Uncategorized

ಗುಡ್ಡ ಕುಸಿದು 14 ಸಾವು,51 ಜನ ನಾಪತ್ತೆ; ಕಣನ್ ದೇವನ್ ಟೀ ಎಸ್ಟೇಟ್ ದುರಂತ

ಸಂಪಾದಕೀಯ : ಸಿರಾಜುದ್ದೀನ್ ಬಂಗಾರ್ ಸಿರವಾರ

ಎಸ್ಟೇಟ್‌ ಕಾರ್ಮಿಕರ ಕಾಲೋನಿ ಮೇಲೆ ಗುಡ್ಡ ಕುಸಿದು 14 ಜನರು ಸಾವನ್ನಪ್ಪಿ, ಇತರೆ 50ಕ್ಕೂ ಹೆಚ್ಚು ಜನ ನಾಪತ್ತೆಯಾಗಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿ ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಕಳೆದ 4-5 ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇದರ ಪರಿಣಾಮ ಭೂಕುಸಿತ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ 20 ಮನೆಗಳು ಭೂಸಮಾಧಿಯಾಗಿದೆ. ಇದುವರೆಗೆ ರಕ್ಷಣಾ ಕಾರ್ಯಕರ್ತರು ಘಟನಾ ಸ್ಥಳದಿಂದ 5 ಶವಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಾಪತ್ತೆಯಾಗಿರುವ ಉಳಿದ 50ಕ್ಕೂ ಹೆಚ್ಚು ಜನರ ಪತ್ತೆ ಕಾರ್ಯ ಮುಂದುವರೆದಿದೆ. 12 ಜನರನ್ನು ರಕ್ಷಿಸಲಾಗಿದೆ. ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಬೀಡುಬಿಟ್ಟಿದ್ದು, ನೆರವು ಕಾರ್ಯಗಳಿಗೆ ಕೈಜೋಡಿಸಿದ್ದಾರೆ. ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಡಿದವರ ಕುಟುಂಬಗಳಿಗೆ ತಲಾ 2 ಲಕ್ಷ ಮತ್ತು ಗಾಯಾಳುಗಳ ಕುಟುಂಬಗಳಿಗೆ ತಲಾ 50000 ರು. ಪರಿಹಾರ ಘೋಷಿಸಿದ್ದಾರೆ.

ಘಟನಾ ಸ್ಥಳದಲ್ಲಿ ರಕ್ಷಣಾ ಕಾಯಾಚರಣೆ ಕೈಗೊಳ್ಳಲಾಗಿದೆಯಾದರೂ, ಭಾರೀ ಮಳೆ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ. ಜೊತೆಗೆ ಘಟನಾ ಸ್ಥಳಕ್ಕೆ ತೆರಳುವ ಸೇತುವೆ ಗುರುವಾರ ರಾತ್ರಿ ಕೊಚ್ಚಿ ಹೋಗಿದೆ. ಸಮೀಪದಲ್ಲೇ ಇದ್ದ ಮೊಬೈಲ್‌ ಟವರ್‌ ಕೂಡಾ ಕಾರ್ಯನಿರ್ವಹಿಸದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಇಡುಕ್ಕಿ ಹಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿರುವ ಕಾರಣ ರಕ್ಷಣಾ ಕಾರ್ಯಗಳಿಗೆ ಹೆಲಿಕಾಪ್ಟರ್‌ ಕಳುಹಿಸಿಕೊಡುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ವಾಯುಪಡೆಗೆ ಕೋರಿಕೆ ಸಲ್ಲಿಸಿದ್ದಾರೆ.

ಟಾಟಾ ಸಮೂಹಕ್ಕೆ ಸೇರಿದ ಕಣ್ಣನ್‌ ದೇವನ್‌ ಎಸ್ಟೇಟ್‌ ಇರುವ ಪೆಟ್ಟಿಮುಡಿ ಪ್ರದೇಶದಲ್ಲಿ 200- 300 ಕಾರ್ಮಿಕರು ವಾಸವಿದ್ದು, ಅವರೆಲ್ಲರ ಸ್ಥಿತಿ ಏನಾಗಿದೆ ಎಂಬುದರ ಪೂರ್ಣ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಕೇರಳ ಪ್ರವಾಹಕ್ಕೆ ಕೊಚ್ಚಿ ಹೋದ ಆನೆ

ತಿರುವನಂತಪುರಂ: ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಆನೆಯೇ ಕೊಚ್ಚಿಹೋದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ನೆರಿಯಮಂಗಳಂನಲ್ಲಿರುವ ಪೆರಿಯಾರ್‌ ನದಿಯಲ್ಲಿ ಘಟಿಸಿದೆ. 4 ದಿನಗಳ ಹಿಂದೆ ನಡೆದಿದ ಎನ್ನಲಾದ ಈ ಘಟನೆ ಕುರಿತ ವಿಡಿಯೋ ಇದೀಗ ಭಾರೀ ವೈರಲ್‌ ಆಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close