ಕರ್ನಾಟಕ ಸುದ್ದಿ

ಪ್ರಧಾನಿ ಮೋದಿಯ 20 ಲಕ್ಷ ಕೋಟಿ ಪ್ಯಾಕೇಜ್ ನಲ್ಲಿ ರೈತರಿಗೆ ಆಧ್ಯತೆ ಇರಲಿ: ಮೈಸೂರಿನಲ್ಲಿ ರೈತ ಮುಖಂಡ ಆಗ್ರಹ

ಮೈಸೂರು(ಮೇ 13): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂ ಮೊತ್ತದ ಪ್ಯಾಕೇಜ್ ಪ್ರಕಟಿಸಿದ್ಧಾರೆ. ಇವತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಹಂತದ ಪ್ಯಾಕೇಜ್ ವಿವರ ತಿಳಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಮೈಸೂರಿನ ರಾಜಕೀಯ ಧುರೀಣರು ಮತ್ತು ರೈತ ಮುಖಂಡರು ಕೇಂದ್ರ ಸರ್ಕಾರದ ಪ್ಯಾಕೇಜ್​ನಲ್ಲಿ ಕೃಷಿಕರಿಗೆ ಹೆಚ್ಚು ಆದ್ಯತೆಯ ನಿರೀಕ್ಷೆಯಲ್ಲಿದ್ಧಾರೆ.

ಕೇಂದ್ರದ ಪ್ಯಾಕೇಜ್​ನಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಿ ಅಂತ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೊರೊನಾ ಮೋದಿಯ ಕಣ್ಣು ತೆರೆಸಿದೆ. ಪ್ರವಾಹ ಬಂದಾಗಲೂ ರಾಜ್ಯಕ್ಕೆ ಏನು ಕೊಟ್ಟಿಲ್ಲ, ನೆರೆ ಬಂದಾಗಲು ರಾಜ್ಯಕ್ಕೆ ಏನು ಕೊಟ್ಟಿಲ್ಲ. ಈಗ 20 ಲಕ್ಷ ಕೋಟಿ ಅಂತ ಘೋಷಣೆ ಮಾಡಿದ್ದಾರೆ. ಆ ಮೊತ್ತ ದೊಡ್ಡದಾಗಿದ್ದರೂ ನಮ್ಮ ಕೃಷಿ ಬಂಡವಾಳಕ್ಕೆ ಹೋಲಿಸಿದರೆ ಅದು ಕಡಿಮೆಯೇ ಸರಿ. ಆ ಕಡಿಮೆ ಮೊತ್ತದ ಪರಿಹಾರ ಘೋಷಣೆಗೆ ಸ್ವಾಗತಾರ್ಹ. ಆದ್ರೆ ಇದನ್ನ ಕೃಷಿ ಕ್ಷೇತ್ರ ಹಾಗೂ ಕೃಷಿ ಅವಲಂಬಿತರಿಗೆ ನೀಡಬೇಕು. ದುಡಿಯುವ ವರ್ಗಕ್ಕೆ ಹೆಚ್ಚಿನ ಉದ್ಯೋಗ ನೀಡಿ ಹಣ ಸಿಗುವಂತೆ ಮಾಡಬೇಕು. ಆಗಷ್ಟೇ ಜನರಿಗೆ ಹಣ ಸಿಗೋದು. ಆದ್ದರಿಂದ ವಿಶೇಷ ಪ್ಯಾಕೇಜ್‌ನಲ್ಲಿ ಕೃಷಿಗೆ ಆದ್ಯತೆ ಸಿಗಲಿ ಅಂತ ಮನವಿ ಮಾಡಿಕೊಂಡರು.

ಇನ್ನು, ಮತ್ತೊಬ್ಬ ರೈತ ಮುಖಂಡ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ದೇಶದ ಆರ್ಥಿಕತೆಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಸ್ವಾಗತರ್ಹ ಎಂದು ಹೇಳಿದ್ದಾರೆ. ಆ ವಿಶೇಷ ಪ್ಯಾಕೇಜ್​ನಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಿ ಎಂದು ಅವರೂ ಆಗ್ರಹಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close