವ ಲಾಕರ್ ಕೋಣೆ ತೆರೆಯುವಂತೆ ಒತ್ತಾಯಿಸಿದರು ಮತ್ತು ನಂತರ 21,07,127 ರೂ. ನಗದು ದೋಚಿ  ಪರಾರಿಯಾಗಿದ್ದಾರೆ 

ದರೋಡೆ ಪ್ರಕರಣ ಬೇಧಿಸಲು ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಮತ್ತು ಬ್ಯಾಂಕಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮಥುರಾ ಎಸ್‌ಎಸ್‌ಪಿ ಗೌರವ್ ಗ್ರೋವರ್ ಸುದ್ದಿಗಾರರಿಗೆ ತಿಳಿಸಿದರು.ಘಟನಾ ಸ್ಥಳದ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಿಗೆ ಮೊಹರು ಹಾಕಲಾಗಿದೆ, ಆದಾಗ್ಯೂ, ಲೂಟಿಕೋರರನ್ನು ಇನ್ನೂ  ಪತ್ತೆ ಮಾಡಲಾಗಿಲ್ಲಮಾಹಿತಿ ಪಡೆದ ನಂತರ ಇನ್ಸ್‌ಪೆಕ್ಟರ್ ಜನರಲ್ ಸತೀಶ್ ಗಣೇಶ್ ಕೂಡ ಸ್ಥಳಕ್ಕೆ ತಲುಪಿದ್ದು  ಜಿಲ್ಲಾ ಪೊಲೀಸರಿಗೆ ತನಿಖೆಯ ಸಂಬಂಧ ಮಾರ್ಗಸೂಚಿಗಳನ್ನು ನೀಡಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close