ಸಿರವಾರ

ಸಿರವಾರ : ಸಂಡೇ ಹೆಸರಿಗಷ್ಟೆ ಲಾಕಡೌನ್..! ಜನರು ಡೊಂಟ್ ಕೇರ್

ಸಂಪಾದಕೀಯ : ಸಿರಾಜುದ್ದೀನ್ ಬಂಗಾರ್ ಸಿರವಾರ

ಸಿರವಾರ ಜು.26 : ಸಂಡೇ ಲಾಕ್‌ಡೌನ್ ಹೆಸರಿಗಷ್ಟೇ ಸೀಮಿತವಾಗಿದೆ. ಈ ಬಾರಿ ಲಾಕ್‌ಡೌನ್ ಕಟ್ಟುನಿಟ್ಟಾಗಿರತ್ತೆ. ಯಾರು ನಿಯಮಗಳನ್ನು ಉಲ್ಲಂಘಿಸ್ತಾರೋ ಅವರ ವಿರುದ್ಧ ಕೇಸ್ ಹಾಕ್ತೀವಿ ಅಂತ ಗೃಹ ಸಚಿವರು ಹೇಳಿದ್ದರು.ಆದ್ರೆ ಇಲ್ಲಿ ಮಾತ್ರ ಜನವೋ ಜನ..! 

ಸೊಂಕು ದಿನದಿನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಜನರು ತಮ್ಮ ಜೀವಕ್ಕೆ ಲೆಕ್ಕಿಸದೆ ಬೆಳಗ್ಗೆಯಿಂದಲೂ ರಸ್ತೆ ಸಂಚಾರ ಮಾತ್ರ ಸ್ಥಗಿತಗೊಂಡಿಲ್ಲ..ಅಂಗಡಿ ಮುಂಗಟ್ಟುಗಳು ಮಾತ್ರ ಬಂದ್ ಇರುವುದು ಬಿಟ್ಟರೆ ಜನರ ಓಡಾಟ ಮಾತ್ರ ನಿಂತಿಲ್ಲ.

ಸರ್ಕಾರ ಸಾರ್ವಜನಿಕರ ಒಳಿತಿಗಾಗಿ ಸುರಕ್ಷತೆಗಾಗಿ ಅದೇಷ್ಟು ಕ್ರಮಗಳನ್ನು ತೆಗದುಕೊಂಡರು ಜನರು ಮಾತ್ರ ಯಾವುದಕ್ಕೆ ಸ್ಪಂಧನೆ ನೀಡುತ್ತಿಲ್ಲ. ಕಾರಣ ಇಂತಹ ಸಂದರ್ಭಗಳಲ್ಲಿ ಸೊಂಕು ತಡೆಗಟ್ಟಲು ಸಾಧ್ಯವೆ..?

ನಮ್ಮ ರಾಜ್ಯದಲ್ಲಿ ಕೊರೋನ ವೈರೆಸನ ಸಂಖ್ಯೆ ದಿನೆ-ದಿನೆ ಮುಗಿಲುಮುಟ್ಟುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಬೇಜವಬ್ದಾರಿತನ ಮುಂದುವರೆದರೆ ದೇಶದಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿ ಬರುವುದರಲ್ಲಿ ಅಚ್ಚರಿ ಇಲ್ಲ..

ರೋಗವನ್ನ ತಡೆಗಟ್ಟುವುದರಲ್ಲಿ ಕೇವಲ ಸರ್ಕಾರದ ಪಾತ್ರವಷ್ಟೆ ಅಲ್ಲ ಬದಲಾಗಿ ಸಾರ್ವಜನಿಕರ ಪಾತ್ರವು ಕೂಡ ಇದೆ. ನನಗೆ ಸೊಂಕಿಲ್ಲ..! ಅದೆನ್ ಮಹಾ ಸೊಂಕು..? ಅನ್ನೊ ಅಹಂಕಾರವನ್ನ ಬಿಟ್ಟು ನಾವು ಸರ್ಕಾರದ ಪ್ರತಿಯೊಂದು ನಿಯಮಗಳನ್ನ ಪಾಲಿಸಲೆಬೇಕು. ವಿನಃ ಈ ರೀತಿ ನಿರ್ಲಕ್ಷವಹಿಸೊದು ಸರಿಯಲ್ಲ ಎಂಬುದು ವೈದ್ಯರ ಹೇಳಿಕೆ ಯಾಗಿದೆ.

ಒಟ್ಟಾರೆ ಲಾಕಡೌನ ಇದ್ದರೂ ಯಾವುದೇ ರೂಲ್ಸ್ ಗಳಿಲ್ಲ…ಎಂಬುದು ಪ್ರತ್ಯೇಕ್ಷವಾಗಿ ಇಂದು ಎದ್ದು ಕಾಣುತ್ತದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close