ರಾಯಚೂರು ಜಿಲ್ಲೆ ಸುದ್ದಿ

ಕರ್ನಾಟಕ ಜ್ವಾಲೆ ಬ್ರೆಕೀಂಗ್ ನ್ಯೂಸ್ : ಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಕೈ ಬಿಡುವಂತೆ ಸರ್ಕಾರಕ್ಕೆ ರೈತಸಂಘ ಒತ್ತಾಯ.

ವರದಿ :ಆಲಂ ಗನಿ ಗಬ್ಬೂರು

ರಾಯಚೂರು ಮೇ.13: ಎಪಿಎಂಸಿ ಕಾಯ್ದೆಗಳ ತಿದ್ದುಪಡಿಗೆ ಮುಂದಾದ ಸರ್ಕಾರ ಕಾರ್ಪೊರೇಟ್ ಉದ್ಯಮಿಗಳಿಗಾಗಿ ರೈತರ ಭವಿಷ್ಯ ಹಾಳು ಮಾಡುತ್ತಿರುವ ಸರ್ಕಾರ!! ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ರಿ ) ರಾಯಚೂರು.  

ಇದೆ 14-05-2020 ರಂದು ಕೇಂದ್ರ ಸರ್ಕಾರ ಸಂಪುಟ ಸಭೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ (APMC) ಕಾಯ್ದೆ 2017ಕ್ಕೆ ಪ್ರಮುಖವಾದ ತಿದ್ದುಪಡಿ ತರುತ್ತಿದೆ. ಈ ತಿದ್ದುಪಡಿ ತಂದು ಕೃಷಿ ಮಾರುಕಟ್ಟೆಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಮಾಡಲು ಹೊರಟಿದೆ.

 ಯಾವುದೇ ಕಾರಣಕ್ಕೂ ಕೃಷಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ಮಾಡುವುದನ್ನು ಕೈ ಬಿಡಬೇಕೆಂದು ಒತ್ತಾಯಿಸಿ ದಿನಾಂಕ:13-05-2020 ರಂದು ಬುಧವಾರ ಬೆಳಗ್ಗೆ 11-00  ಜಿಲ್ಲಾಧಿಕಾರಿಗಳ ಕಛೇರಿ ರಾಯಚೂರು ಇವರ ಮುಂದೆ ಪ್ರತಿಭಟನೆ ಮಾಡಿ ರಾಯಚೂರು ಜಿಲ್ಲಾಧಿಕಾರಿ ಮುಖಾಂತರ ಮಾನ್ಯ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭ ದಲ್ಲಿ ಜಿಲ್ಲಾ ಅಧ್ಯಕ್ಷ ಶರಣಪ್ಪ ಮರಳಿ ಸುಲ್ತಾನಪೂರ ಜಿಲ್ಲಾ ಉಪಾಧ್ಯಕ್ಷರು ರಾಮಯ್ಯ ಜವಳಗೇರಾ, ಉಮಾದೇವಿ ನಾಯಕ್, ದೇವದುರ್ಗ ಅಧ್ಯಕ್ಷ ರಂಗಪ್ಪ ನಾಯಕ,ಮತ್ತು ರಾಯಚೂರು ಜಿಲ್ಲೆಯ ಎಲ್ಲ ತಾಲ್ಲೂಕು ಅಧ್ಯಕ್ಷರು ಉಪಸ್ಥಿತರಿದ್ದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close