ಅಂತರಾಷ್ಟ್ರೀಯ

ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ಪ್ರಧಾನಿ ಮೋದಿ; ಹೊಸ ಶಿಕ್ಷಣದ ಬಗ್ಗೆ ಮಾತು

ಸಂಪಾದಕೀಯ: ಸಿರಾಜುದ್ದೀನ್ ಬಂಗಾರ್ ಸಿರವಾರ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಶಿಕ್ಷಕರ ಘನತೆಯನ್ನೂ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇತ್ತೀಚೆಗೆ ನೂತನ ಶಿಕ್ಷಣ ನೀತಿ ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ ಈಗ ಅದರ ಅನುಷ್ಠಾನದ ಸಿದ್ಧತೆಯಲ್ಲಿ ತೊಡಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾದ ರಾಷ್ಟ್ರೀಯ ಕಮ್ಮಟದಲ್ಲಿ ಶುಕ್ರವಾರ ಉದ್ಘಾಟನಾ ಭಾಷಣ ಮಾಡಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಭಾರತದಲ್ಲಿ ಕಲಿತವರು ಭಾರತದಲ್ಲಿಯೇ ಉಳಿಯುವಂತಾಗಬೇಕು. ಶಿಕ್ಷಕರು ತಮ್ಮ ಕೌಶಲ್ಯಗಳನ್ನು ಹೆಚ್ಚಿಸುತ್ತಿರಬೇಕು. ವೆಬಿನಾರ್, ಮೀಟಿಂಗ್‌ಗಳನ್ನು ಮಾಡುತ್ತಿರಿ. ಶಿಕ್ಷಕರು ಕಲಿತಾಗ ಮಾತ್ರ ದೇಶ ಮುಂದುವರಿಯುತ್ತದೆ ಎಂದಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಬರೇ ಸರ್ಕೂಲಾರ್ ಹೊರಡಿಸಿ ಅನುಷ್ಠಾನ ಮಾಡಿದಾಗ ಯಶಸ್ವಿಯಾಗುವುದಿಲ್ಲ. ಬದಲಾಗಿ ಎಲ್ಲರೂ ಶ್ರಮ ವಹಿಸಬೇಕು. ಈ ಮೂಲಕ ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದಿದ್ದಾರೆ. ಭಾರತದ ಬಗ್ಗೆ ಜಗತ್ತಿನ ನಿರೀಕ್ಷೆ ಹೆಚ್ಚಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಉತ್ತಮ ರೀತಿಯಲ್ಲಿ ಅನುಷ್ಠಾನವಾಗಬೇಕು ಎಂದಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಉನ್ನತ ಶಿಕ್ಷಣ ಬದಲಾವಣೆ’ ಹೆಸರಿನ ಕಮ್ಮಟ ಇದಾಗಿದ್ದು, ಯುಜಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವಾಲಯಗಳು ಇದನ್ನು ಹಮ್ಮಿಕೊಂಡಿವೆ. ಇದರಲ್ಲಿ ಮಹತ್ವಾಕಾಂಕ್ಷಿ ಶಿಕ್ಷಣ ನೀತಿಯ ಬಗ್ಗೆ ಚರ್ಚೆ ನಡೆಯಲಿದೆ. ಶಾಲಾ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣದ ಮಹತ್ತರ ಬದಲಾವಣೆಯ ಉದ್ದೇಶವನ್ನು ಶಿಕ್ಷಣ ನೀತಿ ಹೊಂದಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close