ಲಿಂಗಸಾಗೂರ್

ಯೂರಿಯಾ ಕೃತಕ ಅಭಾವ ಸೃಷ್ಟಿ : ರೈತರ ಪ್ರತಿಭಟನೆ

ವರದಿ: ಸಿರಾಜುದ್ದೀನ್ ಬಂಗಾರ್

ಲಿಂಗಸುಗೂರು: ತಾಲೂಕಿನಲ್ಲಿ ಯೂರಿಯಾ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ದರಿಂದ ರೈತರು ಸಮಸ್ಯೆ ಎದುರಿಸುವಂತಾಗಿದ್ದು, ಇದನ್ನು ಸರಿಪಡಿಸಲು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಪಟ್ಟಣದ ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟಿಸಿದರು.

ತಾಲೂಕಿನಲ್ಲಿ ಉತ್ತಮ ಮಳೆಯಾಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆದರೆ ಯೂರಿಯಾ ರಸಗೊಬ್ಬರವನ್ನು ಕೃತಕವಾಗಿ ಅಭಾವ ಸೃಷ್ಟಿಸಿ ಅನಗತ್ಯ ತೊಂದರೆ ನೀಡುತ್ತಿರುವುದು ಸರಿಯಲ್ಲ. ಕೂಡಲೇ ಈ ಬಗ್ಗೆ ಗಮನಹರಿಸಬೇಕು. ಹಟ್ಟಿ, ಮುದಗಲ್ಲ, ಲಿಂಗಸುಗೂರು, ಮಟ್ಟೂರು, ಬಯ್ನಾಪುರ ಇನ್ನಿತರ ಖರೀದಿ ಕೇಂದ್ರಗಳಲ್ಲಿ ತೊಗರಿ ಮತ್ತು ಕಡಲೆ ಮಾರಿದ ರೈತರ ಖಾತೆಗೆ ಹಣ ಜಮೆ ಮಾಡಬೇಕು. ತಾಲೂಕಿನ ಕೃಷ್ಣಾ ನದಿ ತೀರದ ನಡುಗಡ್ಡೆಗಳಾದ ಕರಕಲಗಡ್ಡಿ, ಮ್ಯಾದರಗಡ್ಡಿ, ಹೊಂಕಮ್ಮನಗಡ್ಡಿಗಳಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಬೇಕು. 1991-2020ರವರೆಗೆ ರೈತರು ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿದ್ದು ಈಗಾಗಲೇ ರೈತರು ಹಣ ತುಂಬಿದ್ದಾರೆ. ತಕ್ಷಣವೇ ಜೆಸ್ಕಾಂ ಅಧಿಕಾರಿಗಳು ರೈತರ ಸಮಸ್ಯೆ ಬಗೆಹರಿಸಬೇಕು. 1961ರ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರೈತ ಸಂಸ್ಕೃತಿಯನ್ನೇ ನಾಶ ಮಾಡಿ ಕೃಷಿ ಭೂಮಿ ಕಾರ್ಪೊರೇಟ್‌ ಕಂಪನಿಗಳ ವಶವಾಗಲು ಅನುವು ಮಾಡಲಾಗುತ್ತಿದೆ. ಕೂಡಲೇ ಈ ತಿದ್ದಪಡಿ ಕಾಯ್ದೆಯನ್ನು ವಾಪಸ್‌ ಪಡೆಯಬೇಕು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ. ಹೀಗಾಗಿ ಎಪಿಎಂಸಿಗಳು ಕಾಯಂ ಆಗಿ ಮುಚ್ಚಲಿವೆ. ಆದ್ದರಿಂದ ಈ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ, ತಾಲೂಕು ಅಧ್ಯಕ್ಷ ವೀರನಗೌಡ ಹಟ್ಟಿ, ಮಲ್ಲಣ್ಣ ಗೌಡೂರು, ಸಿದ್ದೇಶ ಗೌಡೂರು, ಬಸನಗೌಡ ಮಟ್ಟೂರು, ಗಂಗಾಧರ ನೆಲೋಗಿ, ದುರಗೇಶ ಸುಲ್ತಾನಪುರ, ಮಾಳಿಂಗರಾಯ ಇತರರು ಇದ್ದರು.

Continue

Leave a Reply

Your email address will not be published. Required fields are marked *

Back to top button
Close
Close