ಕರ್ನಾಟಕ ಸುದ್ದಿ

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ

ಬೆಂಗಳೂರು; ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಅತೀ ಹೆಚ್ಚು 48 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 753 ತಲುಪಿರುವುದು ಜನತೆಯಲ್ಲಿ ಆತಂಕ ಹುಟ್ಟಿಸಿದೆ.

ಒಟ್ಟು 31 ಸೋಂಕಿತರು ಸಾವನ್ನಪ್ಪಿದ್ದು, 376 ಜನ ಗುಣಮುಖರಾಗಿ ಹಿಂತಿರುಗಿದ್ದಾರೆ. 753ರಲ್ಲಿ 340 ಜನರನ್ನು ಚಿಕಿತ್ಸೆಗಾಗಿ  ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆ. ಐವರನ್ನು  ತೀವ್ರ ನಿಗಾ ಘಟಕಗಳಲ್ಲಿರಿಸಲಾಗಿದೆ. ದಾವಣಗೆರೆಯಲ್ಲಿ 14, ಬೆಂಗಳೂರಿನಿಂದ 7, ಬೆಳಗಾವಿಯಿಂದ 11, ಉತ್ತರ ಕನ್ನಡ12, ಸೇರಿದಂತೆ ಪ್ರಕರಣಗಳು ವರದಿಯಾಗಿವೆ‌. 

ಶನಿವಾರ ದೃಢಪಟ್ಟಿರುವ ಪ್ರಕರಣಗಳ ಪೈಕಿ 11 ಮಕ್ಕಳಿಗೆ ಸೋಂಕು ದೃಢಪಟ್ಟಿದೆ.  ಉತ್ತರ ಕನ್ನಡ ಜಿಲ್ಲೆಯ 5 ತಿಂಗಳಿನ  ಹಸುಗೂಸಿನಲ್ಲೂ ಸೋಂಕು ಪತ್ತೆಯಾಗಿರುವುದು ಆತಂಕದ ವಿಚಾರ. ದಾವಣಗೆರೆ ಜಿಲ್ಲೆಯೊಂದರಲ್ಲೇ 6 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು ಸೋಂಕಿತರಲ್ಲಿ ಪ್ರಯಾಣದ ಇತಿಹಾಸ ಇಲ್ಲದಿದ್ದರೂ ಬಳ್ಳಾರಿಯಲ್ಲಿ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಅಹಮದಾಬಾದ್‌ಗೆ ಪ್ರಯಾಣ ಮಾಡಿರುವ 3 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಭಾನುವಾರದ ವೇಳೆಗೆ ರಾಜ್ಯದಲ್ಲಿ 1 ಲಕ್ಷ ಸ್ಯಾಂಪಲ್ ಗಳ ಪರೀಕ್ಷೆ ಪೂರ್ಣಗೊಳಿಸುವುದಾಗಿ ಬಿಎಂಆರ್​ಸಿ ಅಂದಾಜಿಸಿದೆ.  ಇದುವರೆಗೆ ಕೊರೋನಾ ರೋಗಿಗಳ ಚಿಕಿತ್ಸೆಗೆ ರಾಜ್ಯ ಸರ್ಕಾರ 4,74,48,390 ರೂ. ಖರ್ಚು ಮಾಡಿದೆ. ಪ್ರತೀ ರೋಗಿಗೆ 3,48,885 ರೂ. ವೆಚ್ಚ ಭರಿಸಿದೆ.  ಖಾಸಗಿ ಲ್ಯಾಬ್​ಗಳಲ್ಲಿ ಕೊರೋನಾ ಟೆಸ್ಟ್ ವೆಚ್ಚವನ್ನು ರೋಗಿಯ ಬದಲು ಸರ್ಕಾರವೇ ಭರಿಸಲು ಎಂಒಯು ಮಾಡಿಕೊಳ್ಳಲಾಗುತ್ತಿದೆ.

ಚಿತ್ರದುರ್ಗ ಜಿಲ್ಲೆಯಿಂದ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮೂವರಲ್ಲಿ ಮೇ 8ರಂದು ಕೋವಿಡ್ ಪತ್ತೆಪತ್ತೆಯಾಗಿತ್ತು. ಲಾಕ್‍ಡೌನ್‌ನಿಂದ ಚಿತ್ರದುರ್ಗಕ್ಕೆ ವಾಪಸ್‌ ಬರಲಾಗದೆ ಮೇ 5ರಂದು ಒಂದೇ ಬಸ್‌ನಲ್ಲಿ ಚಿತ್ರದುರ್ಗಕ್ಕೆ ಬಂದಾಗ ಚೆಕ್‌ಪೋಸ್ಟ್‌ನಲ್ಲಿ ತಡೆದು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಿ ಸ್ವಾಬ್ ಪರೀಕ್ಷೆ ನಡೆಸಿದಾಗ ಮೂವರಿಗೆ ಸೋಂಕು ದೃಢಪಟ್ಟಿದೆ. 

ವಿದೇಶಗಳಿಂದ‌‌‌ ಕರ್ನಾಟಕಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಪರಿಷ್ಕೃತ ಮಾರ್ಗ ಸೂಚಿಗಳನ್ನು ರಾಜ್ಯದಲ್ಲೂ ಪ್ರಕಟಿಸಲಾಗಿದೆ.


 *ಕೋವಿಡ್ ನಿಯಂತ್ರಣ ಕೆಲಸಕ್ಕೆ ವೈದ್ಯಕೀಯ ತಜ್ಞರು, ಬೋಧಕರು ಕಡ್ಡಾಯ* 

ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಹಿರಿಯ ತಜ್ಞ ವೈದ್ಯರು, ವೈದ್ಯ ಬೋಧಕರುಗಳು ಕಡ್ಡಾಯವಾಗಿ ಕೋವಿಡ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ನಿರ್ದೇಶನ ಹೊರಡಿಸಿದೆ.ಸಂಬಂಧಪಟ್ಟ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಈ ಕುರಿತಂತೆ ಸಂಪೂರ್ಣ ಜವಾಬ್ದಾರಿ ಹೊರಿಸಲಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close