ಅಂತರಾಷ್ಟ್ರೀಯ

ಕರ್ನಾಟಕ ಜ್ವಾಲೆ ಬ್ರೆಕೀಂಗ್ ನ್ಯೂಸ್ : ಲಾಕ್​ಡೌನ್​ ವಿಸ್ತರಣೆ ಹಿನ್ನೆಲೆ; ಇಂದು ಸಂಜೆ ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

ಇನ್ನೆರಡು ದಿನಗಳಲ್ಲಿ ಹೊಸ ಲಾಕ್​ಡೌನ್​ನ ನಿಯಮಾವಳಿಗಳನ್ನು ಘೋಷಿಸಬೇಕಾದ್ದರಿಂದ ಇಂದು ಸಂಜೆ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಲಿದ್ದಾರೆ.

ದೇಶದಲ್ಲಿ ಜಾರಿಯಲ್ಲಿರುವ 3ನೇ ಹಂತದ ಲಾಕ್​ಡೌನ್​ ಇನ್ನು 4 ದಿನಗಳಲ್ಲಿ ಅಂತ್ಯವಾಗಲಿದೆ. ಈಗಾಗಲೇ 4ನೇ ಹಂತದ ಲಾಕ್​ಡೌನ್​ ವಿಸ್ತರಣೆ ಬಗ್ಗೆ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಆದರೆ, ಆ ಲಾಕ್​ಡೌನ್​ ನಿಯಮಗಳು ಯಾವ ರೀತಿ ಇರಲಿವೆ ಎಂಬ ಮಾಹಿತಿ ಹೊರಬೀಳಬೇಕಾಗಿದೆ. ಈ ಕುರಿತು ಚರ್ಚಿಸಲು ಇಂದು ಸಂಜೆ 4.30ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಪ್ರಧಾನಿ ಘೋಷಿಸಿರುವ 20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜ್​ ಕುರಿತು ಮಾಹಿತಿ ನೀಡಲು  ಇಂದು ಸಂಜೆ 4 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ಕರೆದಿದ್ದಾರೆ. ಇದಾದ ಬಳಿಕ ಪ್ರಧಾನಿ ಮೋದಿ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. 

ಭಾರತದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ 4ನೇ ಹಂತದ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ. 4ನೇ ಹಂತದ ಲಾಕ್ ಡೌನ್ ಹೇಗಿರಲಿವೆ ಎಂದು ತಿಳಿಸುವ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಮೇ 18ರೊಳಗೆ ತಿಳಿಸುವುದಾಗಿ ಮಂಗಳವಾರ ರಾತ್ರಿ ನರೇಂದ್ರ ಮೋದಿ ತಿಳಿಸಿದ್ದರು. ಆದರೆ, ಆ ಮಾರ್ಗಸೂಚಿ ಮೇ15 ರಂದೇ ಹೊರಬೀಳುವ ಸಾಧ್ಯತೆ ಇದೆ. ಕೊರೋನಾ ಸೋಂಕು ಹೆಚ್ಚಾಗಿ ಪತ್ತೆಯಾಗದ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಲಾಕ್​ಡೌನ್​ ನಿಯಮಗಳನ್ನು ಸಡಿಲಗೊಳಿಸುವ ಸಾಧ್ಯತೆಯಿದೆ. ಈಗಾಗಲೇ ಈ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಶುರುಮಾಡಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close