ಅಂತರಾಷ್ಟ್ರೀಯ

ರಿಲಯನ್ಸ್ ಮುಖ್ಯಸ್ಥ ಮುಕೇಶ ಅಂಬಾನಿ ಈಗ ವಿಶ್ವದ ಐದನೇ ಶ್ರೀಮಂತ

ಸಂಪಾದಕೀಯ : ಸಿರಾಜುದ್ದೀನ್ ಬಂಗಾರ್ ಸಿರವಾರ

ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್​ ಜಿಯೋ ಸಂಸ್ಥೆಯ ಮೇಲೆ ವಿದೇಶಿ ಸಂಸ್ಥೆಗಳು ನಿರಂತರವಾಗಿ ಹೂಡಿಕೆ ಮಾಡುತ್ತಿವೆ. ಹೀಗಾಗಿ, ರಿಲಯನ್ಸ್ ಸಂಸ್ಥೆ​ ಮೌಲ್ಯ ಹೆಚ್ಚುತ್ತಲೇ ಇದೆ. ಈ ಮೂಲಕ ಮುಕೇಶ್​ ​ ಅಂಬಾನಿ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ವಾರೆನ್ ಭಪೆಟ್​ ಅವರನ್ನು ಅಂಬಾನಿ ಹಿಂದಿಕ್ಕಿದ್ದಾರೆ.

ಫೋರ್ಬ್ಸ್​​ನ ರಿಯಲ್​ ಟೈಮ್​ ಡೇಟಾದಲ್ಲಿ ಈ ಮಾಹಿತಿ ಲಭ್ಯವಾಗಿದೆ. ಸದ್ಯ ಅಂಬಾನಿ ಆಸ್ತಿ 5,59,734 ಕೋಟಿ ರೂಪಾಯಿ ಆದರೆ, ನಾಲ್ಕನೇ ಸ್ಥಾನದಲ್ಲಿರುವ ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​​ ಜುಕರ್​ಬರ್ಗ್ ಆಸ್ತಿ ಮೌಲ್ಯ 6,64,263 ಕೋಟಿ ರೂಪಾಯಿ ಆಗಿದೆ.

ಬೆರ್ಜ್​ಶೈರ್​ ಹಾತ್​ವೇ ಇಂಕ್​ ಷೇರುಗಳು ಮೌಲ್ಯ ಕಳೆದುಕೊಳ್ಳಲು ಆರಂಭಿಸಿದ್ದವು. ಈ ಬೆನ್ನಲ್ಲೇ ವಾರೆನ್ ಭಪೆಟ್ ದೊಡ್ಡ ಪ್ರಮಾಣದ ಷೇರುಗಳನ್ನು ಮಾರಿದ್ದರು. ಈ ಬೆನ್ನಲ್ಲೇ ಭಪೆಟ್​ ಆಸ್ತಿ ಮೌಲ್ಯ ಕಡಿಮೆ ಆಗಿತ್ತು. ಹೀಗಾಗಿ ವಾರೆನ್​ ಸ್ಥಾನ ಕುಸಿದಿದೆ.

ಅಮೆಜಾನ್​​ ಸ್ಥಾಪಕ ಮತ್ತು ಸಿಇಒ ಜೆಫ್​ ಬೆಜೋಸ್​ ಶ್ರೀಮಂತರ ಸಾಲಿನಲ್ಲಿ ಮೊದಲಿದ್ದಾರೆ. ಮೈಕ್ರೋಸಾಫ್ಟ್ ಸಹ​ ಸಂಸ್ಥಾಪಕ  ಬಿಲ್​ ಗೇಟ್ಸ್​ ಎರಡನೇ ಸ್ಥಾನದಲ್ಲಿದ್ದಾರೆ. LVMH ಸಂಸ್ಥೆಯ ಒಡೆಯ ಬರ್ನಾಟ್​ ಅರ್ನಾಡ್​ ಮೂರನೇ ಸ್ಥಾನದಲ್ಲಿದ್ದರೆ, ಫೇಸ್​ಬುಕ್​ ಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ನಾಲ್ಕನೇ ಸ್ಥಾನದಲ್ಲಿ ಹಾಗೂ ಅಂಬಾನಿ ಐದನೇ ಸ್ಥಾನದಲ್ಲಿದ್ದಾರೆ.

ಸತತವಾಗಿ ಜಿಯೋ ಸಂಸ್ಥೆಯ ಮೇಲೆ ಹೂಡಿಕೆ ಆದ ಬೆನ್ನಲ್ಲೇ ರಿಲಾಯನ್ಸ್​ ಷೇರುಗಳ ಮೌಲ್ಯ ದ್ವಿಗುಣವಾಗಿದೆ. ಹೀಗಾಗಿ ಅಂಬಾನಿ ಆಸ್ತಿ ಮೌಲ್ಯ ಹೆಚ್ಚಿದೆ. ಈ ಮೊದಲು ಅಂಬಾನಿ ವಿಶ್ವದ ಏಳನೇ ಶ್ರೀಮಂತರಾಗಿದ್ದರು. ಇತ್ತೀಚೆಗೆ ಅವರು ಆರನೇ ಸ್ಥಾನಕ್ಕೆ ಜಿಗಿದಿದ್ದರು.

ಅಮೆರಿಕದ ಟೆಕ್​ ಸಂಸ್ಥೆ ಕ್ವಾಲ್​ಕಾಮ್​ ವೆಂಚರ್ಸ್​ ಜಿಯೋ ಸಂಸ್ಥೆ ಮೇಲೆ 730 ಕೋಟಿ ರೂಪಾಯಿ ಹೂಡಿಕೆ ಮಾಡಿತ್ತು. ಈ ಮೂಲಕ ರಿಲಯನ್ಸ್​ ಮಾರುಕಟ್ಟೆ ಬಂಡವಾಳ​ 12 ಲಕ್ಷ ಕೋಟಿ ರೂಪಾಯಿ ಆಗಿದೆ. ಇದಲ್ಲದೆ, ಅಂಬಾನಿ ಭಾರತ ಹಾಗೂ ಏಷ್ಯಾದ ಶ್ರೀಮಂತ ವ್ಯಕ್ತಿ ಎನ್ನುವ ಖ್ಯಾತಿಯೂ ಅಂಬಾನಿಗೆ ಇದೆ.  ನ್ಯೂಸ್​18 ನೆಟ್ವರ್ಕ್​18 ಮೀಡಿಯಾ & ಇನ್ವಸ್ಟ್​​ಮೆಂಟ್​ ಲಿಮಿಟೆಡ್​ನ ಒಂದು ಭಾಗವಾಗಿದೆ. ನೆಟ್ವರ್ಕ್​18 ಒಡೆತನವನ್ನು ರಿಲಾಯನ್ಸ್ ಹೊಂದಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close